ಬೀದರ್

ಕಾರಾಗೃಹದಲ್ಲಿ ಉಚಿತ ಆರೋಗ್ಯ ತಪಾಸಣೆ ಶಿಬಿರ

ಬೀದರ್: ಅಸೋಸಿಯೇಷನ್ ಆಫ್ ಅಲೈನ್ಸ್ ಕ್ಲಬ್ ಇಂಟರ್‍ನ್ಯಾಷನಲ್ ಬೀದರ್ ಘಟಕದ ವತಿಯಿಂದ ನಗರದ ಜಿಲ್ಲಾ ಕಾರಾಗೃಹದಲ್ಲಿ ಶುಕ್ರವಾರ ಉಚಿತ ಆರೋಗ್ಯ ಹಾಗೂ ರಕ್ತ ತಪಾಸಣೆ ಶಿಬಿರ ನಡೆಯಿತು.
ಕ್ಲಬ್ ಕಾರ್ಯದರ್ಶಿಯಾದ ಡಾ. ಶರಣಯ್ಯ ಸ್ವಾಮಿ ಹಾಗೂ ಡಾ. ನೇಹಾ ಫಾತಿಮಾ ಅವರು ಪುರುಷ, ಮಹಿಳಾ ಕೈದಿಗಳು ಹಾಗೂ ಜೈಲು ಸಿಬ್ಬಂದಿ ಸೇರಿ ಒಟ್ಟು 186 ಜನರ ಆರೋಗ್ಯ ತಪಾಸಣೆ ಮಾಡಿದರು.
ಕ್ಲಬ್‍ನ ಜಿಲ್ಲಾ ಗವರ್ನರ್ ಬಸವರಾಜ ಹೇಡೆ ಮಾತನಾಡಿ, ಕೈದಿಗಳಿಗೆ ಉತ್ತಮ ಆರೋಗ್ಯ ಕಾಯ್ದುಕೊಳ್ಳಲು ನೆರವಾಗಲು ಹಾಗೂ ಅವರಲ್ಲಿ ಆರೋಗ್ಯ ಜಾಗೃತಿ ಮೂಡಿಸಲು ಶಿಬಿರ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.
ಬರುವ ದಿನಗಳಲ್ಲಿ ದಂತ, ನೇತ್ರ ಹಾಗೂ ಚರ್ಮ ರೋಗ ತಪಾಸಣೆ ಶಿಬಿರ ಸಹ ಹಮ್ಮಿಕೊಳ್ಳಲಾಗುವುದು ಎಂದು ಭರವಸೆ ನೀಡಿದರು.
ಜೀವನದಲ್ಲಿ ಯಾವುದೋ ಕೆಟ್ಟ ಗಳಿಗೆಯಲ್ಲಿ ತಪ್ಪುಗಳು ನಡೆದಿರುತ್ತವೆ. ಆದ ತಪ್ಪು ಜೀವನದಲ್ಲಿ ಮರುಕಳಿಸದಂತೆ ನೋಡಿಕೊಳ್ಳಬೇಕು. ಜೈಲಿಗೆ ಹೋಗಿ ಬಂದ ಅನೇಕರು ಮತ್ತೆ ಜೀವನದಲ್ಲಿ ಉತ್ತಮ ವ್ಯಕ್ತಿಗಳಾಗಿ, ಹೆಸರು ಮಾಡಿದ್ದಾರೆ. ಕೈದಿಗಳು ಅಂಥವರನ್ನು ಅನುಕರಿಸಬೇಕು ಎಂದು ಸಲಹೆ ಮಾಡಿದರು.
ಜೈಲು ಅಧೀಕ್ಷಕ ದತ್ತಾತ್ರಿ ಆರ್. ಮೇಧಾ ಮಾತನಾಡಿ, ಅಸೋಸಿಯೇಷನ್ ಆಫ್ ಅಲೈನ್ಸ್ ಕ್ಲಬ್ ಇಂಟರ್‍ನ್ಯಾಷನಲ್  ಸಾಮಾಜಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿರುವುದು ಶ್ಲಾಘನೀಯ ಎಂದು ಹೇಳಿದರು.
ಜೇಲರ್‍ಗಳಾದ ಸಿದ್ಧನಗೌಡ ಪಾಟೀಲ, ಟಿ.ಬಿ. ಭಜಂತ್ರಿ, ಕ್ಲಬ್‍ನ ನವೀನಕುಮಾರ, ಎಂಜೆಲ್, ಶೀತಲ್, ನಿಶಾ ಗುತ್ತೇದಾರ್, ಸ್ನೇಹಾ, ದಿವ್ಯಕಿರಣ ಮತ್ತಿತರರು ಇದ್ದರು.

Ghantepatrike kannada daily news Paper

Leave a Reply

error: Content is protected !!