ಬೀದರ್

ಕರ್ನಾಟಕ ಕಾಲೇಜಿನಲ್ಲಿ ನಡೆದ ಅಂತರಾಷ್ಟ್ರೀಯ ಕಾರ್ಯಾಗಾರ

ಬೀದರ್ ಜು. 19 ಇಂದಿನ ಕಾಲಮಾನಕ್ಕೆ ತಕ್ಕಂತೆ ವಿದ್ಯಾರ್ಥಿಗಳಿಗೆ ಆರ್ಟಿಫಿಸಿಯಲ್ ಇಂಟಲಿಜೆನ್ಸ್ ಬಗ್ಗೆ ತಿಳಿದುಕೊಳ್ಳುವುದು ಅತಿ ಅಗತ್ಯವಾಗಿದೆ ಎಂದು ಅಮೇರಿಕಾದ ಸೌತ್ ಡಕೋಟಾ ವಿಶ್ವವಿದ್ಯಾಲಯದ ಗಣಕಯಂತ್ರ ವಿಜ್ಞಾನ ವಿಭಾಗದ ಮುಖ್ಯಸ್ಥರಾದ ಪ್ರೋ. ಕೆ. ಸಿ. ಸಂತೋಷ ತಿಳಿಸಿದರು.

ಅವರು ಬೀದರ್‍ನ ಕರ್ನಾಟಕ ಕಲಾ ವಿಜ್ಞಾನ ಮತ್ತು ವಾಣಿಜ್ಯ ಮಹಾವಿದ್ಯಾಲಯದಲ್ಲಿ ಜುಲೈ 18 ರಂದು ಆಯೋಜಿಸಲಾಗಿದ್ದ ಅಂತರಾಷ್ಟ್ರೀಯ ಕಾರ್ಯಗಾರದಲ್ಲಿ ಪಾಲ್ಗೊಂಡು ಮಾತನಾಡಿ, ವಿದ್ಯಾರ್ಥಿಗಳಿಗೆ ಆರ್ಟಿಫಿಸಿಯಲ್ ಇಂಟಲಿಜೆನ್ಸ್‍ನಲ್ಲಿನ ಸಂಶೋಧನೆಗಳ ಬಗ್ಗೆ ಮಾಹಿತಿಗಳನ್ನು ಹಂಚಿಕೊಂಡರು.

ಜೆ. ಎನ್. ಯು ವಿ.ವಿ ನವದೆಹಲಿಯ ಪ್ರೋ. ಮಂಜು ಖಾರಿ ಮಾತನಾಡಿ, ಆರ್ಟಿಫಿಸಿಯಲ್ ಇಂಟಲಿಜೆನ್ಸ್

(ಎಐ) ಇವತ್ತಿನ ಅಗತ್ಯತೆ ಆಗಿದೆ ಎಲ್ಲರೂ ಇಂಥ ಸಂಶೋಧನೆಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳಬೆಕೇಂದು ಸಲಹೆ ನೀಡಿದರು.

ಕ.ರಾ.ಶಿ ಸಂಸ್ಥೆಯ ಅಧ್ಯಕ್ಷರಾದ ಬಸವರಾಜ ಜಾಬಶಟ್ಟಿ ಮಾತನಾಡಿ, ಈ ಕಾರ್ಯಗಾರದ ಲಾಭವನ್ನು ಎಲ್ಲ ವಿದ್ಯಾರ್ಥಿಗಳು ಹಾಗೂ ಭಾಗವಹಿಸಿದ ಪ್ರಾಧ್ಯಾಪಕರು ತೆಗೆದುಕೊಂಡು ತಮ್ಮ ಜೀವನದಲ್ಲಿ ಹೇಗೆ ಇದನ್ನು ಲಾಭ ಹಾಗೂ ನಷ್ಟದ ದೃಷ್ಟಿಯಿಂದ ನೋಡಬೇಕೆಂದು ಸಲಹೆ ನೀಡಿದರು.

ಸುಮಾರು 300ಕ್ಕೂ ಹೆಚ್ಚು ವಿವಿಧ ಮಹಾವಿದ್ಯಾಲಯದ ಪ್ರಾಧ್ಯಾಪಕರು ಸೇರಿದಂತೆ ವಿದ್ಯಾರ್ಥಿಗಳು ಭಾಗವಹಿಸಿದ್ದರು.

ಈ ಅಂತರಾಷ್ಟ್ರೀಯ ಕಾರ್ಯಗಾರದಲ್ಲಿ ನಿವೃತ್ತ ಉಪಕುಲಪತಿಗಳಾದ ಪ್ರೋ. ಬಿ. ಜಿ. ಮೂಲಿಮನಿ, ಕ.ರಾ.ಶಿ ಸಂಸ್ಥೆಯ ಉಪಾಧ್ಯಕ್ಷರಾದ ಬಿ. ಜಿ. ಶಟಕಾರ, ಕಾರ್ಯದರ್ಶಿಗಳಾದ ಸಿದ್ರಾಮ ಪಾರಾ, ಜಂಟಿ ಕಾರ್ಯದರ್ಶಿಗಳಾದ ಸತೀಶ ಪಾಟೀಲ ಹಾಗೂ ಆಡಳಿತ ಮಂಡಳಿ ಸದಸ್ಯರು ಭಾಗವಹಿಸಿದ್ದರು.

ಪ್ರಾಚಾರ್ಯರಾದ ಡಾ. ಮಲ್ಲಿಕಾರ್ಜುನ ಹಂಗರಗೆ ಪ್ರಾಸ್ತಾವಿಕ ಮಾತನಾಡಿದರು. ಉಪ ಪ್ರಾಚಾರ್ಯರಾದ ಅನಿಲಕುಮಾರ ಚಿಕ್ಕಮಣೂರ್ ಸ್ವಾಗತಿಸಿದರು. ಗಣಕಯಂತ್ರ ವಿಜ್ಞಾನ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ. ಬಿ. ವ್ಹಿ. ರವಿಚಂದ್ರ ನಿರೂಪಿಸಿದರು. ಅಶೋಕ ಹುಡೆದ್ ವಂದಿಸಿದರು.

ಕಾರ್ಯಗಾರದಲ್ಲಿ ಗಣಕಯಂತ್ರ ವಿಜ್ಞಾನ ವಿಭಾಗದ ಮುಖ್ಯಸ್ಥರಾದ ಪ್ರೋ. ಶ್ರೀಕಾಂತ ದೊಡ್ಡಮನಿ, ಅನಿತಾ ಮಾರ್ಗೆ, ಶಿವಲೀಲಾ ಪಾಟೀಲ, ಜಗದೀಶ ಬೋರಾಳೆ, ಅಮಿತ ರೆಡ್ಡಿ, ಹಾಗೂ ಇನ್ನಿತರ ಹಿರಿಯ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

Ghantepatrike kannada daily news Paper

Leave a Reply

error: Content is protected !!