ಬೀದರ್

ಜಿಲ್ಲೆಯ ವಿವಿಧ ಆಹಾರ ಮಳಿಗೆಗಳ ಪರಿಶೀಲನೆ ಮಾಡಿ ದಂಡ ವಸೂಲಿ

ಬೀದರ, ಆಗಸ್ಟ್. 31 :- ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ ಬೀದರ ವತಿಯಿಂದ ಜಿಲ್ಲಾ ಅಂಕಿತ ಅಧಿಕಾರಿ ಡಾ. ಸಂತೋಷ ಕಾಳೆ ಮಾರ್ಗದರ್ಶನದಲ್ಲಿ ಬೀದರ ಜಿಲ್ಲೆಯಾದ್ಯಂತ ಬೀದಿ ಬದಿಯ ವ್ಯಾಪಾರಿಗಳು, ಹೋಟಲಗಳು, ರೆಸ್ಟೋರೆಂಟಗಳು, ಧಾಬಾಗಳು ಬೇಕರಿಗಳ ಹಾಗೂ ಅಂಗಡಿಗಳ ಮೇಲೆ ಅಂಕಿತ ಅಧಿಕಾರಿಗಳು ಸೇರಿ ಒಟ್ಟು 13 ಅಂಗಡಿಗಳನ್ನು ಪರಿಶೀಲನೆ ಮಾಡಿ 12,000 ರೂ.ದಂಡ ವಿಧಿಸಲಾಗಿದೆ.
ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆ, ಆಯುಕ್ತರು ಬೆಂಗಳೂರು ಅವರ ಆದೇಶದ ಮೇರೆಗೆ ಈ ದಾಳಿ ಕೈಗೊಳ್ಳಲಾಯಿತು. ಅದೇ ರೀತಿ ಆಹಾರ ಸುರಕ್ಷತಾಧಿಕಾರಿಗಳು ಕೂಡ ಒಟ್ಟು 96 ಅಂಗಡಗಳನ್ನು ಪರಿಶೀಲನೆ ಮಾಡಿ 82 ನೋಟಿಸ್ ನೀಡಿ 22,500 ರೂ. ದಂಡ ವಿಧಿಸಲಾಯಿತು. ಜಿಲ್ಲೆಯಲ್ಲಿ ಆಹಾರ ಮಳಿಗೆಗಳು ಸ್ವಚ್ಛೆತೆ ಹಾಗೂ ನೈರ್ಮಲ್ಯತೆ ಬಗ್ಗೆ ತಿಳುವಳಕೆ ನೀಡಲಾಯಿತು. ಕಲಬೇರಕೆ ಆಹಾರ ಮಾದರಿಗಳಾದ ಮೀನು, ಮಾಂಸ ಹಾಗೂ ಮೊಟ್ಟೆ ಇವುಗಳನ್ನು ವಿಶೇಷವಾಗಿ ಸಂಗ್ರಹಿಸಿ ಪ್ರಯೋಗಾಲಯಕ್ಕೆ ಕಳುಹಿಸಲಾಗುವುದು ಎಂದು ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ ಬೀದರ ಜಿಲ್ಲಾ ಅಂಕಿತ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Ghantepatrike kannada daily news Paper

Leave a Reply

error: Content is protected !!