ಬೀದರ್

ಪ್ರಾಧಿಕಾರದ ಅಧ್ಯಕ್ಷರಿಗೆ ವೀರ ಕನ್ನಡಿಗರ ಸೇನೆಯಿಂದ ಮನವಿ

ಬೀದರಃ ಪೂಜ್ಯ ಡಾ. ಚನ್ನಬಸವ ಪಟ್ಟದೇವರು, ಜಿಲ್ಲಾ ರಂಗಮAದಿರದಲ್ಲಿ ರವಿವಾರ ಸಂಜೆ ನಡೆದ ಸಭೆಯಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರದ  ಡಾ. ಪುರುಷೋತ್ತಮ ಬಿಳಮಲೆ, ಕಾರ್ಯದರ್ಶಿ.  ಡಾ. ಸಂತೋಷ ಹಾನಗಲ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಸಿದ್ರಾಮ ಸಿಂಧೆ, ರವರಿಗೆ ಬೀದರ ನಗರದ ಶಿಕ್ಷಕರ ಗುರುಭವನ, ನವೀಕರಿಸಿ ಶೈಕ್ಷಣಿಕ ಕಾರ್ಯಚಟುವಟಿಕಗಳಿಗೆ ಉಪಯೋಗಿಸುವಂತೆ ಸಂಬAಧಿಪಟ್ಟ ಅಧಿಕಾರಿಗಳಿಗೆ ಸೂಚಿಸಿಬೇಕೆಂದು ಒತ್ತಾಯಿಸಿ, ಬೀದರ ನಗರದ ಕಮಠಾಣ ರಸ್ತೆಯಲ್ಲಿರುವ ಕರ್ನಾಟಕ ಪಶುವೈದ್ಯಕೀಯ ಪಶು ಹಾಗೂ ಮೀನುಗಾರಿಕೆ ವಿಶ್ವವಿದ್ಯಾಲಯದಲ್ಲಿ ಕನ್ನಡೇತರ ಅಭ್ಯಾರ್ಥಿಯಾದ ಕೇರಳ ಮೂಲದ  ಮನೋಜಕುಮಾರ ರವರಿಗೆ ಪ್ರಧ್ಯಾಪಕ ಹುದ್ದೆಯನ್ನು ನೇಮಕಾತಿ ಮಾಡಿ ಹತ್ತುವರ್ಷಗಳು ಕಳದಿವೆ. ಇವರಿಗೆ ಕನ್ನಡ ಓದಲು, ಬರೆಯಲು ಮಾತನಾಡಲು ಬರುವುದಿಲ್ಲ. ಇಂಥವರಿಗೆ ಪ್ರಾಧ್ಯಪಕ ಹುದ್ದೆಗೆ ನೇಮಕಮಾಡಿರುವುದು, ನೇಮಕಾತಿ ಸಮಿತಿಯ ಭ್ರಷ್ಟಚಾರ ತೋರಿಸುತ್ತದೆ. ಹತ್ತುವರ್ಷ ಕಳೆದರು, ಕನ್ನಡ ಸಾಹಿತ್ಯ ಪರಿಷತ್ತು ನಡೆಸುವ ಜಾಣ, ಕಾವ್ಯ ರತ್ನ ಪರೀಕ್ಷೆ ಬರೆದು ಪಾಸಾಗುವ ಸೂಚನೆಯನ್ನು ಮನೋಜಕುಮಾರ ರವರಿಗೆ ನೀಡಿರುವುದಿಲ್ಲ. ಕನ್ನಡ ನಾಡಿನಲ್ಲಿ ಲಕ್ಷಾನುಗಂಟಲೆ  ವಿದ್ಯಾವಂತ ನಿರುದ್ಯೋಗಿಗಳಿದ್ದಾರೆ. ಅವರಿಗೆ ಉದ್ಯೋಗವನ್ನು ಕೊಡುವ ಕೆಲಸವನ್ನು ಸರ್ಕಾರ, ಪ್ರಾಧಿಕಾರ ಮಾಡಬೇಕು.
ಕರ್ನಾಟಕ ರಾಜ್ಯದಲ್ಲಿರುವ ಪ್ರತಿಯೊಂದು ವಿಶ್ವವಿದ್ಯಾಲಯದಲ್ಲಿ ಖಾಲಿ ಇರುವ ಹುದ್ದೆಗಳು ವಿಷಯ ಅರ್ಹತೆ ಜೋತೆಗೆ ಕನ್ನಡ ಪರೀಕ್ಷೆ ಪಾಸಾದವರಿಗೆ ನೇಮಕಾತಿ ಮಾಡುವಲ್ಲಿ ಮೊದಲ ಅಧ್ಯಾತೆಯನ್ನು ನೀಡಬೇಕೆಂದು ವೀರ ಕನ್ನಡಿಗರ ಸೇನೆ ರಾಜ್ಯ ಸಂಚಾಲಕ ಡಾ. ಸುಬ್ಬಣ್ಣ ಕರಕನಳ್ಳಿ ಆಗ್ರಹ ಮಾಡಿದ್ದಾರೆ.

Ghantepatrike kannada daily news Paper

Leave a Reply

error: Content is protected !!