ಧಾರವಾಡ

ನೆನಪಿನಾಳದಿಂದ ಬಂದ ನನ್ನದೊಂದು ಲೇಖನ : ಚಿದಂಬರ. ಪಿ. ನಿಂಬರಗಿ

1994 ರಲ್ಲಿ ಕರ್ನಾಟಕ ಯುವ ಕವಿಗಳಿಗೆ ಮೈಸೂರಿನ ರೀಜನಲ್ ಕಾಲೇಜಿನಲ್ಲಿ ಸೈಜನಶೀಲ ಬರಹಗಾರರ ಕಮ್ಮಟವನ್ನು ಏರ್ಪಡಿಸಿದ್ದರು. ಈ ಕಮ್ಮಟಕ್ಕೆ ನಾಣು ಆಯ್ಕೆಗೊಂಡಿದ್ದೆ ರಾಜ್ಯದ ಒಟ್ಟು 40 ಯುವ ಕವಿಗಳನ್ನು ಅವ್ಹಾನಿಸಿದ್ದರು. ಅದರಲ್ಲಿ 26 ಜನ ಯುವಕರು, 14 ಜನ ಯುವತಿಯರು ಕಮ್ಮಟದಲ್ಲಿ ಭಾಗವಹಿಸಿದ್ದರು.
ಇದೊಂದು ಅಪರೂಪದ ಕಮ್ಮಟ. ಈ ಕಮ್ಮಟದಲ್ಲಿ ಪ್ರೋ. ಚಂದ್ರಶೇಖರ ಪಾಟೀಲ, ಪ್ರೋ.ಜಿ.ಎಚ್. ನಾಯಕ್, ಪ್ರೊ.ಎಚ್.ಎಂ.ಚನ್ನಯ್ಯ, ಪ್ರೊ. ಆರ್.ಎಸ್.ಶರ್ಮ, ಚ.ಸರ್ವಮಂಗಳ, ಡಾ|| ವಿಜಯ ದಬ್ಬೆ, ಶಿವರಾಮ ಕಾಡನಕುಪ್ಪೆ, ಕಿಕ್ಕೇರಿ ನಾರಾಯಣ ಇವರುಗಳು 5 ದಿನಗಳ ಕಾಲ ಜರುಗಿದ ಕಮ್ಮಟದಲ್ಲಿ ಭಾಗವಹಿಸಿ, ಯುವ ಕವಿಗಳಿಗೆ ಅನೇಕ ಸಲಹೆಗಳನ್ನು ನೀಡಿದರು, ಇವರೊಂದಿಗೆ, ಪ್ರೋ. ಹಿ.ಶಿ.ರಾಮಚಂದ್ರಗೌಡ, ಜೆ.ಪಿ. ಬಸವರಾಜ, ಮೊಗಳ್ಳಿ ಗಣೇಶ, ದೇವನೂರ ಮಹಾದೇವರು ಬಂದು ಕಮ್ಮಟದಲ್ಲಿ ತಮ್ಮ ಅನುಭವಗಳನ್ನು ನಮ್ಮೊಂದಿಗೆ ಹಂಚಿಕೊಂಡರು.
ಇನ್ನು ಈ ಕಮ್ಮಟದ ಉದ್ಘಾಟನೆಯನ್ನು ಹಿರಿಯ ಸಾಹಿತಿಗಳಾದ ದಿ.ಶ್ರೀ ಚದುರಂಗ, ನೆರವೇರಿಸಿದರು, ಕರ್ನಾಟಕದ ಆಗಿನ ಮುಖ್ಯ ಮಂತ್ರಿಗಳಾಗಿದ್ದ ಶ್ರೀ ವೀರಪ್ಪ ಮೊಯ್ಲಿ, ಮುಖ್ಯ ಅತಿಥಿಗಳಾಗಿ ಡಾ|| ಎಲ್. ಬಸವರಾಜರವರು ಅಧ್ಯಕ್ಷತೆ ವಹಿಸಿದ್ದರು. ಕೇಂದ್ರ ಪೊಯಿಟ್ರಿ ಸೊಸಾಯಟಿಯ ಕಾರ್ಯದರ್ಶಿಗಳಾಗಿದ್ದ ಎಚ್.ಕೆ.ಕೌಲ್, ಕೇಂಧ್ರ ಮಾನವ ಸಂಪನ್ಮೂಲ ಅಭಿವೃಧಿ ಖಾತೆಯ ಪ್ರತಿನಿಧಿಯಾಗಿ ಸಮಾರಂಭದಲ್ಲಿ ಭಾಗವಹಿಸಿದ್ದರು, ಹೀಗೆ ಸೃಜನಶೀಲ ಬರಗಾರರ ಕಮ್ಮಟದಲ್ಲಿ ಪ್ರತಿ ದಿನವು ಹಲವಾರು ಜನ ಹಿರಿಯ ಸಾಹಿತಿಗಳು ಬರೆದ ಕವನದ ವಿಮರ್ಶೆಯ ಜೊತೆಗೆ ನಮಗೂ ಕವನ ಬರೆಯುವ ಶೈಲಿ, ವಿಮರ್ಶೆ, ಹೀಗೆ ಎಲ್ಲಾ ರೀತಿಯಲ್ಲಿ ಮಾರ್ಗದರ್ಶನವಲ್ಲದ ತಾವು ಬರೆದ ಕವನಗಳ ಕುರಿತು ಆಯೋಜಕಗಳ ಹಲವಾರು ಆಯಾಮಗಳನ್ನು ನಮ್ಮೆಲ್ಲರೊಂದಿಗೆ ಹಂಚಿಕೊಂಡರು.
ರಾಜ್ಯದ ಬೇರೆ-ಬೇರೆ ಕಡೆಯಿಂದ ನನ್ನೊಂದಿಗೆ ಆಗಮಿಸಿದವರೆಂದರೆ ಕಿಶೋರ ಪಟವರ್ಧನ (ವಾರಣಾಸಿ) ಬಿ.ಎಸ್.ಸುರೇಶ, ಮದಸೂದನ ಬೆಳಕವಾಡಿ, ರೋಸಿ ಡಿಸೋಜಾ, ಎಂ.ಕೆ.ನಂದ, ಕೆ.ಆರ್.ಶಿಲ್ಪ. ಶಿ.ಜು.ಪಾಶ ಪ್ರತಿಭಾ ಕುಡ್ತಡ್ಕ, ವಿಕ್ರಮವಿಸಾಜಿ (ಬಾಲ್ಕಿ) ಎಚ್.ಎನ್.ಗಾಯತ್ರಿ (ಬೆಂಗಳೂರು) ಎಂ.ಎಸ್.ಶೋಭ, ಟಿ.ಎಚ್.ರಂಗನಾಥ, ಶುಭ ಮರವಂತೆ ಶಿವಮೊಗ್ಗ, ಅವಿಶಾಶ ರಾಜ್, ಸಿ.ರವಿಕುಮಾರನ್, ಶರಣು ಬಳಿಗೇರ, ಬಿ.ಎಸ್.ಜಯಪ್ರಕಾಶ ನಾರಾಯಣ, ಎಚ್.ಸಿ.ರಗುನಾಥ, ವಿಶ್ವೇಶ್ವರ ಗಾಂವ್ಕರ, ಪದ್ಮಾ ಸಿಂಧನೂರು, ಹನೂರು ಚನ್ನಪ್ಪ, ಸುಷ್ಮಾ ಕೌಲಗಿ, ಕೆ.ಕರಿಸ್ವಾಮಿ, ಕೃಷ್ಣ ಅಮಾಸೆ ಬೈಲು. ಶಿವಕುಮಾರ ಉಪ್ಪಿನ, ಎಂ. ಮಂಜುನಾಥ, ಬೊಮ್ಮನಕಟ್ಟೆ, ಅನ್ವರ ಭಾಷಾ ಹುಬ್ಬಳ್ಳಿ, ಸಿ.ಅನಿಲಕುಮಾರ ವಿ.ಶಿವಪ್ಪ, ಸಿ.ಹೇಮ, ಎನ್.ರಾಮಚಂದ್ರ, ಹರೀಶ ಹೂಲಿ, ಬಿ.ಎಸ್.ಶಶಿಕಲಾ ಬಂದಿದ್ದರು.
ಇವರೆಲ್ಲರೊಂದಿಗೆ ಕಳೆದ ಕಮ್ಮಟ ನಿಜಕ್ಕೂ ಎಲ್ಲರಿಗೂ ಸಾಹಿತ್ಯ ಕ್ಷೇತ್ರದಲ್ಲಿ ಬೆಳೆಯಲು ಸಾಧ್ಯವಾಯಿತು. ಅಲ್ಲದೆ, ಹಿರಿಯ ಸಾಹಿತಿಗಳೊಂದಿಗೆ, ನಮ್ಮೆಲ್ಲರ ಒಡನಾಟಕ್ಕೆ ಕೊಂಡಿಯಾಯಿತು. ಇನ್ನು ನಾವೆಲ್ಲರು ಬರದ ಕವನಗಳ “ಹದಿಹೆಜ್ಜೆ” ಸಂಕಲನ ಕನ್ನಡ ಆಂಗ್ಲ ಭಾಷೆಯಲ್ಲಿ ಪ್ರಕಟಣೆಯಾಯಿತು, ಶ್ರೀ.ಎನ್.ಎಸ್. ರಘುನಾಥ ರವರು ಈ ಎಲ್ಲ ಕಮ್ಮಟದ ಕೇಂಧ್ರ ಬಿಂದುಗಳಾಗಿ ಮತ್ತು ರೀಜನಲ್ ಕಾಲೇಜಿನ ಪ್ರಂಶುಪಾಲರಾಗಿದ್ದ ಡಾ|| ಸಿ.ಶ್ರೇಷಾದ್ರಿಯವರು ಈ ಕಮ್ಮಟ ನಡೆಸುವ ವಿಚಾರವನ್ನು ಹುಟ್ಟುಹಾಕಿದ್ದು ಎಂದರೆ ತಪ್ಪಾಗಲಿಕ್ಕಿಲ್ಲಾ.
ಈ ಕಮ್ಮಟದಲ್ಲಿ ಬಂದ ಅನೇಕರು ಸಂಪರ್ಕದಲಿಲ್ಲ. ಕೆಲವರು ಮಾತ್ರ ಸಂಪರ್ಕದಲ್ಲಿದ್ದು ಇನ್ನೂ ಹಲವಾರು ಜನ ಸಂಪರ್ಕದಲ್ಲಿ ಇಲ್ಲಾ. ಆದುದರಿಂದ ಕಮ್ಮಟದಲ್ಲಿ ಸೇರಿದವರೆನ್ನು ಮತ್ತೊಮ್ಮೆ ಒಂದು ಕಡೆ ಸೇರಿಸಬೇಕೆಂಬ ಆಲೋಚನೆಯಿದೆ. ಆದ್ದರಿಂದ ಈ ಕಮ್ಮಟದಲ್ಲಿದ್ದವರು ಸಂಪರ್ಕಿಸಿದರೆ. ಮತ್ತೊಮ್ಮೆ ಎಲ್ಲರೂ ಸೇರಲು ಸಾಧ್ಯವಾಗುವುದು ಎಂಬ ದೃಷ್ಟಿಕೋನದಿಂದಲೇ ಈ ಲೇಖನವನ್ನು ಬರೆದಿರುವೆ.

Ghantepatrike kannada daily news Paper

Leave a Reply

error: Content is protected !!