ಕ್ರಿಕೆಟ್ ತಂಡಕ್ಕೆ ಆಯ್ಕೆ ಪ್ರಕ್ರಿಯೆ ಜು.1ಕ್ಕೆ
ಬೀದರ್: ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ (ಕೆಎಸ್.ಸಿಎ) ರಾಯಚೂರು ವಲಯ ವತಿಯಿಂದ 19 ವಯೋಮಿತಿ ಒಳಗಿನ ಕ್ರಿಕೆಟ್ ತಂಡಕ್ಕೆ ಆಯ್ಕೆ ಪ್ರಕ್ರಿಯೆ ಜುಲೈ 1ರಂದು ನಗರದ ನೆಹರು ಕ್ರೀಡಾಂಗಣದಲ್ಲಿ ನಡೆಯಲಿದೆ. ಅಂದು ಬೆಳಗ್ಗೆ 8ರಿಂದ ಆಯ್ಕೆ ಪ್ರಕ್ರಿಯೆ ಆರಂಭವಾಗಲಿದೆ.
16 ವಯೋಮಿತಿ ಒಳಗಿನ ಅಭ್ಯರ್ಥಿಗಳಿಗೆ ಭಾಗವಹಿಸಲು ಅವಕಾಶ ಇಲ್ಲ. 2005 ಸೆ.1ರ ನಂತರ ಜನಿಸಿದವರು ಆಧಾರ್ ಕಾಡ್೯, ಜನ್ಮ ಪ್ರಮಾಣಪತ್ರ, ಎಸ್.ಎಸ್.ಎಲ್.ಸಿ ಪ್ರಮಾಣಪತ್ರ ನೊಂದಿಗೆ ಜಿಲ್ಲೆಯ ಆಸಕ್ತ ಕ್ರೀಡಾಪಟುಗಳು ಪಾಲ್ಗೊಳ್ಳಬಹುದು. ಮಾಹಿತಿಗಾಗಿ ಅನೀಲಕುಮಾರ ದೇಶಮುಖ (9341111136), ವಿಕ್ಕಿ ಅಥವಾಲ್ (7019061026), ಸಂಜಯ ಜಾಧವ್ (8277764066), ಯುವರಾಜ ಉನ್ನೆ (9986029917)
ಅವರನ್ನು ಸಂಪರ್ಕಿಸಬಹುದು ಎಂದು ರಾಯಚೂರು ವಲಯದ ಬೀದರ್ ಸಂಚಾಲಕ ಕುಶಾಲ ಪಾಟೀಲ್ ಗಾದಗಿ ತಿಳಿಸಿದ್ದಾರೆ.