ಚೇತನ್ ಸಿಂಗ್ ನಡೆಸಿದ ಗುಂಡಿನ ದಾಳಿಗೆ ಬೀದರ್ ಸೈಯದ್ ಸೈಫುದ್ದೀನ್ ಮೃತ
ಮಹಾರಾಷ್ಟ್ರ ರಾಜ್ಯದ ಫಾಲ್ಗರ್ ರೈಲ್ವೆ ನಿಲ್ದಾಣದ ಬಳಿ ಜೈಪುರ್ ಮುಂಬೈ ಟ್ರೈನ್ ನಲ್ಲಿ ಚೇತನ್ ಸಿಂಗ್ ಎಂಬ ರೈಲ್ವೆ ರಕ್ಷಣಾ ಪಡೆ (ಆರ್ಫಿಎಫ್) ಕಾನ್ ಸ್ಟೇಬಲ್ ನಡೆಸಿದ ಗುಂಡಿನ ದಾಳಿಯಲ್ಲಿ ಆರ್ಫಿಎಫ್ ಎಎಸ್ಐ ಸೇರಿ ನಾಲ್ವರು ಮೃತಪಟ್ಟಿದ್ದು, ಮೃತರಲ್ಲಿ ಒಬ್ಬ ವ್ಯಕ್ತಿ ನಮ್ಮ ಬೀದರ್ ಜಿಲ್ಲೆಯವರು ಎಂಬ ಸುದ್ದಿ ಕೇಳಿ ದುಃಖವಾಗುತ್ತಿದೆ.
ಕ್ಷುಲ್ಲಕ ಕಾರಣಕ್ಕೆ ನಡೆದ ಗುಂಡಿನ ದಾಳಿಯಲ್ಲಿ ಮೃತರಾದವರ ಆತ್ಮಕ್ಕೆ ಭಗವಂತ ಶಾಂತಿ ಕರುಣಿಸಲಿ ಮತ್ತು ಅವರ ಕುಟುಂಬ ವರ್ಗಕ್ಕೆ ದುಃಖ ತಡೆದುಕೊಳ್ಳುವ ಶಕ್ತಿ ನೀಡಲಿ ಎಂದು ಪ್ರಾರ್ಥಿಸುತ್ತೇನೆ. ಘಟನೆಯಲ್ಲಿ ಪ್ರಾಣ ಕಳೆದುಕೊಂಡ ನಮ್ಮ ಜಿಲ್ಲೆಯ ಹಮಿಲಾಪೂರ್ ಗ್ರಾಮದ ಸೈಯದ್ ಸೈಫುದ್ದೀನ್ ರವರ ಸಹೋದರ ಯೂನುಸ್ ರವರೊಂದಿಗೆ ನಾನು ಈಗಾಗಲೇ ಮಾತನಾಡಿ ಸಾಂತ್ವನ ಹೇಳಿದ್ದೇನೆ.
ನಮ್ಮ ಜಿಲ್ಲೆಯ ಸೈಯದ್ ರವರ ಕುಟುಂಬಕ್ಕೆ ರೈಲ್ವೆ ಇಲಾಖೆ (ಕೇಂದ್ರ ಸರ್ಕಾರ) ಹಾಗೂ ಅಲ್ಲಿನ ರಾಜ್ಯ ಸರ್ಕಾರ ಮತ್ತು ಕರ್ನಾಟಕ ರಾಜ್ಯ ಸರ್ಕಾರ ತಲಾ 25 ಲಕ್ಷ ರೂ. ಪರಿಹಾರ ನೀಡಬೇಕು. ಕೂಡಲೇ ಆರೋಪಿಗೆ ಕಠಿಣ ಶಿಕ್ಷೆ ವಿಧಿಸಬೇಕು. ಮುಂದೆ ಈ ರೀತಿಯ ಘಟನೆಗಳು ನಡೆಯದಂತೆ ನೋಡಿಕೊಳ್ಳಬೇಕು ಎಂದು ಒತ್ತಾಯಿಸುತ್ತೇನೆ.