ಬೀದರ್

ಪರಿಸರ ಮಾಲಿನ್ಯ ಹೆಚ್ಚಾದರೆ ಜಗತ್ತಿನ ತಾಪಮಾನ ಹೆಚ್ಚಾಗುತ್ತದೆ ಸಚಿವ ಈಶ್ವರ ಬಿ. ಖಂಡ್ರೆ

ಬೀದರ, ಜುಲೈ 24 – ಪರಿಸರ ಮಾಲಿನ್ಯ ಹೆಚ್ಚಾದರೆ ಜಗತ್ತಿನ ತಾಪಮಾನ ಹೆಚ್ಚಾಗುತ್ತದೆ ಹಾಗಾಗಿ ಗಿಡ-ಮರಗಳನ್ನು ಬೆಳೆಸುವ ಮೂಲಕ ನಾವೆಲ್ಲರೂ ಸೇರಿ ಪರಿಸರ ಸಂರಕ್ಷಣೆ ಮಾಡಬೇಕಾಗಿದೆ ಎಂದು ಅರಣ್ಯ ಪರಿಸರ ಮತ್ತು ಜೀವಿಶಾಸ್ತç ಸಚಿವರು ಹಾಗೂ ಬೀದರ ಜಿಲ್ಲಾ ಉಸ್ತುವಾರಿ ಸಚಿವರಾದ ಈಶ್ವರ ಬಿ. ಖಂಡ್ರೆ ಹೇಳಿದರು.
ಅವರು ಸೋಮವಾರ ಅರಣ್ಯ ಇಲಾಖೆ ಬೀದರ ವತಿಯಿಂದ ಸರ್ಕಾರಿ ಪ್ರೌಢ ಶಾಲೆ, ಬಸವೇಶ್ವರ ವೃತ್ತ ಹಾಗೂ ಬಿ.ಕೆ.ಐ.ಟಿ ಇಂಜಿನೀಯರಿAಗ್ ಕಾಲೇಜು ಆವರಣ ಭಾಲ್ಕಿಯಲ್ಲಿ ಹಮ್ಮಿಕೊಂಡಿದ್ದ ವನಮಹೋತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

ಪರಿಸರ ಇದ್ದರೆ ಎಲ್ಲಾ ಮನುಷ್ಯರು ಜೀವಂತವಾಗಿರುತ್ತಾರೆ ಯಾರು ಪ್ರಕೃತಿಯನ್ನು ಸಂರಕ್ಷಣೆ ಮಾಡುತ್ತಾರೆ ಅವರಿಗೆ ಪರಿಸರ ಸಂರಕ್ಷಣೆ ಮಾಡುತ್ತದೆ. ನಾವು ಈಗ ಇಪ್ಪತ್ತೊಂದನೇ ಶತಮಾನದಲ್ಲಿದ್ದು, ಆಹಾರ, ಗಾಳಿ, ವಾಯು ಹೆಚ್ಚಿನ ಪ್ರಮಾಣದಲ್ಲಿ ಮಲಿನವಾಗುತ್ತಿದೆ. ಹಾಗಾಗಿ ಪ್ರಕೃತಿ ಸಂರಕ್ಷಣೆ ಮಾಡುವದರ ಜೊತೆಗೆ ನಾವು ಅಭಿವೃದ್ದಿ ಹೊಂದಬೇಕಾಗಿದೆ ಎಂದರು.
ಹೆಚ್ಚು ಗಿಡ-ಮರಗಳು ನಮಗೆ ಅಮ್ಲಜನಕವನ್ನು ನೀಡುತ್ತವೆ. ಕರೋನಾ ಸಂದರ್ಭದಲ್ಲಿ ಹೆಚ್ಚು ಜನರು ಏಕೆ ಸತ್ತರೂ ಗೊತ್ತೆ? ಅಮ್ಲಜನಕದ ಕೊರತೆಯಿಂದಾಗಿ ಲಕ್ಷಾಂತರ ಜನರು ಜಗತ್ತಿನಲ್ಲಿ ತಮ್ಮ ಪ್ರಾಣವನ್ನು ಕಳೆದುಕೊಂಡರು. ಮನುಷ್ಯ ಹುಟ್ಟಿದ್ದು ಪಂಚಭೂತಗಳಿAದ ಗಾಳಿ, ನೀರು, ಆಹಾರ, ಭೂಮಿ ನಾವು ಜೀವಿಸಲು ಇವುಗಳು ಅತ್ಯವಶ್ಯಕವಾಗಿವೆ ಎಂದ ಅವರು ಯುವ ಪೀಳಿಗೆ ನಮಗೆ ನೆನಪಿಡಬೇಕಾದರೇ ಅವರಿಗಾಗಿ ನಾವು ಪರಿಸರವನ್ನು ಸಂರಕ್ಷಣೆ ಮಾಡಬೇಕಾಗಿದೆ ಎಂದರು.
ಜಗತ್ತಿನಲ್ಲಿ ಭೌಗೋಳಿಕವಾಗಿ ಶೇ. 33 ಪ್ರತಿಶತ ಅರಣ್ಯವಿರಬೇಕು. ನಮ್ಮ ರಾಜ್ಯದಲ್ಲಿ ಶೇ. 22 ಪ್ರತಿಶತ. ಬೀದರ ಜಿಲ್ಲೆಯಲ್ಲಿ ಶೇ. 7 ರಿಂದ 8 ಪ್ರತಿಶತ ಅರಣ್ಯ ಪ್ರದೇಶವಿದ್ದು, ಇದನ್ನೂ ಪ್ರತಿ ವರ್ಷ ಒಂದು, ಎರಡೂ ಪ್ರತಿಶತ ಹೆಚ್ಚಿಸಿದರೆ ಅರಣ್ಯ ಕ್ಷೇತ್ರ ಹಸಿರು ಮಾಡಬಹುದಾಗಿದೆ. ಬೀದರ ಜಿಲ್ಲೆಯಲ್ಲಿ ಈಗಾಗಲೇ ವನಮಹೋತ್ಸವ ಕಾರ್ಯಕ್ರಮ ಮಾಡಲಾಗಿದ್ದು, ಜಿಲ್ಲೆಯಲ್ಲಿ 15 ಲಕ್ಷ ಸಸಿ ನೆಡುವ ಗುರಿ ಇದ್ದು, ಈಗಾಗಲೇ 8 ಲಕ್ಷಕ್ಕೂ ಹೆಚ್ಚು ಸಸಿಗಳನ್ನು ನೆಟ್ಟಿರುವುದು ಮಾತ್ರವಲ್ಲದೇ ಅವುಗಳ ಪಾಲನೆ-ಪೋಷಣೆ ಮಾಡಲಾಗುವುದು ಎಂದರು.


ನಮ್ಮ ಜಿಲ್ಲೆಯಲ್ಲಿ ಶ್ರೀಗಂಧ, ಸಾಗುವಾನಿ, ಮಾವು ಸೇರಿದಂತೆ ಇತರೆ ಗಿಡ-ಮರಗಳು ಬೆಳೆಯಲು ಪೂರಕ ವಾತಾವರಣವಿದ್ದು, ಎಲ್ಲರೂ ಹೆಚ್ಚಿನ ಸಂಖ್ಯೆಯಲ್ಲಿ ಸಸಿಗಳನ್ನು ನೆಡುವ ಮೂಲಕ ಜಿಲ್ಲೆಯನ್ನು ಹಸಿರಾಗಿಸಬೇಕು. ವನಮಹೋತ್ಸವದ ಅಂಗವಾಗಿ ರಾಜ್ಯದಲ್ಲಿ 5 ಕೋಟಿಗಿಂತ ಹೆಚ್ಚು ಸಸಿಗಳನ್ನು ನೆಡಲಾಗುತ್ತಿದೆ. ಇಂದು ಭಾಲ್ಕಿಯಲ್ಲಿ ದಾಖಲೆಯಂತೆ ಒಂದೇ ದಿನ 5,800 ಸಸಿಗಳನ್ನು ನೆಡಲಾಗುತ್ತಿದೆ. ಬೀದರ ಜಿಲ್ಲೆಯಲ್ಲಿ ಕೃಷ್ಣಮೃಗಗಳ ಸಂರಕ್ಷಿತ ಮೀಸಲು ವಲಯವನ್ನು ಸ್ಥಾಪಿಸಲು ಸನ್ಮಾನ್ಯ ಮುಖ್ಯಮಂತ್ರಿಗಳಿಗೆ ಹೇಳಿ ಘೋಷಣೆ ಮಾಡಿಸಿದ್ದೇನೆ. ಇಂದು ಈ ಕಾರ್ಯಕ್ರಮದಲ್ಲಿ ವಿವಿಧ ಶಾಲಾ- ಕಾಲೇಜಿನ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದು, ನೊಡಿ ತುಂಬಾ ಸಂತೋಷವಾಗುತ್ತಿದೆ. ಎಲ್ಲರೂ ಸಸಿಗಳನ್ನು ತೆಗೆದುಕೊಂಡು ಹೋಗಿ ತಮ್ಮ ಮನೆ, ಶಾಲಾ-ಕಾಲೇಜುಗಳ ಆವರಣ, ಹೊಲ-ಗದ್ದೆಗಳಲ್ಲಿ ನೆಡಬೇಕೆಂದು ಹೇಳಿದರು.
ಕರ್ನಾಟಕ ಸರ್ಕಾರದ ಅರಣ್ಯ ಪರಿಸರ ಮತ್ತು ಜೀವಿಶಾಸ್ತçದ ಅಪರ ಮುಖ್ಯ ಕಾರ್ಯದರ್ಶಿಗಳಾದ ಜಾವೆದ್ ಅಖ್ತರ್ ಅವರು ಮಾತನಾಡಿ ಕಾರ್ಯಕ್ರಮಗಳು ಹೆಚ್ಚಾಗಿ ದೊಡ್ಡ-ದೊಡ್ಡ ನಗರಗಳಲ್ಲಿಯೆ ಆರಂಭಿಸಲಾಗುತ್ತದೆ. ಆದರೆ ಇಂದು ಈ ಕಾರ್ಯಕ್ರಮವನ್ನು ತಾಲೂಕು ಮಟ್ಟದಲ್ಲಿ ಮಾಡುವುದರ ಉದ್ದೇಶ ಸಾಮಾನ್ಯ ಜನರಿಗೂ ಪರಿಸರದ ಬಗ್ಗೆ ಮಾಹಿತಿ ತಲುಪಬೇಕೆಂಬುದಾಗಿದೆ. ಪ್ರಕೃತಿ ಪರಿಸರ ಹಾನಿಯಿಂದಾಗಿ ಹಲವಾರು ಪ್ರಕೃತಿ ವಿಕೋಪಗಳು ಸಂಭವಿಸುತ್ತಿವೆ. ಹಾಗಾಗಿ ಪರಿಸರ ಸಮತೋಲನವಾಗಬೇಕಾದರೆ ನಾವು ಹೆಚ್ಚು-ಹೆಚ್ಚು ಗಿಡ-ಮರಗಳನ್ನು ಬೆಳೆಸಬೇಕೆಂದು ಹೇಳಿದರು.
ವೇದಿಕೆ ಕಾರ್ಯಕ್ರಮದ ನಂತರ ಸಚಿವರು ಬಿ.ಕೆ.ಐ.ಟಿ ಇಂಜಿನೀಯರಿAಗ್ ಕಾಲೇಜಿನ ಆವರಣದಲ್ಲಿ ಶಾಲಾ ಮಕ್ಕಳೊಂದಿಗೆ ಸಸಿಗಳನ್ನು ನೆಟ್ಟು ಎಲ್ಲರ ಗಮನ ಸೆಳೆದರು.
ಈ ಕಾರ್ಯಕ್ರಮದಲ್ಲಿ ವಿಧಾನ ಪರಿಷ್ಯತ ಸದಸ್ಯರಾದ ಅರವಿಂದ ಕುಮಾರ ಅರಳಿ, ಕರ್ನಾಟಕ ರಾಜ್ಯ ಹಜ್ ಸಮಿತಿ ಅಧ್ಯಕ್ಷರಾದ ರವೂಫುದ್ಧಿನ್ ಕಚೇರಿವಾಲೆ, ಪ್ರಧಾನ ಅರಣ್ಯ ಸಂರಕ್ಷಣಾಧಿಕಾರಿ (ಅರಣ್ಯ ಪಡೆ) ರಾಜೀವ್ ರಂಜನ್, ಜಿಲ್ಲಾಧಿಕಾರಿ ಗೋವಿಂದರೆಡ್ಡಿ, ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶಿಲ್ಪಾ. ಎಂ, ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಚನ್ನಬಸವಣ್ಣ ಎಸ್.ಎಲ್, ಬಿ.ಕೆ.ಐ.ಟಿ ಇಂಜಿನೀಯರಿAಗ್ ಕಾಲೇಜಿನ ಪ್ರಾಂಶುಪಾಲರಾದ ನಾಗಶೆಟ್ಟೆಪ್ಪಾ ಬಿರಾದಾರ, ಜಿಲ್ಲಾ ಕಾಂಗ್ರೇಸ್ ಅಧ್ಯಕ್ಷರಾದ ಬಸವರಾಜ ಜಾಬಶೆಟ್ಟಿ, ಬೀದರ ವಿಭಾಗ ಪ್ರಾದೇಶಿಕ ಉಪ ಅರಣ್ಯ ಸಂರಕ್ಷಣಾಧಿಕಾರಿ ವಾನತಿ ಎಂ.ಎA, ಬಸವಕಲ್ಯಾಣ ಸಹಾಯಕ ಆಯುಕ್ತರಾದ ರಮೇಶ ಕೊಲಾರ, ಬೀದರ ಸಮಾಜಿಕ ಅರಣ್ಯ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಎ.ಬಿ. ಪಾಟೀಲ್ ಸೇರಿದಂತೆ ಇತರೆ ಅಧಿಕಾರಿಗಳು ಹಾಗೂ ವಿವಿಧ ಶಾಲಾ-ಕಾಲೇಜಿನ ವಿದ್ಯಾರ್ಥಿಗಳು, ಶಿಕ್ಷಕರು ಸೇರಿದಂತೆ ಹಲವಾರು ಜನರು ಉಪಸ್ಥಿತರಿದ್ದರು.

Ghantepatrike kannada daily news Paper

Leave a Reply

error: Content is protected !!