ನನ್ನ ಮಣ್ಣು ನನ್ನ ದೇಶವೆಂದು ಪ್ರತಿಯೊಬ್ಬರು ಕೈಯಲ್ಲಿ ಮಣ್ಣು ಹಿಡಿದು ಪ್ರತಿಜ್ಞೆ
ಯರನಳ್ಳಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಬರುವ ಯರನಳ್ಳಿ ಗ್ರಾಮದಲ್ಲಿ ಸರಕಾರಿ ಶಾಲೆಯ ಹತ್ತಿರ ಇರುವ ಕೆರೆಯ ಮೇಲೆ ಅಮೃತ ಸರೋವರ ಯೋಜನೆ ಶಿಲಾ ಫಲಕವನ್ನು ಕಟ್ಟಿ ಹಾಗೂ ರಾಷ್ಟç ಧ್ವಜಾರೋಹಣ ಮಾಡಿ, ಪ್ರಧಾನಮಂತ್ರಿ 2047 ರ ಘೋಷವಾಕ್ಯ ಮುಖ್ಯಮಂತ್ರಿಗಳ ಘೋಷವಾಕ್ಯ, ಬಸವಣ್ಣನವರ ಘೋಷವಾಕ್ಯ, ಮಾತೃ ಭೂಮಿ ಘನತೆ ಹಾಗೂ ಸ್ವತಂತ್ರ ಕಾಪಾಡಲು ತಮ್ಮ ಪ್ರಾಣ ತ್ಯಾಗ ಮಾಡಿದ ವೀರರಿಗೆ ಪ್ರಣಾಮಗಳು ಹೇಳುತ್ತಾ, ನನ್ನ ಮಣ್ಣು ನನ್ನ ದೇಶವೆಂದು ಪ್ರತಿಯೊಬ್ಬರು ಕೈಯಲ್ಲಿ ಮಣ್ಣು ಹಿಡಿದು, ಸಸಿ ನೆಡಲಾಯಿತು ಹಾಗೆಯೇ ಪ್ರತಿಜ್ಞೆ ಮಾಡಲಾಯಿತು.
ಧ್ವಜಾರೋಹಣ ಕಾರ್ಯವನ್ನು ಮಾಜಿ ಸೈನಿಕರಾದ ವೈಜಿನಾಥ ಬಾಪುರಾವ ಬಾವಗೆ ಯರನಳ್ಳಿ, ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಾದ ಪ್ರೇಮಿಳಾ ನಿಮ್ಮೆಕರ್, ಗ್ರಾಮ ಪಂಚಾಯತ್ ಅಧ್ಯಕ್ಷರು ಹಸಿನಾ ಬೇಗಂ, ಉಪಾಧ್ಯಕ್ಷರಾದ ರೇಷ್ಮಾ ಗಂಡ ವೈಜಿನಾಥ, ಸದಸ್ಯರುಗಳಾದ ವಿಜಯಕುಮಾರ ಅನಕಲೆ, ನೀಲಕಂಠ ದೇಶಮುಖ ಹಾಗೂ ಗ್ರಾಮಸ್ಥರು ಇನ್ನೀತರರು ಉಪಸ್ಥಿತರಿದ್ದರು.