ಜುಲೈ 18ರಂದು ಪಂಚಾಚಾರ್ಯ ಪುಣ್ಯಾಶ್ರಮದಲ್ಲಿ ಪತ್ರಿಕಾ ದಿನಾಚರಣೆ: ನೂತನ ಸಂಸದ, ಎಮ್.ಎಲ್.ಸಿಗಳಿಗೆ ಸನ್ಮಾನ
ಬೀದರ್: ಈ ತಿಂಗಳ 18ರಂದು ಮಧ್ಯಾಹ್ನ 12 ಗಂಟೆಗೆ ಬೀದರ್-ಭಾಲ್ಕಿ ರಸ್ತೆಯಲ್ಲಿರುವ ಜಗದ್ಗುರು ಪಂಚಾಚಾರ್ಯ ಪೂಣ್ಯಾಶ್ರಮದಲ್ಲಿ ರಂಭಾಪುರಿ ಜಗದ್ಗುರುಗಳ ಸಾನಿಧ್ಯದಲ್ಲಿ ಪತ್ರಿಕಾ ದಿನಾಚರಣೆ ಹಾಗೂ ನೂತನ ಸಂಸದರು, ವಿಧಾನ ಪರಿಷತ್ ಸದಸ್ಯರಿಗೆ ಸನ್ಮಾನ ಸಮಾರಂಭ ಹಮ್ಮಿಕೊಳ್ಲಲಾಗಿದೆ ಎಂದು ಪುಣ್ಯಾಶ್ರಮದ ಟ್ರಸ್ಟಿಗಳು ಹಾಗೂ ತಮಲೂರು ಹಾಗೂ ಬೀದರ್ ಮುಕ್ತಿಧಾಮದ ಪರಮ ಪೂಜ್ಯ ಷ.ಬ್ರ ಶಿವಾನಂದ ಶಿವಾಚಾರ್ಯ ಮಹಾಸ್ವಾಮಿಗಳು ನುಡಿದರು.
ರವಿವಾರ ನಗರದ ಜಿಲ್ಲಾ ಪತ್ರಿಕಾ ಭವನದಲ್ಲಿ ಪತ್ರಿಕಾ ಗೋಷ್ಟಿ ಉದ್ದೇಶಿಸಿ ಮಾತನಾಡಿರುವ ಅವರು, ಜಗದಗುರು ಪಂಚಾಚಾರ್ಯ ಪುಣ್ಯಾಶ್ರಮ ಹಾಗೂ ಡಾ.ಎಸ್.ಎಸ್ ಸಿದ್ದಾರೆಡ್ಡಿ ಫೌಂಡೇಶನ್ಗಳ ಸಹಯೋಗದಲ್ಲಿ ಈ ಉಭಯ ಕಾರ್ಯಕ್ರಮಗಳು ಜರುಗಲಿವೆ ಎಂದರು.
ಬಾಳೆಹೊನ್ನೂರು ರಂಭಾಪುರಿ ಪೀಠದ 1008 ಜಗದ್ಗುರು ಡಾ.ವೀರಸೋಮೇಶ್ವರ ರಾಜದೇಶಿಕೇಂದ್ರ ಭಗವತ್ಪಾದ ಶಿವಾಚಾರ್ಯ ಮಹಾಸ್ವಾಮಿಗಳ ದಿವ್ಯ ಸಾನಿಧ್ಯದಲ್ಲಿ ಜರುಗಲಿರುವ ಈ ಕಾರ್ಯಕ್ರಮದಲ್ಲಿ ಡುಡಗಿ ಹಿರೇಮಠದ ಪೂಜ್ಯ ಷ್.ಬ್ರ ವಿರೂಪಾಕ್ಷ ಶಿವಾಚಾರ್ಯರು, ಹೆಡಗಾಪುರದ ಪೂಜ್ಯ ಷ.ಬ್ರ ಶಿವಲಿಂಗ ಶಿವಾಚಾರ್ಯರು, ಜೈ ಭಾರತ ಮಾತಾ ಸೇವಾ ಸಮಿತಿಯ ಅಧ್ಯಕ್ಷರಾದ ಪರಮ ಪೂಜ್ಯ ಶ್ರೀ ಹವಾ ಮಲ್ಲಿನಾಥ ಮಹಾರಾಜರು, ಮುಧೋಳದ ಪೂಜ್ಯ ಷ.ಬ್ರ ವೈಜಿನಾಥ ದೇಶಿಕೇಂದ್ರ ಶಿವಾಚಾರ್ಯರು ನೇತೃತ್ವ ವಹಿಸಲಿದ್ದು, ತಾನು ಸಮ್ಮುಖ ವಹಿಸಲಿದ್ದೇನೆ ಎಂದರು.
ಇದೇ ವೇಳೆ ಪತ್ರಿಕಾ ದಿನಾಚರಣೆ ಹಮ್ಮಿಕೊಂಡು ಜಗದ್ಗುರುಗಳಿಂದ ಜಿಲ್ಲೆಯ ಪತ್ರಕರ್ತರಿಗೆ ಶಾಲು ಹಾಗೂ ರುದ್ರಾಕ್ಷಿ ಮಾಲೆಯೊಂದಿಗೆ ಸನ್ಮಾನ ಸಮಾರಂಭ ಜರುಗಲಿದೆ. ಜಿಲ್ಲೆಯ ನೂತನ ಲೋಕಸಭೆ ಸದಸ್ಯರಾದ ಸಾಗರ ಈಶ್ವರ ಖಂಡ್ರೆ ಸಮಾರಂಭ ಉದ್ಘಾಟಿಸಲಿದ್ದು, ಬೀದರ್ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಬಸವರಾಜ ಜಾಬಶೆಟ್ಟಿ ಅಧ್ಯಕ್ಷತೆ ವಹಿಸುವರು. ಡಾ.ಎಸ್.ಎಸ್ ಸಿದ್ದಾರೆಡ್ಡಿ ಫೌಂಡೆಶನ್ ಗೌರವಾಧ್ಯಕ್ಷೆ ಡಾ.ಗುರಮ್ಮ ಸಿದ್ದಾರೆಡ್ಡಿ ಆಶಯ ನುಡಿ ನುಡಿಯುವರು. ಮುಖ್ಯ ಅತಿಥಿಗಳಾಗಿ ಕಲಬುರಗಿಯ ಉದ್ಯಮಿ ಶಿವಶರಣಪ್ಪ ಸೀರಿ, ಹೈದ್ರಾಬಾದ್ ಕರ್ನಟಕ ಶಿಕ್ಷಣ ಸಂಸ್ಥೆಯ ಅಡಳಿತ ಮಂಡಳಿ ಸದಸ್ಯರಾದ ಡಾ.ರಜನೀಶ ವಾಲಿ, ಅಖಿಲ ಭಾರತೀಯ ವೀರಶೈವ ಮಹಾಸಭೆ ಜಿಲ್ಲಾಧ್ಯಕ್ಷ ವೈಜಿನಾಥ ಕಮಠಾಣೆ, ಹಿರಿಯ ರಾಜಕಾರಣಿ ಚನ್ನಬಸವ ಬಳತೆ, ಬೀದರ್ ಡಿವೈಎಸ್ಪಿ ಶಿವನಗೌಡ ಪಾಟೀಲ, ಜೆಸ್ಕಾಮ್ ಕಾರ್ಯನಿರ್ವಾಹಕ ಅಭಿಯಂತರ ರಮೇಶ ಪಾಟೀಲ ಪಾಲ್ಗೊಳ್ಳುವರು. ಪುರೋಹಿತರಾದ ಬಸಯ್ಯ ಸ್ವಾಮಿ ಚಿಟ್ಟಾ ರುದ್ರಾಭಿಷಕ ಕಾರ್ಯಕ್ರಮ ನಡೆಸಿಕೊಡುವರು.
ಇದೇ ವೇಳೆ ನೂತನ ಸಂಸತ್ ಸದಸ್ಯರಾದ ಸಾಗರ ಈಶ್ವರ ಖಂಡ್ರೆ, ನೂತನ ವಿಧಾನ ಪರಿಷತ್ ಸದಸ್ಯರಾದ ಡಾ.ಚಂದ್ರಶೇಖರ ಪಾಟೀಲ, ಎಂ.ಜಿ ಮುಳೆ, ಬೂಡಾ ಅಧ್ಯಕ್ಷ ಬಸವರಾಜ ಜಾಬಶೆಟ್ಟಿ, ಹೆಚ್.ಕೆ.ಇ ಸೂಸೈಟಿ ಅಡಳಿತ ಮಂಡಳಿ ಸದಸ್ಯರಾದ ಡಾ.ರಜನೀಶ ವಾಲಿ ಸೇರಿದಂತೆ ಪುಣ್ಯಾಶ್ರಮಕ್ಕೆ ತಮ್ಮ ತನು, ಮನ ಹಾಗೂ ಧನದಿಂದ ಸಹಕರಿಸಿದ ಹಲವಾರು ಗಣ್ಯರಿಗೆ ಜಗದ್ಗುರುಗಳಿಂದ ಗೌರವಿಸಲಾಗುವುದು.
ಆದ ಕಾರಣ ಈ ಸುಂದರ ಸಮಾರಂಭಕ್ಕೆ ಪುಣ್ಯಾಶ್ರಮದ ಸದ್ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮ ಯಶಸ್ವಿಗೊಳಿಸಬೇಕೆಂದು ತಿಳಿಸಿದರು.
ಜಗದ್ಗುರು ಪಂಚಾಚಾರ್ಯ ಪೂಣ್ಯಾಶ್ರಮದ ಮುಖ್ಯಸ್ಥರಾದ ವೇದಮೂರ್ತಿ ಷಣ್ಮುಖಯ್ಯ ಸ್ವಾಮಿ, ಪುಣ್ಯಾಶ್ರಮದ ಸದ್ಭಕ್ತರಾದ ಮಲ್ಲಿಕಾರ್ಜುನ್ ಚಿಕಪೇಟ್, ಶ್ರೀ ರೇಣುಕ ಮಹೇಶ್ವರ ಸೌಹಾರ್ದ ಪತ್ತಿನ ಸಹಕಾರ ಬ್ಯಾಂಕ್ನ ಉಪಾಧ್ಯಕ್ಷರಾದ ಶ್ರೀಕಾಂತ ಸ್ವಾಮಿ ಸೋಲಪುರ, ಖಜಾಂಚಿ ಡಾ.ಪ್ರಭುಲಿಂಗ ಸ್ವಾಮಿ, ಸದಸ್ಯರಾದ ಕಾರ್ತಿಕ ಮಠಪತಿ ಹಾಗೂ ಇತರರು ಪತ್ರಿಕಾ ಗೋಷ್ಟಿಯಲ್ಲಿದ್ದರು.