ತೊಗರಿ ಬೆಳೆಗಳಲ್ಲಿ ಕೀಟ ಹಾಗು ರೋಗ ಸಮೀಕ್ಷೆ:ಡಾ. ಎನ್.ಎಮ್ ಸುನೀಲ ಕುಮಾರ
ಬೀದರ ಜಿಲ್ಲೆಯಾದ್ಯಂತ ಮೊದಲು ಬಿತ್ತನೆ ಮಾಡಿರುವ ತೊಗರಿಯು ಹೂವಾಡುವ ಹಂತ ತಲುಪಿದ್ದು ತೊಗರಿ ಬೆಳೆಯಲ್ಲಿ ಬಾಧಿಸುವ ಕೀಟ ಮತ್ತು ರೋಗಗಳ ನಿರ್ವಹಣೆಗಾಗಿ ಕೃಷಿ ವಿಜ್ಞಾನ ಕೇಂದ್ರ ಹಾಗೂ ಸಂಶೋಧನಾ ಕೇಂದ್ರ ಬೀದರ ವಿಜ್ಞಾನಿಗಳ ತಂಡ ಸಮೀಕ್ಷೆಗೆ ಸಮೀಕ್ಷೆ ಕೈಗೊಂಡಿದ್ದು ಜಿಲ್ಲೆಯ 8 ತಾಲೂಕುಗಳಲ್ಲಿ ಅನೇಕ ಕಡೆ ಬೇಗ ಮಾಗುವ ತೊಗರಿ ತಳಿಯು ಹೂ ವಾಡುವ ಹಂತದಲ್ಲಿದ್ದು ಹಸಿರು ಕಾಯಿ ಕೊರಕದ ಮೊಟ್ಟೆ ಹಾಗೂ ಕೀಟಗಳು ಆರ್ಥಿಕ ನಷ್ಟ ರೇಖೆಯನ್ನು ತಲುಪಿವೆ. ತೊಗರಿ ಬೆಳೆಯಲ್ಲಿ ಬಸವಕಲ್ಯಾಣ ತಾಲೂಕಿನ ರಾಜೇಶ್ವರ, ಮಂಠಾಳ, ಭಾಲ್ಕಿ ತಾಲೂಕಿನ ಹಲಬರಗಾ, ನಿಟ್ಟೂರ ಹಾಗೂ ಕಮಲನಗರ ತಾಲೂಕಿನ, ಸಾವಳಿ, ಡೊಣಗಾವ ಹುಮನಾಬಾದ ತಾಲೂಕಿನ ನಿರ್ಣಾ ಮತ್ತು ಬೇಮಳಖೇಡಾ ಗ್ರಾಮಗಳ ರೈತರ ಹೊಲಗಳಲ್ಲಿ ಹಸಿರು ಕಾಯಿ ಕೊರಕದ ಕೀಟದ ಮೊಟ್ಟೆ ಮತ್ತು ಕೀಡೆಯ ಭಾದೆ ಕಂಡುಬAದಿದ್ದು ಕೀಟವು ಆರ್ಥಿಕ ನಷ್ಟ ರೇಖೆಯನ್ನು ತಲುಪಿರುವು ಕಂಡುಬAದಿದೆ (ಕೀಟದ ಆರ್ಥಿಕ ನಷ್ಟ ರೇಖೆ ಪ್ರತಿ ಗಿಡ್ಡಕ್ಕೆ 2 ಮೊಟ್ಟೆ/ 1 ಕೀಡೆ). ರೈತ ಬಾಂಧವರು ತಕ್ಷಣವೇ ಈ ಕೀಟಗಳು ತಮ್ಮ ಕ್ಷೇತ್ರದಲ್ಲಿ ಇರುವದನ್ನು ಖಚಿತ ಪಡಿಸಿಕೊಂಡು ಮೊದಲನೆಯ ಸಿಂಪರಣೆಯಾಗಿ ತತ್ತಿ ನಾಶಕ ಕೀಟನಾಶಕಗಳಾದ 2 ಮಿ.ಲೀ ಪ್ರೋಪೆನೊಫಾಸ್ 50 ಇ.ಸಿ ಅಥವಾ 0.6 ಗ್ರಾಂ. ಥೈಯೋಡಿಕಾರ್ಬ 75 ಡಬ್ಲೂ ಪಿ ಪ್ರತಿ ಲೀ. ನೀರಿಗೆ ಬೆರೆಸಿ ಸಿಂಪಡಿಸಲು ಕೋರಲಾಗಿದೆ. ಕೆಲವು ರೈತರ ಹೊಳದಲ್ಲಿ ಕೀಟವು 3ನೇ ಹಂತದಲ್ಲಿದ್ದಲ್ಲಿ ಬೇವಿನ ಮೂಲದ ಕೀಟನಾಶಕ ಅಥವಾ ಸ್ಫರ್ಶ ಕೀಟನಾಶಕ ಇಮಾಮೆಕ್ಟಿನ್ ಬೆಂಜೋಯೇಟ್ @ 0.2 ಗ್ರಾಂ ಅಥವಾ ಸ್ಪೆöÊನೋಸ್ಯಾಡ್ @ 0.1 ಮಿ.ಲೀ ಅಥವಾ ಫ್ಲೂö್ಯಬೆಂಡಮಾಯಿಡ್ @ 0.075 ಮಿ.ಲೀ ಅಥವಾ ಕ್ಲೊರ್ಯಾಂಟ್ರನಿಲಿಪ್ರೋಲ್ @ 0.15 ಮೀ.ಲೀ ಪ್ರತಿ ಲೀ. ನೀರಿಗೆ ಬೆರೆಸಿ ಸಿಂಪರಿಸಬೇಕು.
ಕೆಲವೊAದು ರೈತರ ಹೊಲದಲ್ಲಿ ಒಣಬೇರು ಕೊಳೆ ರೋಗ ಕಂಡುಬAದಿದ್ದು ನಿರರ್ವಹಣೆಗಾಗಿ ಕಾರ್ಬಂಡೇಜಿಮ್ + ಮ್ಯಾಂಕೊಜೆಬ್ ಸಂಯುಕ್ತ ಶಿಲೀಂದ್ರನಾಶಕ ಪ್ರತಿ ಲೀ ನೀರಿಗೆ 2.5ಗ್ರಾಂ ಬೆರೆಸಿ ಗಿಡ ಚೆನ್ನಾಗಿ ತೊಯ್ಯುವಂತೆ ಸಿಂಪರಿಸಬೇಕು.
ಅದೇ ರೀತಿಯಾಗಿ ಬೀದರ ತಾಲ್ಲೂಕಿನ ಮರಖಲ್, ಸಿಂದೋಲ್, ಮರಕುಂದಾ, ಹುಮನಾಬಾದ ತಾಲ್ಲೂಕಿನ ಹುಡಗಿ ಮತ್ತು ಬಸವಕಲ್ಯಾಣ ತಾಲ್ಲೂಕಿನ ಕವಡಿಯಾಳ ಅನೇಕ ಗ್ರಾಮಗಳ ರೈತರ ಹೊಲದಲ್ಲಿ ತೊಗರಿ ಬೆಳೆಯಲ್ಲಿ ತೊಗರಿಯ ಗೊಡ್ಡು ರೋಗದ ಬಾದೆ ಕಂಡು ಬಂದಿದೆ. ಗೊಡ್ಡು ರೋಗದ ಬಾಧಿತ ಗಿಡಗಳು ಸಾಮಾನ್ಯ ಗಿಡಗಳಂತೆ ಹೂ ಮತ್ತು ಕಾಯಿಗಳಿಲ್ಲದೆ ಹೆಚ್ಚಿಗೆ ಎಲೆಗಳನ್ನು ಹೊಂದಿ ಗೊಡ್ಡಾಗಿ ಉಳಿಯುವುದುಂಟು. ಇಂತಹ ಗಿಡದ ಎಲೆಗಳು ಸಣ್ಣವಾಗಿದ್ದು, ಮೆಲ್ಭಾಗದಲ್ಲಿ ತಿಳಿ ಮತ್ತು ದಟ್ಟ ಹಳದಿ ಬಣ್ಣದ ಮೊಜಾಯಿಕ ತರಹದ ಮಚ್ಚೆಗಳನ್ನು ಹೊಂದಿ ಮುಟುರಿಕೊಂಡಿರುವವು. ಬೆಳೆಯು ಚಿಕ್ಕದಿದ್ದಾಗ ಈ ರೋಗ ಬಂದರೆ ಗಿಡ ಬೆಳೆಯದೇ ಮುಟುರಿಕೊಂಡಿರುವ ಎಲೆಗಳ ಗುಂಪಿನಿAದ ಕೂಡಿ ಪೊದೆಯಂತೆ ಗೊಡ್ಡಾಗಿ ಉಳಿಯುವುದು. ನಂಜಾಣುಗಳಿAದ ಉಂಟಾಗುವ ಈ ರೋಗವು ಅಂತರ್ವ್ಯಾಪಿಯಾಗಿದ್ದು, ಆಸೆರಿಯಾ ಕೆಜನಿ ಎನ್ನುವ ರಸ ಹೀರುವ ಮೈಟ್ ನುಶಿಗಳಿಂದ ಪ್ರಸಾರವಾಗುವುದು. ಈ ಮೈಟ್ ನುಶಿಗಳು ಗಾಳಿಯ ದಿಕ್ಕಿನಲ್ಲಿ ಗಾಳಿಯ ಜೊತೆ ರೋಗದ ಸ್ಥಳದಿಂದ ಸುಮಾರು 2 ಕಿ.ಮೀ ವರೆಗೂ ಪ್ರಸಾರವಾಗುವವು.
ಈ ರೋಗದಿಂದ ತೊಗರಿ ಬೆಳೆಯನ್ನು ಸಂರಕ್ಷಿಸಲು ಈ ಕೆಳಗಿನ ಸಮಗ್ರ ನಿರ್ವಹಣಾ ಕ್ರಮಗಳನ್ನು ಅಳವಡಿಸಬೇಕು. ರೋಗಾಣುವಿನ ಆಸರೆ ಸಸ್ಯಗಳಾದ ಬಹುವಾರ್ಷಿಕ ತೊಗರಿ ಮತ್ತು ಕುಳೆ ತೊಗರಿ ಬೆಳೆಯನ್ನು ಕಿತ್ತು ನಾಶ ಮಾಡಬೇಕು, ರೋಗದ ಪ್ರಾರಂಭದ ಹಂತದಲ್ಲಿ ರೋಗ ಬಂದ ಗಿಡಗಳನ್ನು ಕಿತ್ತು ನಾಶ ಮಾಡಬೇಕು, ಬೆಳೆಯ ಪ್ರಾರಂಭಿಕ ಹಂತದಲ್ಲಿ ನುಶಿ ನಾಶಕಗಳಾದ ನೀರಿನಲ್ಲಿ ಕರಗುವ ಗಂಧಕ 2.5 ಗ್ರಾಂ. ಪ್ರತಿ ಲೀಟರ್ ನೀರಿನಲ್ಲಿ ಬೆರಸಿ, ಬೆಳೆಯ ಮೆಲೆ ಸಿಂಪರಿಸಿ, ನುಶಿಗಳ ನಿಯಂತ್ರಣ ಮಾಡಬೇಕು
ಕೀಟ ಸಮೀಕ್ಷೆಯ ತಂಡದಲ್ಲಿ ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಡಾ. ಎನ್.ಎಮ್ ಸುನೀಲ ಕುಮಾರ , ಕೃಷಿ ಸಂಶೋಧನಾ ಕೇಂದ್ರ ಮುಖ್ಯಸ್ಥ ಡಾ. ಸುನೀಲ ಕುಲಕರ್ಣಿ ಮತ್ತು ಫ್ರೊಫೆಸರ್ ಡಾ. ಆರ್ ಎಲ್ ಜಾಧವ. ಇದ್ದರು.