ಒಂದು ದಿನದ ರಾಜ್ಯ ಮಟ್ಟದ ಕಾವ್ಯ ಕಮ್ಮಟದ ಸಮಾರೋಪ ಸಮಾರಂಭದಲ್ಲಿ ಸಮಾರೋಪ ಗಟ್ಟಿ ಸಾಹಿತ್ಯ ಹೊರಬರಲಿ –ದೇಶಪಾಂಡೆ
ಕನ್ನಡ ಸಾಹಿತ್ಯ ವಚನ ಮತ್ತು ದಾಸ ಸಾಹಿತ್ಯದಿಂದಾಗಿ ಜಾಗತಿಕ ಸಾಹಿತ್ಯದ ಮಟ್ಟದಲ್ಲಿ ತನ್ನದೇ ಆದ ಮೌಲ್ಯವನ್ನು, ಶ್ರೇಷ್ಠತೆ ಯನ್ನು ಹೊಂದಿದೆ. ಕನ್ನಡ ಭಾಷೆ ಹಾಗೂ ಸಾಹಿತ್ಯದ ಗುಣಮಟ್ಟ ಆದರಿಸಿ ಶಾಸ್ತ್ರೀಯ ಭಾಷೆಯ ಸ್ಥಾನಮಾನವನ್ನು ಸಿಕ್ಕಿರುವುದು ಹೆಮ್ಮೆಯ ಸಂಗತಿಯಾಗಿದೆ, ಈ ನಿಟ್ಟಿನಲ್ಲಿ ಇಂದಿನ ಕವಿಗಳು ಹಿಂದಿನ ಸಾಹಿತ್ಯ ಪರಂಪರೆಯನ್ನು ಶಿಸ್ತಿನಿಂದ ಅಧ್ಯಯನ ಮಾಡಿ ಗಟ್ಟಿ ಕಾವ್ಯ ರಚಿಸಬೇಕು ಎಂದು ಹಿರಿಯ ಸಾಹಿತಿಗಳಾದ ಡಾ. ಎಂ ಜಿ ದೇಶಪಾಂಡೆ ತಿಳಿಸಿದರು.
ಅವರು ಅತಿವಾಳೆ ಸಾಂಸ್ಕೃತಿಕ ಪ್ರತಿಷ್ಠಾನ ದಿನಾಂಕ 23.07.2023 ರಂದು ಸಂಜೆ 5 ಗಂಟೆಗೆ ಏರ್ಪಡಿಸಿದ ಒಂದು ದಿನದ ರಾಜ್ಯ ಮಟ್ಟದ ಕಾವ್ಯ ಕಮ್ಮಟದ ಸಮಾರೋಪ ಸಮಾರಂಭದಲ್ಲಿ ಸಮಾರೋಪ ಭಾಷಣ ಮಾಡಿದರು.
ಅಧ್ಯಕ್ಷತೆಯನ್ನು ಕರ್ನಾಟಕ ಲೇಖಕಿಯರ ಸಂಘದ ಜಿಲ್ಲಾ ಅಧ್ಯಕ್ಷರಾದ ಭಾರತಿ ವಸ್ತ್ರದ್ ವಹಿಸಿಕೊಂಡು ಮಾತನಾಡುತ್ತಾ ಬೀದರ ನ ಸಾಹಿತ್ಯ ಕ್ಷೇತ್ರದಲ್ಲಿ ಮಹಿಳೆಯರ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಿರುವುದು ಸಂತಸವನ್ನುAಟು ಮಾಡುತ್ತಿದೆ, ಉದಯೋನ್ಮುಖ ಹಾಗೂ ಹೊಸದಾಗಿ ಸಾಹಿತ್ಯ ಕ್ಷೇತ್ರದಲ್ಲಿ ಪಾದಾರ್ಪಣೆ ಮಾಡಿದವರಿಗೆ ಇಂತಹ ಕಮ್ಮಟಗಳು ಬಹಳಷ್ಟು ಉಪಯೋಗಕಾರಿಯಾಗುತ್ತವೆ ಎಂದು ಹೇಳಿದರು.
ಮುಖ್ಯ ಅತಿಥಿಗಳಾಗಿ ಹಿರಿಯ ಸಾಹಿತಿ ಉಮಾಕಾಂತ ಮೀಸೆ ಆಗಮಿಸಿ ಮಾತಾಡುತ್ತಾ ಭಾಷೆ ಸಾಹಿತ್ಯ ಸರಿಯಾಗಿ ಅರ್ಥಮಾಡಿಕೊಳ್ಳಬೇಕಾದರೆ ವಿವಿಧ ರೀತಿಯ ಕಮ್ಮಟಗಳು ಬರಹರಗಾರರಿಗೆ ಅತಿ ಅವಶ್ಯಕವಾಗಿವೆ. ಈ ನಿಟ್ಟಿನಲ್ಲಿ ಅತಿವಾಳೆ ಸಾಂಸ್ಕೃತಿಕ ಪ್ರತಿಷ್ಠಾನ ನಿರಂತರವಾಗಿ ಇಂತಹ ಕಾರ್ಯಕ್ರಮಗಳನ್ನು ಆಯೋಜಿಸುತ್ತಿರುವುದು ಶ್ಲಾಘನೀಯ ಎಂದು ತಿಳಿಸಿದರು.
ಬೆಂಗಳೂರಿನ ಹಿರಿಯ ಸಾಹಿತಿ ಡಾ. ಬೇಲೂರು ರಘುನಂದನ್, ಕಮ್ಮಟದ ಆಯೋಜಕ ಡಾ. ಸಂಜೀವಕುಮಾರ ಅತಿವಾಳೆ ವೇದಿಕೆ ಮೇಲೆ ಉಪಸ್ಥಿತರಿದ್ದರು.
ಲಕ್ಷ್ಮಣ ಮೇತ್ರೆ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.