ಬೀದರ್

ಕಲ್ಯಾಣ ಕರ್ನಾಟಕ ಕಲಾವಿದರಿಂದ ಸಚಿವರಿಗೆ ಮನವಿ

77ನೇ ಸ್ವಾತಂತ್ರö್ಯ ದಿನಾಚರಣೆಯ ಅಂಗವಾಗಿ ಧ್ವಜಾರೋಹಣ ನೆರವೆರಿಸಲು ಆಗಮಿಸಿದ ಬೀದರ ಜಿಲ್ಲಾ ಉಸ್ತುವಾರಿ ಹಾಗೂ ಅರಣ್ಯ, ಪರಿಸರ ಮತ್ತು ಜೀವವೈವಿಧ್ಯ ಸಚಿವರಾದ ಈಶ್ವರ ಬಿ. ಖಂಡ್ರೆ ರವರಿಗೆ ಕಲ್ಯಾಣ ಕರ್ನಾಟಕ ಕಲಾವಿದರ ಪ್ರಮುಖ ಬೇಡಿಕೆಗಳನ್ನು ವಿಧಾನಸೌಧದಲ್ಲಿ ಚರ್ಚಿಸುವ ಕುರಿತು ಮನವಿ ಪತ್ರವನ್ನು ಕಲ್ಯಾಣ ಕರ್ನಾಟಕ ಕಲಾವಿದರ ಒಕ್ಕೂಟದ ಸಂಸ್ಥಾಪಕ ಅಧ್ಯಕ್ಷರಾದ ವಿಜಯಕುಮಾರ ಸೋನಾರೆ ಕಾರ್ಯಕಾರಿ ಸಮಿತಿ ಸದಸ್ಯರಾದ ಸುನೀಲ್ ಕಡ್ಡೆ, ರಾಜಕುಮಾರ ಶೇರಿಕಾರ, ಇವರ ಮುಖಾಂತರ ಮನವಿ ಪತ್ರವನ್ನು ಸಚಿವರಿಗೆ ನೀಡಲಾಗಿದ್ದು ಕಲಾವಿದರ ಬೇಡಿಕೆಗಳಾದ ರಾಜ್ಯದಲ್ಲಿ ಪ್ರಸ್ತುತ ಅಸ್ತಿತ್ವದಲ್ಲಿರುವ ಸರ್ಕಾರದ ಹಲವಾರು ಟ್ರಸ್ಟ್ ಹಾಗೂ ಪ್ರತಿಷ್ಠಾನದ ಮಾದರಿಯಲ್ಲಿ ಬೀದರನಲ್ಲಿ ಜಯದೇವಿ ತಾಯಿ ಲಿಗಾಡೆ / ಕಲಬುರಗಿಯಲ್ಲಿ ಎಸ್.ಎಂ. ಪಂಡೀತ್ / ಯಾದಗಿರಿಯಲ್ಲಿ ಎಂ.ಆರ್. ಬುಂದಿವAತರ ಶೆಟ್ಟರ್ / ರಾಯಚೂರನಲ್ಲಿ ಪಂಡೀತ್ ಸಿದ್ದರಾಮ ಜಂಬಲದಿನ್ನಿ / ಕೊಪ್ಪಳದಲ್ಲಿ ಡಾ. ಸಿದ್ದಯ್ಯ ಪುರಾಣಿಕ್ / ಬಳ್ಳಾರಿಯಲ್ಲಿ ಡಾ. ಸುಂದ್ರಮ್ಮ ಮನಸುರು ಹಾಗೂ ವಿಜಯನಗರದಲ್ಲಿ ಎಂ.ಪಿ. ಪ್ರಕಾಶ ಹೆಸರಿನಲ್ಲಿ ಸರಕಾರದಿಂದ ಟ್ರಸ್ಟ್ ಸ್ಥಾಪಿಸಬೇಕು. ಸರಕಾರವು ಪ್ರತಿವರ್ಷ ರಾಜ್ಯದ ಎಲ್ಲಾ ಪ್ರಕಾರದ ಜನಪದ, ಯಕ್ಷಗಾನ, ರಂಗಭೂಮಿ, ಸಂಗೀತ, ಚಿತ್ರಕಲೆ ಸೇರಿದಂತೆ ಎಲ್ಲಾ ಪ್ರಕಾರದ ಒಟ್ಟು 1000 ಜನ ಕಲಾವಿದರಿಗೆ ಮಾತ್ರ ಮಾಶಾಸನ ಮಂಜೂರು ಮಾಡುವ ಪ್ರಕ್ರೀಯೆ ಬಹುದಿನಗಳಿಂದ ಇದ್ದು ಅದರ ಸಂಖ್ಯೆಯನ್ನು 5000 ಹೆಚ್ಚಿಸಬೇಕು. ಕರ್ನಾಟಕ ಸರ್ಕಾರದ ಮೂಲಕ ಈಗಾಗಲೇ ಮೈಸೂರು ಮತ್ತು ಬೆಂಗಳೂರು ವಿಭಾಗದ ಕಲಾವಿದರಿಗೆ ಸರ್ಕಾರದಿಂದ ನೀಡುತ್ತಿರುವ ಗುರುತಿನ ಚೀಟಿಯನ್ನು ಕಲ್ಯಾಣ ಕರ್ನಾಟಕ ಭಾಗದ ಕಲಾವಿರಿಗೂ ಕೂಡ ವಿತರಿಸಬೇಕು. ಪ್ರಸ್ತುತ ಅಸ್ತಿತ್ವದಲ್ಲಿರುವ ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿಯಲ್ಲಿ ಸಾಂಸ್ಕೃತಿಕ ಉದ್ದೇಶಕ್ಕೆ ಕ್ರಿಯಾಯೋಜನೆ ರೂಪಿಸಿ ಕಲ್ಯಾಣ ಕರ್ನಾಟಕದ 7 ಜಿಲ್ಲೆಗಳಲ್ಲಿ ಜಿಲ್ಲಾ ಉತ್ಸವಗಳನ್ನು ಆಚರಿಸಬೇಕು ಹಾಗೂ ಹಂಪಿ ಉತ್ಸವದ ಮಾದರಿಯಲ್ಲಿ ಈ ಭಾಗದ ಐತಿಹಾಸಿಕ ಕ್ಷೇತ್ರಗಳ ಉತ್ಸವ ನಡೆಸಬೇಕು. ಸಂತ ಶಿಶುನಾಳ ಶರೀಫರ ಕ್ಷೇತ್ರದ ಅಭಿವೃದ್ಧಿ ಮಾದರಿಯಲ್ಲಿ ಕಲ್ಯಾಣ ಕರ್ನಾಟಕ ಭಾಗದ ಪ್ರಸಿದ್ಧ ತತ್ವಪದಕಾರ “ಕಡಕೋಳ ಮಡಿವಾಳಪ್ಪ” ನವರ ಅಭಿವೃದ್ಧಿ ಪ್ರಾಧಿಕಾರ ರಚಿಸಬೇಕು. ಕರ್ನಾಟಕ ಸರ್ಕಾರದಿಂದ ನಡೆಯುವ ಎಲ್ಲಾ ಉತ್ಸವಗಳಲ್ಲಿ ಹಾಗೂ ರಾಜ್ಯ, ರಾಷ್ಟç ಮತ್ತು ಅಂತರರಾಷ್ಟಿçÃಯ ಮಟ್ಟದ ಸಮ್ಮೇಳನಗಳಲ್ಲಿ ಕಡ್ಡಾಯವಾಗಿ ಕಲ್ಯಾಣ ಕರ್ನಾಟಕ ಭಾಗದ ಕಲಾವಿದರಿಗೆ ಅವಕಾಶ ನೀಡಬೇಕು. ತೆಲಂಗಾಣ ಸರ್ಕಾರದ ಮಾದರಿಯಲ್ಲಿ ಕರ್ನಾಟಕ ರಾಜ್ಯದ ಪದ್ಮಶ್ರೀ, ಪದ್ಮಭೂಷಣ, ರಾಜ್ಯೋತ್ಸವ ಪುರಸ್ಕೃತ ಕಲಾವಿದರಗೆ ನಿರಂತರವಾಗಿ ಸರ್ಕಾರದಿಂದ 10,000/- ಮಾಶಾಸನ ನೀಡಬೇಕು. ರಾಜ್ಯದ ಕಲಾವಿದರ ಮಾಶಾಸನ ವಯೋಮಾನ 58 ರಿಂದ 50ಕ್ಕೆ ಇಳಿಸಬೇಕು ಹಾಗೂ ಮಾಶಾಸನದ ಮೊತ್ತ ರೂ. 5000ಕ್ಕೆ ಹೆಚ್ಚಿಸಬೇಕು.ಬುಡಕಟ್ಟು, ಅಲೆಮಾರಿ, ಹಗಲುವೇಷ, ಈ ಪ್ರಕಾರದ ಕಲಾವಿದರಿಗೆ ಮಾಶಾಸನ ಮತ್ತು ಸರ್ಕಾರದ ವಿವಿಧ ಪ್ರಶಸ್ತಿ ಪಡೆಯಲು ದಾಖಲಾತಿಗಳಲ್ಲಿ ವಿಶೇಷ ವಿನಾಯತಿ ನೀಡಬೇಕು. ರಾಜ್ಯದ ಎಲ್ಲಾ ಶಾಲೆಗಳಲ್ಲಿ ಪ್ರಸ್ತುತ ಅಸ್ತಿತ್ವದಲ್ಲಿರುವ ಚಿತ್ರಕಲಾ ಶಿಕ್ಷಕರು ಹಾಗೂ ದೈಹಿಕ ಶಿಕ್ಷಕರ ಮಾದರಿಯಲ್ಲಿ ರಂಗಶಿಕ್ಷಕರು ಹಾಗೂ ಸಂಗೀತ ಶಿಕ್ಷಕರುನ್ನು ನೇಮಿಸಬೇಕು ಮತ್ತು ಸಮಾಜ ಕಲ್ಯಾಣ ಇಲಾಖೆ ಹಾಗೂ ಇತರೆ ಇಲಾಖೆಗಳಿಂದ ನಡೆಯುತ್ತಿರುವ ರಾಜ್ಯದ ಎಲ್ಲಾ ವಸತಿ ಶಾಲೆಗಳಲ್ಲಿ ಜನಪದ ಶಿಕ್ಷಕರನ್ನು ಸರ್ಕಾರ ನೇಮಿಸಬೇಕು. ಪದವೀಧರರ ಹಾಗೂ ಚುನಾಯಿತ ಪ್ರತಿನಿಧಿಗಳ ಕ್ಷೇತ್ರಗಳಂತೆ ಕಲಾವಿದರಿಗಾಗಿಯೇ ಪ್ರತ್ಯೇಕವಾಗಿ ವಿಧಾನಪರಿಷತ್ ಕ್ಷೇತ್ರ ರಚನೆಯಾಗಬೇಕು. ರಾಜ್ಯದ ಎಲ್ಲಾ ಕಲಾವಿದರಿಗೆ ಸರ್ಕಾರದಿಂದ ಉಚಿತ ಬಸ್ ಪಾಸ್ ನೀಡಬೇಕು, ಕಾರ್ಮಿಕರ ಮಾದರಿಯಲ್ಲಿ ವಿಮಾ ಯೋಜನೆ ರೂಪಿಸಬೇಕು.

Ghantepatrike kannada daily news Paper

Leave a Reply

error: Content is protected !!