ಕೈ ನಾಯಕರ ದೆಹಲಿ ಸಭೆ ಬಗ್ಗೆ ಮಾಹಿತಿ ನೀಡಿದ ಸುರ್ಜೆವಾಲಾ
ರಾಜ್ಯ ಕೈ ನಾಯಕರೊಂದಿಗೆ ಹೈಕಮಾಂಡ್ ಸಭೆ ದೆಹಲಿಯಲ್ಲಿ ನಡೆಸಿತು. ಬಳಿಕ ಈ ಬಗ್ಗೆ ಕಾಂಗ್ರೆಸ್ ಸಂಸದ ರಣದೀಪ್ ಸುರ್ಜೇವಾಲಾ ಅವರು ಮಾಧ್ಯಮಗಳಿಗೆ ಮಾಹಿತಿ ನೀಡಿದರು. “ಪಕ್ಷದ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ರಾಹುಲ್ ಗಾಂಧಿ ಸಮ್ಮುಖದಲ್ಲಿ ಕರ್ನಾಟಕ ಕಾಂಗ್ರೆಸ್‌ನ 36ಕ್ಕೂ ಹೆಚ್ಚು ಹಿರಿಯ ನಾಯಕರ ಸಭೆ ಇಂದು ನಡೆಯಿತು.
“ಪಕ್ಷ ಸಂಘಟನೆಯ ಹಿರಿಯ ನಾಯಕ ಹಾಗೂ ಸಚಿವರೊಬ್ಬರು ಸಂಸದೀಯ ಸ್ಥಾನದ ಉಸ್ತುವಾರಿ ವಹಿಸುವ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ. ಮುಂದಿನ 6-7 ತಿಂಗಳು ಲೋಕಸಭೆ ಚುನಾವಣೆವರೆಗೂ ಅವರೇ ಜವಾಬ್ದಾರರಾಗಿರುತ್ತಾರೆ. ಪಕ್ಷದ ಸಂಘಟನೆಗಾಗಿ ಸುಮಾರು 1.30 ಕೋಟಿ ಮಹಿಳೆಯರಿಗೆ ತಿಂಗಳಿಗೆ ತಲಾ 2,000 ರೂ. ನೀಡಲಾಗುವುದು.ಆಗಸ್ಟ್ 15ರಿಂದ 20 ನಡುವೆ ಮಹಿಳೆಯರು ನೇರವಾಗಿ ತಮ್ಮ ಬ್ಯಾಂಕ್ ಖಾತೆಗಳಿಗೆ ಹಣ ಪಡೆಯಲು ಪ್ರಾರಂಭಿಸುತ್ತಾರೆ’ ಎಂದು
ಕಾಂಗ್ರೆಸ್ ಸಂಸದ ರಣದೀಪ್ ಸುರ್ಜೇವಾಲಾ ಅವರು ಮಾಧ್ಯಮಗಳಿಗೆ ಮಾಹಿತಿ ನೀಡಿದರು.