ಐತಿಹಾಸಿಕ ಯಶಸ್ಸಿಗೆ ಶ್ರಮಿಸಿದ ಎಲ್ಲಾ ವಿಜ್ಞಾನಿಗಳಿಗೂ ಶುಭಾಶಯಗಳು : ಶರದ್ ಘಂಟೆ
ಭಾರತದ ಹೆಮ್ಮೆಯ ISRO ಚಂದ್ರಯಾನ-3 “ವಿಕ್ರಂ ಲ್ಯಾಂಡರ್” ಅನ್ನು ಇಂದು ಯಶಸ್ವಿಯಾಗಿ ಚಂದ್ರನ ಮೇಲ್ಮೈ ಮೇಲಿರಿಸಿದೆ. ಈ ಮೂಲಕ ಚಂದ್ರನ ದಕ್ಷಿಣ ಧ್ರುವದಲ್ಲಿ ಲ್ಯಾಂಡರ್ ಇಳಿಸಿದ ವಿಶ್ವದ ಮೊದಲ ದೇಶ ಎಂಬ ಹೆಗ್ಗಳಿಕೆಗೆ ಭಾರತ ಪಾತ್ರವಾಗಿದೆ. ಈ ಯಶಸ್ಸು ಇಡೀ ವಿಶ್ವದ ವಿಜ್ಞಾನ ಲೋಕಕ್ಕೆ ಮಾರ್ಗದರ್ಶಿಯಾಗಲಿ. ಐತಿಹಾಸಿಕ ಯಶಸ್ಸಿಗೆ ಶ್ರಮಿಸಿದ ಎಲ್ಲಾ ವಿಜ್ಞಾನಿಗಳಿಗೂ ಶುಭಾಶಯಗಳು.