ಗಣೇಶ ಉತ್ಸವಕ್ಕೆ ಉಸ್ತುವಾರಿ ಸಚಿವರಿಗೆ ಅಹ್ವಾನ
ಬೀದರ ಉಸ್ತುವಾರಿ ಸಚಿವರು ಹಾಗೂ ಗಣೇಶ ಮಹಾ ಮಂಡಳ ಗೌರವಧ್ಯಕ್ಷರಾದ ಈಶ್ವರ ಖಂಡ್ರೆ ಅವರಿಗೆ ಜಿಲ್ಲಾಧಿಕಾರಿ ಕಚೇರಿಯಲ್ಲಿ ಇಂದು ಗಣೇಶ ಮಹಾ ಮಂಡಳ ವತಿಯಿಂದ 2024ರ ಗಣೇಶ ಉತ್ಸವಕ್ಕೆ ಪರಿಸರ ಸ್ನೇಹಿ ಗಣೇಶ ನೀಡಿ ಅಧಿಕೃತವಾಗಿ ಆಮಂತ್ರಿಸಲಾಯಿತು.
ಜಿಲ್ಲಾಧಿಕಾರಿ, ಜಿಲ್ಲ ಪೋಲಿಸ್ ವರಿಷ್ಠಾಧಿಕಾರಿ, ಜಿಲ್ಲಾ ಪಂಚಾಯತ ಕಾರ್ಯನಿರ್ವಾಹಣಾಧಿಕಾರಿಯೊಂದಿಗೆ ಗಣೇಶ ಮಹಾ ಮಂಡಳ ಗೌರವಧ್ಯಕ್ಷರಾದ ಈಶ್ವರ ಖಂಡ್ರೆ ಗಣೇಶ ಮಹಾ ಮಂಡಳಿಯ ಪ್ರಮುಖರೊಂದಿಗೆ ಸಭೆ ನಡೆಸಿ ಜಿಲ್ಲಾಡಳಿತದ ವತಿಯಿಂದ ಎಲ್ಲಾ ಸಹಕಾರ ನೀಡುವುದಾಗಿ ತಿಳಿಸಿ ಸಾರ್ವಜನಿಕ ಗಣೇಶ ಮಂಡಳಿಗಳು ಪರಿಸರ ಮಾಲಿನ್ಯ ಮತ್ತು ಶಬ್ದ ಮಾಲಿನ್ಯವಾಗದಂತೆ ಶಾಂತಿಯುತವಾಗಿ ಗಣೇಶ ಉತ್ಸವ ಆಚರಿಸಬೇಕೆಂದು ಕರೆ ನೀಡಿದರು.
ಈ ಸಂಧರ್ಭದಲ್ಲಿ ಗಣೇಶ ಮಹಾ ಮಂಡಳಿಯ ಪ್ರಧಾನ ಕಾರ್ಯದರ್ಶಿಯಾದ ಬಾಬು ವಾಲಿ, ಪ್ರಮುಖರಾದ ಸೋಮಶೇಖರ ಪಾಟೀಲ ಗಾದಗಿ, ಸೂರ್ಯಕಾಂತ ಶೆಟಕಾರ, ದೀಪಕ ವಾಲಿ, ರಜನೀಶ ವಾಲಿ ಉಪಸ್ಥಿತರಿದ್ದರು.