ದೇಶದ ಸ್ವಾತಂತ್ರö್ಯಕ್ಕೆ ಅನೇಕರ ತ್ಯಾಗ ಬಲಿದಾನಗಳಿವೆ-ಸಚಿವ ಈಶ್ವರ ಬಿ.ಖಂಡ್ರೆ
ಅವರು ಗುರುವಾರ ಜಿಲ್ಲಾಡಳಿತ ಬೀದರ ವತಿಯಿಂದ ಜಿಲ್ಲಾ ನೆಹರು ಕ್ರೀಡಾಂಗಣದಲ್ಲಿ ಹಮ್ಮಿಕೊಂಡಿದ್ದ 78ನೇ ಸ್ವಾತಂತ್ರೊö್ಯÃತ್ಸವ ದಿನಾಚರಣೆ ಕಾರ್ಯಕ್ರಮದಲ್ಲಿ ರಾಷ್ಟç ಧ್ವಜಾರೋಹಣ ನೆರವೇರಿಸಿ ಮಾತನಾಡಿದರು.
1857ರ ಸಿಪಾಯಿ ದಂಗೆಯಿAದ ಅನೇಕ ಹೋರಾಟಗಳು ನಡೆದಿವೆ, ನಮ್ಮ ರಾಷ್ಟçಪಿತ ಮಹಾತ್ಮಾ ಗಾಂಧಿಜೀ, ಬಾಲಗಂಗಾಧರ ತಿಲಕ, ಸುಖದೇವ, ರಾಜಗುರು, ಪಂಡಿತ್ ಜವಾಹರಲಾಲ ನೆಹರು, ಸರ್ದಾರ್ ವಲ್ಲಭಾಯಿ ಪಟೇಲ್, ನೇತಾಜಿ ಸುಭಾಷಚಂದ್ರ ಬೋಸ್ ಸೇರಿದಂತೆ ಇನ್ನು ಅನೇಕರ ಬಹಳಷ್ಟು ತ್ಯಾಗ್, ಬಲಿದಾನಗಳಿವೆ. ಇಂದು ಕ್ರಾಂತಿವೀರ ಸಂಗೋಳ್ಳಿ ರಾಯಣ್ಣನವರ ಜನ್ಮ ದಿನ ಇರುವುದರಿಂದ ಅವರನ್ನು ಸ್ಮರಿಸೋಣ ಎಂದರು.
ಬೀದರ್ ಜಿಲ್ಲೆಯಲ್ಲಿ ಕೂಡ ಹಲವಾರು ಸ್ವಾತಂತ್ರö್ಯ ಹೋರಾಟಗಾರರು ದೇಶದ ಸ್ವರಾಜ್ಯಕ್ಕಾಗಿ ಹೋರಾಡಿದ್ದಾರೆ. ಪ್ರಭುರಾವ ಕಂಬಳಿವಾಲೆ, ಆರ್.ವಿ.ಬಿಡಪ್ಪನವರು, ಭೀಮಣ್ಣಪ್ಪ ಮಜಗೆ, ರಂಗನಾಥರಾವ್ ಸಾಯಗಾಂವಕರ್, ಮಹಾದೇವಪ್ಪ ಲೋಖಂಡೆ, ಕಾಶಪ್ಪ ಖಂಡ್ರೆ, ನನ್ನ ಪೂಜ್ಯ ತಂದೆಯವರಾದ ಶತಾಯುಷಿ ಭೀಮಣ್ಣ ಖಂಡ್ರೆ ಮೊದಲಾದವರು ಸ್ವಾತಂತ್ರö್ಯ ಸಂಗ್ರಾಮದಲ್ಲಿ ಸಕ್ರಿಯವಾಗಿ ಭಾಗಿಯಾಗಿದ್ದರು. ಅವರೆಲ್ಲರಿಗೂ ನಾನು ಈ ಸಂದರ್ಭದಲ್ಲಿ ಭಕ್ತಿಪೂರ್ವಕ ನಮನಗಳನ್ನು ಸಲ್ಲಿಸುತ್ತೇನೆ.
ಭಾರತವು ಜಾತ್ಯಾತೀತ ರಾಷ್ಟçವಾಗಿದ್ದು ಇಲ್ಲಿ ವಿವಿಧತೆಯಲ್ಲಿ ಏಕತೆ ಕಾಣುತ್ತೇವೆ. ಇನ್ನು ನಮ್ಮ ದೇಶದಲ್ಲಿ ಅನಕ್ಷರತೆ, ಬಡತನ ಸೇರಿದಂತೆ ಹಲವಾರು ಸಮಸ್ಯೆಗಳಿವೆ, ದೇಶದಲ್ಲಿ ಒಬ್ಬ ಬಡವನಿಂದ ಹಿಡಿದು ಅಗರ್ಭ ಶ್ರೀಮಂತನಿಗೂ ಸಂವಿಧಾನದಲ್ಲಿ ಒಂದೇ ಮತವನ್ನು ಹಾಕಲು ಡಾ.ಬಿ.ಆರ್.ಅಂಬೇಡ್ಕರ್ ಅವರು ಎಲ್ಲರಿಗೂ ಸಮಾನ ಹಕ್ಕುಗಳನ್ನು ನೀಡಿದ್ದಾರೆ. ದುರ್ಬಲ ಶೋಷಿತರಿಗೆ ಮೇಲೆತ್ತುವ ಯೋಜನೆ ಹಾಕಬೇಕಾಗಿದೆ. ಜಗತ್ತಿಗೆ ಮೊದಲ ಪಾರ್ಲಿಮೆಂಟ್ ಕೊಟ್ಟ ಬಸವಕಲ್ಯಾಣ ನಮ್ಮ ಜಿಲ್ಲೆಯಲ್ಲಿದೆ. ಇಲ್ಲಿ ಹಲವಾರು ಧರ್ಮ, ಜಾತಿ, ಜನಾಂಗಗಳಿದ್ದರು ನಾವೆಲ್ಲರೂ ಸಹೋದರರಂತೆ ಬಾಳುತ್ತಿದ್ದೇವೆ ಎಂದು ಹೇಳಿದರು.
ಬಂಧುಗಳೇ ದೇಶ 78ನೇ ಸ್ವಾತಂತ್ರö್ಯ ದಿನವನ್ನು ಸಂಭ್ರಮ, ಸಡಗರದಿಂದ ಆಚರಿಸುತ್ತಿರುವ ಈ ಸಂದರ್ಭದಲ್ಲಿ ಬೀದರ್ ಜಿಲ್ಲೆಯ ವಿವಿಧ ಇಲಾಖೆಯಗಳ ಸಾಧನೆಯ ಸಿಂಹಾವಲೋಕನ ಮತ್ತು ಭವಿಷ್ಯದ ಯೋಜನೆಗಳ ಬಗ್ಗೆ ಪಕ್ಷಿನೋಟ ಬೀರಲು ನಾನು ಇಚ್ಛಿಸುತ್ತೇನೆ.
ಸರ್ಕಾರದ ಮಹತ್ವಕಾಂಕ್ಷಿ 5 ಗ್ಯಾರಂಟಿ ಯೋಜನೆಗಳಾದ ಶಕ್ತಿ ಯೋಜನೆ, ಗೃಹ ಜ್ಯೋತಿ, ಗೃಹಲಕ್ಷಿö್ಮÃ, ಅನ್ನಭಾಗ್ಯ, ಯುವನಿಧಿ ಯೋಜನೆಗಳು ಈಗಾಗಲೇ ಜಾರಿ ಮಾಡಲಾಗಿದ್ದು, ಈ ಯೋಜನೆಗಳ ಲಾಭವನ್ನು ಜಿಲ್ಲೆಯಲ್ಲಿ ಸಾರ್ವಜನಿಕರು ಪಡೆಯುತ್ತಿದ್ದಾರೆ. ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯಿAದ ಬೀದರ ಜಿಲ್ಲೆಗೆ 470 ಕೋಟಿ ರೂ. ಅನುದಾನ ಬಂದಿದ್ದು ಅದರಲ್ಲಿ 120 ಕೋಟಿ ರೂ. ಅಕ್ಷರ ಆವಿಷ್ಕಾರ ಯೋಜನೆಯಡಿ ಶಿಕ್ಷಣ ಕ್ಷೇತ್ರಕ್ಕೆ ಖರ್ಚು ಮಾಡಲಾಗುತ್ತಿದೆ. ವಿವಿಧ ಶಾಲಾ ಕೋಠಡಿಗಳು, ಆಟದ ಮೈದಾನ ಸೇರಿದಂತೆ ಇತರೆ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ಶಿಕ್ಷಣದ ಅಭಿವೃದ್ಧಿಗೆ ಒತ್ತು ನೀಡಲಾಗುತ್ತಿದೆ ಎಂದು ಹೇಳಿದರು.
ಬೀದರ ಜಿಲ್ಲೆಯಲ್ಲಿ ಅರಣ್ಯ ಇಲಾಖೆಯಿಂದ 2024ನೇ ಮಳೆಗಾಲದಲ್ಲಿ 20 ಲಕ್ಷ ಸಸಿಗಳನ್ನು ನೆಡುವ ಗುರಿ ಹೊಂದಿದ್ದು, ಈಗಾಗಲೇ 15 ಲಕ್ಷ ಸಸಿಗಳನ್ನು ಜಿಲ್ಲೆಯ ವಿವಿಧ ಅರಣ್ಯ ಮತ್ತು ಅರಣ್ಯೇತರ ಪ್ರದೇಶಗಳಲ್ಲಿ ನೆಡಲಾಗಿರುತ್ತದೆ. ಇನ್ನು ಉಳಿದ ಸಸಿಗಳನ್ನು ಆಗಸ್ಟ್ 2024ರ ಅಂತ್ಯದವರೆಗೆ ನೆಡಲಾಗುವುದು. ರೈತರಿಗೆ ಮತ್ತು ಸಾರ್ವಜನಿಕರಿಗೆ ಮಾರಾಟ ಮಾಡಲು 3.972 ಲಕ್ಷ ಗುರಿ ಹೊಂದಿದ್ದು, ಇಲ್ಲಿಯವರೆಗೆ 2.931 ಲಕ್ಷ ಸಸಿಗಳನ್ನು ಮಾರಾಟ ಮಾಡಲಾಗಿರುತ್ತದೆ. ಜಿಲ್ಲೆಯಲ್ಲಿ ಕೃಷ್ಣಮೃಗ ಸಂರಕ್ಷಿತ ಪ್ರದೇಶ ಹಾಗೂ ದೇವ ದೇವವನ ಅಭಿವೃದ್ಧಿಗೆ ವಿನ್ಯಾಸ ತಯ್ಯಾರಿಸಲಾಗುತ್ತಿದೆ. ಬರುವ ನಾಲ್ಕು ವರ್ಷದಲ್ಲಿ ಜಿಲ್ಲೆಯಲ್ಲಿ ಕನಿಷ್ಠ 1 ಕೋಟಿ ಸಸಿ ನೆಟ್ಟು ಹಸಿರು ವ್ಯಾಪ್ತಿ ಹೆಚ್ಚಿಸಲಾಗುವುದು ಎಂದು ಹೇಳಿದರು.
ಬೀದರ್ ಜಿಲ್ಲೆಯ ಆರೋಗ್ಯ ಕ್ಷೇತ್ರದ ಬಲವರ್ಧನೆಗೆ ಸಂಕಲ್ಪ ಕೈಗೊಳ್ಳಲಾಗಿದೆ. ನೂತನವಾಗಿ ಪರಿಚಯಿಸಲಾಗಿರುವ ತಾತ್ಕಾಲಿಕ ವಿಧಾನವಾದ “ಸೆಬ್ಡರ್ಮಲ್ ಸಿಂಗಲ್ ರಾಡ್ ಕಾಂಟ್ರಸೆಪ್ಟಿವ್ ಇಂಪ್ಲಾAಟ್” ಗರ್ಭನಿರೋಧಕ ಚುಚ್ಚುಮದ್ದು ಬ್ರೀಮ್ಸ್ ಆಸ್ಪತ್ರೆ ಬೀದರ ಹಾಗೂ 100 ಹಾಸಿಗೆಯ ತಾಯಿ ಮಕ್ಕಳ ಆಸ್ಪತ್ರೆಯೂ ಸೇರಿ 370 ಫಲಾನುಭವಿಗಳಿಗೆ ಅಳವಡಿಸಲಾಗಿದೆ. ಬ್ರಿಮ್ಸ್ನಲ್ಲಿ 20 ಕೋಟಿ ವೆಚ್ಚದ ಕ್ಯಾಥಲ್ಯಾಬ್ ನಿರ್ಮಾಣ ಕಾರ್ಯ ನಡೆಯುತ್ತಿದೆ ಎಂದರು.
ಜಿಲ್ಲೆಯ 30 ರೈತ ಸಂಪರ್ಕ ಕೇಂದ್ರ ಮತ್ತು 115 ಹೆಚ್ಚುವರಿ ಕೇಂದ್ರಗಳ ಮುಖಾಂತರ ರೈತರಿಗೆ ಬಿತ್ತನೆ ಬೀಜವನ್ನು ಪೂರೈಸಲಾಗಿದೆ. ಸದರಿ ಯೋಜನೆಯಡಿ ಹಿಂದೆAದು ವಿತರಿಸದ 113555 ಕ್ವಿಂಟಲ್ ಬಿತ್ತನೆ ಬೀಜವನ್ನು ಸಕಾಲದಲ್ಲಿ ವಿತರಿಸಲಾಗಿದೆ. ಕಬ್ಬು ಬೆಳೆಗಾರರ ಹಣ ಪಾವತಿ ಮಾಡಬೇಕಿದೆ ಜಿಲ್ಲೆಯಲ್ಲಿ ಸ್ಪಿಂಕಲರ್ ಜಾಗೂ ತಾಡಪಾಲಗಳ ಬೇಡಿಕೆ ಹೆಚ್ಚಿದ್ದು ಕೃಷಿ ಸಚಿವರಿಗೆ ಹೆಚ್ಚಿಗೆ ಅವುಗಳನ್ನು ಜಿಲ್ಲೆಗೆ ಒದಗಿಸಲು ಹೇಳಿದ್ದೇನೆ ಎಂದರು.
ಮಾಹಾತ್ಮಾಗಾಂಧಿ ಗ್ರಾಮೀಣ ಉದೋಗಖಾತ್ರಿ ಯೋಜನೆಯಡಿ ಜಿಲ್ಲೆಯಲ್ಲಿ ಪ್ರಸಕ್ತ ಸಾಲಿನಲ್ಲಿ ಒಟ್ಟು 2,52,878 ಕುಟುಂಬಗಳು ನೋಂದಣಿಯಾಗಿವೆ. ಅವುಗಳಲ್ಲಿ ಒಟ್ಟು ಕೂಲಿಕಾರರ ಸಂಖ್ಯೆ 4,73,933 ಆಗಿದ್ದು, 2,47,444 ಕುಟುಂಬಗಳಿಗೆ ಇದೂವರೆಗೂ ಜಾಬ ಕಾರ್ಡ ಒದಗಿಸಲಾಗಿದೆ. ಈಗಾಗಲೇ 1,09,391 ಕುಟುಂಬಗಳ ಕೂಲಿಕಾರರಿಂದ 35,25,073 ಮಾನವ ಉದ್ಯೋಗ ದಿನಗಳನ್ನು ಸೃಷ್ಟಿಸಲಾಗಿದೆ. 2024-25 ನೇ ಸಾಲಿಗೆ ಪ್ರಥಮ ಪಿಯುಸಿಯಲ್ಲಿ 18497 ಮತ್ತು ದ್ವಿತೀಯ ಪಿಯುಸಿಯಲ್ಲಿ 20213 ಒಟ್ಟು 38710 ವಿದ್ಯಾರ್ಥಿಗಳು ಅಭ್ಯಾಸ ಮಾಡುತ್ತಿದ್ದಾರೆ. 2023-24 ನೇ ಸಾಲಿನ ಜಿಲ್ಲೆಯ ದ್ವಿತೀಯ ಪಿಯುಸಿ ಪರೀಕ್ಷೆಗೆ 19377 ಹಾಜರಾಗಿರುತ್ತಾರೆ. ಇದರ ಶೇಕಡಾವಾರು ಫಲಿತಾಂಶ ಶೇ.86 ಆಗಿರುತ್ತದೆ ಎಂಬುದು ಸಂತಸದ ಸಂಗತಿಯಾಗಿದೆ.
ಬೀದರ ಜಿಲ್ಲೆಯಾದ್ಯಂತ ಸಮಾಜ ಕಲ್ಯಾಣ ಇಲಾಖೆಯಡಿ ಒಟ್ಟು 16 ವಸತಿ ನಿಲಯಗಳು ಕಾರ್ಯನಿರ್ವಹಿಸುತ್ತಿದ್ದು, ಅದರಲ್ಲಿ 14 ಮೆಟ್ರಿಕ್ ನಂತರದ ಹಾಗೂ 2 ಮೆಟ್ರಿಕ್ ಪೂರ್ವ ವಸತಿ ನಿಲಯಗಳು ಒಟ್ಟು 1075 ಮಂಜೂರಾತಿ ಪೈಕಿ ಪ್ರಸ್ತುತ 753 ನವೀಕೃತ ವಿದ್ಯಾರ್ಥಿಗಳು ಪ್ರವೇಶ ಪಡೆದಿರುತ್ತಾರೆ. ಇಲಾಖೆಯಡಿಯಲ್ಲಿ ಒಟ್ಟು 5 ವಸತಿ ಶಾಲೆಗಳು 1650 ವಿದ್ಯಾರ್ಥಿಗಳ ಮಂಜೂರಾತಿಯೊAದಿಗೆ ಕಾರ್ಯನಿರ್ವಹಿಸುತ್ತಿದ್ದು, 2024-25ನೇ ಶೈಕ್ಷಣಿಕ ಸಾಲಿನಲ್ಲಿ ಒಟ್ಟು 1372 ವಿದ್ಯಾರ್ಥಿಗಳು ದಾಖಲಾತಿ ಹೊಂದಿರುತ್ತಾರೆ. ಜಿಲ್ಲೆಯಾದ್ಯಂತ ಒಟ್ಟು 10 ಮೌಲಾನಾ ಆಜಾದ ಮಾದರಿ ಶಾಲೆಗಳು 3000 ಸಂಖ್ಯಾಬಲದ ಮಂಜೂರಾತಿಯೊAದಿಗೆ ಕಾರ್ಯನಿರ್ವಹಿಸುತ್ತಿದ್ದು, 2024-25ನೇ ಶೈಕ್ಷಣಿಕ ಸಾಲಿನಲ್ಲಿ 1582 ಮಕ್ಕಳ ದಾಖಲಾತಿ ಹೊಂದಿರುತ್ತವೆ. ಕಾನೂನು ಪದವೀಧರರಿಗೆ ಶಿಷ್ಯವೇತನ ಯೋಜನೆಯಡಿ ಅಲ್ಪಸಂಖ್ಯಾತರ ಸಮುದಾಯದ ಒಟ್ಟು 3 ಅಭ್ಯರ್ಥಿಗಳು ಪ್ರತಿ ಮಾಹೆ ರೂ.5000 ಗಳಂತೆ ಶಿಷ್ಯವೇತನ ಪಡೆಯುತ್ತಿದ್ದಾರೆ.
2024-25ನೇ ಸಾಲಿಗೆ ಎಸ್.ಎಸ್.ಕೆ. ಯೋಜನೆಯಡಿಯಲ್ಲಿ 02 ಮತ್ತು ಕೆಕೆಆರ್ಡಿಬಿ ಅಕ್ಷರ ಅವಿಷ್ಕಾರ ಯೋಜೆನಯಡಿಯಲ್ಲಿ 20 ಸರಕಾರಿ ಪ್ರೌಢ ಶಾಲೆಗಳ NSQF (National Skill Quality Fremwork) ವಿಭಾಗದಲ್ಲಿ ಜಿಲ್ಲೆಯ ಒಟ್ಟು 28 ಶಾಲೆಗಳಲ್ಲಿ ಮಾಹಿತಿ ತಂತ್ರಜ್ಞಾನ ವಿಷಯವನ್ನು 9ನೇ ತರಗತಿ ವಿದ್ಯಾರ್ಥಿಗಳಿಗಾಗಿ ಪ್ರಾರಂಭಿಸಲಾಗಿದೆ. ಬಸವಕಲ್ಯಾಣ ತಾಲ್ಲೂಕಿನ ಕೆ.ಪಿ.ಎಸ್.ಗೋರ್ಟಾ ಶಾಲೆಯನ್ನು ಹಿರಿಯ ಪ್ರಾಥಮಿಕ ಶಾಲೆ ವಿಭಾಗದಿಂದ ಪ್ರೌಢ ಶಾಲೆ ವಿಭಾಗವನ್ನಾಗಿ ಉನ್ನತೀಕರಿಸಲಾಗಿದೆ. ಸರಕಾರಿ ಶಾಲೆಗಳಲ್ಲಿ ಖಾಲಿ ಇರುವ ಪ್ರಾಥಮಿಕ ಶಾಲೆಗಳ ಹುದ್ದೆಗಳಿಗೆ 632 ಮತ್ತು ಪ್ರೌಢ ಶಾಲೆಗಳಲ್ಲಿನ 287 ಖಾಲಿ ಹುದ್ದೆಗಳಿಗೆ ಅತಿಥಿ ಶಿಕ್ಷಕರನ್ನು ನೇಮಕಾತಿ ಮಾಡಲಾಗಿದೆ. ಸಿ.ಎಸ್.ಆರ್.ನಿಧಿಯಲ್ಲಿ ಬೀದರ ಜಿಲ್ಲೆಯ 21 ಸರ್ಕಾರಿ ಶಾಲೆಗಳನ್ನು ಅಭಿವೃದ್ಧಿಪಡಿಸಿ ಕೆ.ಪಿ.ಎಸ್.ಶಾಲೆಗಳನ್ನಾಗಿ ಪರಿವರ್ತಿಸಲು ರಾಜ್ಯ ಸರಕಾರವು ಕೋಲ್ ಇಂಡಿಯಾ ಕಂಪನಿಯ ಸಹಯೋಗದೊಂದಿಗೆ ಅಭಿವೃದ್ಧಿಪಡಿಸಲು ಉದ್ದೇಶಿಸಿಸಿದ್ದು ಈ ನಿಟ್ಟಿನಲ್ಲಿ ಈಗಾಗಲೆ ಸಿದ್ಧತೆ ನಡೆದಿದೆ.
ಇದೇ ಸಂದರ್ಭದಲ್ಲಿ ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯಿAದ ಗುಣಮಟ್ಟ ಶಿಕ್ಷಣ ಮತ್ತು ಫಲಿತಾಂಶ ಖಾತ್ರಿಪಡಿಸಲು 8ನೇ ತರಗತಿಯಲ್ಲಿ ಓದುತ್ತಿರುವ ಸರ್ಕಾರಿ ಶಾಲಾ ಮಕ್ಕಳಿಗೆ ಕಲಿಕಾಸರೆ ಅಭ್ಯಾಸ ಹಾಳೆಗಳ ಪುಸ್ತಕಗಳನ್ನು ಬಿಡುಗಡೆಗೊಳಿಸಲಾಯಿತು. ಹಾಗೂ 2023ನೇ ಸಾಲಿನ ಎಸ್.ಎಸ್.ಎಲ್.ಸಿ. ವಾರ್ಷಿಕ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ಸರ್ಕಾರಿ ಶಾಲೆಗಳ ಬೀದರ ಜಿಲ್ಲೆಯ ಟಾರ್ಪಸ್ಗಳಿಗೆ ಉಚಿತ ಲ್ಯಾಪಟಾಪ್ಗಳನ್ನು ಗಣ್ಯರು ವಿತರಿಸಿದರು. ಮತ್ತು ವಿವಿಧ ಶಾಲೆಗಳ ಮಕ್ಕಳಿಂದ ಸ್ವಾತಂತ್ರö್ಯ ದಿನಾಚರಣೆ ಕುರಿತು ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.
ಇದೇ ಸಂದರ್ಭದಲ್ಲಿ ಪೌರಾಡಳಿತ ಹಾಗೂ ಹಜ್ ಸಚಿವ ರಹೀಮ್ ಖಾನ್, ಬೀದರ ಲೋಕಸಭಾ ಸದಸ್ಯ ಸಾಗರ ಈಶ್ವರ ಖಂಡ್ರೆ, ಬೀದರ ದಕ್ಷಿಣ ಕ್ಷೇತ್ರದ ಶಾಸಕ ಡಾ.ಶೈಲೇಂದ್ರ ಕೆ.ಬೆಲ್ದಾಳೆ, ವಿಧಾನ ಪರಿಷತ್ತಿನ ಸದಸ್ಯರುಗಳಾದ ಡಾ.ಚಂದ್ರಶೇಖರ ಬಿ.ಪಾಟೀಲ, ಎಂ.ಜಿ.ಮೂಳೆ, ಬೀದರ ನಗರಸಭೆ ಅಧ್ಯಕ್ಷ ಮಹಮ್ಮದ ಗೌಸ, ಬೀದರ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಬಸವರಾಜ ಜಾಬಶೆಟ್ಟಿ, ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ, ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಗಿರೀಶ್ ದೀಲಿಪ್ ಬದೋಲೆ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರದೀಪ ಗುಂಟಿ, ಅಪರ ಜಿಲ್ಲಾಧಿಕಾರಿ ಶಿವಕುಮಾರ ಶೀಲವಂತ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಮಹೇಶ ಮೇಘಣ್ಣನವರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಸಿದ್ರಾಮ ಸಿಂಧೆ ಸೇರಿದಂತೆ ಜಿಲ್ಲಾ ಮಟ್ಟದ ವಿವಿಧ ಇಲಾಖೆಯ ಅಧಿಕಾರಿಗಳು, ವಿವಿಧ ಶಾಲಾ-ಕಾಲೇಜಿನ ವಿದ್ಯಾರ್ಥಿಗಳು, ಶಿಕ್ಷಕರು ಸೇರಿದಂತೆ ಹಲವಾರು ಜನರು ಉಪಸ್ಥಿತರಿದ್ದರು.