ಬೀದರ್

ಡಾ. ಎಂ.ಜಿ.ದೇಶಪಾAಡೆಯವರಿಗೆ ರಾಜ್ಯಮಟ್ಟದ ಸಾಹಿತ್ಯ ಸಾಧಕ ರತ್ನ ಪ್ರಶಸ್ತಿ

ಸ.4 ರಂದು ವಿಜಯನಗರ ಜಿಲ್ಲೆಯ ಇಟ್ಟಿಗಿಯ ಎಂ. ಕಲ್ಲಹಳ್ಳಿಯ ಸಮುದಾಯ ಭವನದಲ್ಲಿ ಸಾಧಕರ ವೇದಿಕೆ ಇಟ್ಟಿಗಿ ವತಿಯಿಂದ ಪ್ರಥಮ ವರ್ಷದ ವಾರ್ಷಿಕೋತ್ಸವದ ನಿಮಿತ್ತ ಸಾಧಕರಿಗೆ ಪ್ರಶಸ್ತಿ ಪ್ರದಾನ, ಸಾಂಸ್ಕೃತಿಕ ಕಾರ್ಯಕ್ರಮ ಮತ್ತು ಕವಿಗೋಷ್ಠಿಯನ್ನು ಬೃಹತ್ ಪ್ರಮಾಣದಲ್ಲಿ ಹಮ್ಮಿಕೊಳ್ಳಲಾಗಿತ್ತು.
ಈ ವೇದಿಕೆಯಲ್ಲಿ ಬೀದರ ಜಿಲ್ಲೆಯ ಹಿರಿಯ ಖ್ಯಾತ ಸಾಹಿತಿಗಳಾದ ಡಾ. ಎಂ.ಜಿ.ದೇಶಪಾAಡೆಯವರಿಗೆ ರಾಜ್ಯಮಟ್ಟದ ಪ್ರಶಸ್ತಿಯಾದ “ಸಾಹಿತ್ಯ ಸಾಧಕ ರತ್ನ” ಪ್ರಶಸ್ತಿಯನ್ನು ನಾಡಿನ ದಿಗ್ಗಜ ಸಾಹಿತಿಗಳ ಸಮ್ಮುಖದಲ್ಲಿ ಪ್ರದಾನ ಮಾಡಲಾಯಿತು. ಈ ಮುಂಚೆಯೂ ಇವರಿಗೆ ರಾಜ್ಯಮಟ್ಟದ ಹಲವಾರು ಪ್ರಶಸ್ತಿಗಳು ಬಂದಿರುವುದು ಇಲ್ಲಿ ಉಲ್ಲೇಖನಿಯ.ಈ ಕುರಿತು ಬೀದರ ಜಿಲ್ಲೆಯ ಸಾಹಿತಿಗಳಾದ ಡಾ. ಸಂಜೀವಕುಮಾರ ಅತಿವಾಳೆ, ಡಾ. ರಘುಶಂಖ ಭಾತಂಬ್ರಾ, ಮಲ್ಲಿಕಾರ್ಜುನ ಸ್ವಾಮಿ ಸಂಗಮ, ಅರವಿಂದ ಕುಲಕರ್ಣಿ, ವೀರಭದ್ರಪ್ಪ ಉಪ್ಪಿನ, ಡಾ.ಸಿ. ಆನಂದರಾವ, ಹಂಶಕವಿ, ದಿಲೀಪಕುಮಾರ ಮೋಘಾ, ಸಾಧನಾ ರಂಜೋಳಕರ್, ಜಗದೇವಿ ದುಬಲಗುಂಡೆ, ಡಾ.ಜಗದೇವಿ ತಿಬಶೆಟ್ಟಿ, ಸುನೀತಾ ದಾಡಗಿ, ಧನರಾಜ ಅಣಕಲ್ , ಕಿರಣಮಹಾರಾಜ, ಮಲ್ಲಿಕಾರ್ಜುನ ಸಂಗೊಳಗಿ, ಬಾಬುರಾವ ಗೊಂಡಾ, ರಮೇಶಕುಮಾರ ಇಟಗಿಯವರು ಸೇರಿದಂತೆ ಹಲವಾರು ಸಾಹಿತಿಗಳು ಅಭಿನಂದಿಸಿದ್ದಾರೆ.

Ghantepatrike kannada daily news Paper

Leave a Reply

error: Content is protected !!