ಎಚ್ ಐ ವಿ ಏಡ್ಸ್ ಕುರಿತು ಅನಗತ್ಯ ಹೆದರಿಕೆ ಬೇಡ…. ಡಾ. ಶರಣಯ್ಯ ಸ್ವಾಮಿ
ಎಚ್ ಐ ವಿ ಏಡ್ಸ್ ರೋಗವು ಸಾಮಾನ್ಯವಾಗಿ ಒಬ್ಬರಿಗೆ ಒಬ್ಬರಿಂದ ಒಬ್ಬರಿಗೆ ಹರಡುವ ರೋಗವಲ್ಲ. ಅದು ಅಸುರಕ್ಷಿತ ಲೈಂಗಿಕ ಸಂಪರ್ಕ ಮತ್ತು ಸೋಂಕಿತ ವ್ಯಕ್ತಿಯ ರಕ್ತ ಪಡೆಯುವುದರಿಂದ, ಸಂಸ್ಕರಿಸಲ್ಪಡದ ಸೂಚಿ ಮತ್ತು ಸಿರೇಂಜುಗಳು ಒಬ್ಬರಿಂದ ಒಬ್ಬರು ಉಪಯೋಗಿಸು ವುದರಿಂದ ಬರುವ ರೋಗವಾಗಿದ್ದು, ಇದರ ಬಗ್ಗೆ ಎಲ್ಲರೂ ಜಾಗೃತಿ ವಹಿಸಬೇಕು.
ಅನಗತ್ಯವಾಗಿ ಹೆದರುವುದು ಮತ್ತು ಸೋಂಕಿತ ರೊಂದಿಗೆ ಕಳಂಕ ಮತ್ತು ತಾರತಮ್ಯವನ್ನು ಮಾಡುವುದು ಸೂಕ್ತವಲ್ಲ ಎಂದು ಕಾರಾಗೃಹದ ವೈದ್ಯಾಧಿಕಾರಿಗಳಾದ ಡಾ. ಶರಣಯ್ಯ ಸ್ವಾಮಿ ಅವರು ತಿಳಿಸಿದರು.
ಐಸಿಟಿಸಿ, ಬ್ರೀಮ್ಸ್ ಆಸ್ಪತ್ರೆಯ ಆಪ್ತ ಸಮಾಲೋಚಕ ಸಿದ್ದಪ್ಪ ಅವರು ಮಾತನಾಡಿ ಎಚ್ಐವಿ ಎಂದರೆ “ಹ್ಯೂಮನ್ ಇಮ್ಯುನೋ ಡೆಫಿಷಿಯನ್ಸಿ ವೈರಸ್”. ಈ ವೈರಾಣು ಮಾನವನ ದೇಹದಲ್ಲಿ ಮಾತ್ರ ಜೀವಂತ ಇರುವುದರಿಂದ ಈ ರೋಗವು ಅಸುರಕ್ಷಿತ ಲೈಂಗಿಕ ಸಂಪರ್ಕ ಮತ್ತು ಸಂಸ್ಕರಿಸಲ್ಪಡದ ಸೂಜಿಗಳ ಬಳಕೆ ಮತ್ತು ಪರೀಕ್ಷಿಸಲ್ಪಡದ ರಕ್ತವನ್ನು ಪಡೆಯುವುದರಿಂದ ಮತ್ತು ಸೋಂಕಿತ ಗರ್ಭಿಣಿಯಿಂದ ಮಗುವಿಗೆ ಬರುವ ಸಾಧ್ಯತೆಗಳು ಇರುತ್ತವೆ. ಈ ನಾಲ್ಕು ವಿಧಾನಗಳನ್ನು ಬಿಟ್ಟು ಬೇರೆ ಯಾವುದೇ ಮಾರ್ಗದಿಂದ ಈ ರೋಗವು ಒಬ್ಬರಿಂದ ಒಬ್ಬರಿಗೆ ಹರಡುವುದಿಲ್ಲ. ಆದ್ದರಿಂದ ಇದರ ಬಗ್ಗೆ ಪ್ರತಿಯೊಬ್ಬರು ತಿಳಿದುಕೊಳ್ಳುವುದು ಅವಶ್ಯಕವಾಗಿದೆ.
ಎಚ್ಐವಿ ಸೋಂಕಿತ ವ್ಯಕ್ತಿಯು ತನ್ನ ರೋಗದ ಸ್ಥಿತಿಗತಿಯನ್ನು ಬೇಗ ತಿಳಿದುಕೊಂಡು ಚಿಕಿತ್ಸೆಯನ್ನು ಪಡೆದಲ್ಲಿ ಸಾಮಾನ್ಯ ಮನುಷ್ಯರಂತೆ ಬದುಕಲು ಸಾಧ್ಯವಾಗುತ್ತದೆ. ಎಲ್ಲಾ ಸರ್ಕಾರಿ ಆಸ್ಪತ್ರೆಗಳಲ್ಲಿ ಎ. ಆರ್.ಟಿ. ಕೇಂದ್ರಗಳಿದ್ದು, ಅವುಗಳಲ್ಲಿ ಅಆ4 ಪರೀಕ್ಷೆ ಮತ್ತು ವೈರಲ್ ಲೋಡ್ ಪರೀಕ್ಷೆಗಳು ಮಾಡಲಾಗುತ್ತದೆ. ಅವುಗಳ ಆಧಾರದ ಮೇಲೆ ಸೋಂಕಿತ ವ್ಯಕ್ತಿಗೆ ಚಿಕಿತ್ಸೆ ನೀಡಲಾಗುತ್ತದೆ. ಇದು ಸಂಪೂರ್ಣ ಉಚಿತ ವಾಗಿರುತ್ತದೆ. ರೋಗಿಯ ಮಾಹಿತಿಯನ್ನು ಗೌಪ್ಯವಾಗಿಡ ಲಾಗುತ್ತದೆ ಎಂದು ತಿಳಿಸಿದರು. ಮುಂದುವರೆದು ಮಾತನಾಡಿ, ಸೋಂಕಿತ ಗರ್ಭಿಣಿಯು ಮಾತ್ರೆಯನ್ನು ಪಡೆಯುವುದ ರೊಂದಿಗೆ ಆರೋಗ್ಯ ಸಲಹೆ ಯನ್ನು ಪಡೆದು ಆಸ್ಪತ್ರೆಯಲ್ಲಿ ಹೆರಿಗೆ ಯಾದಲ್ಲಿ ಮಗುವಿಗೆ ನೆವರ್ಪಿನ್ ಔಷಧವನ್ನು ನೀಡುವ ಮೂಲಕ ತಾಯಿ ಮತ್ತು ಮಗುವಿನ ಪೋಷಣೆ ಯನ್ನು ಆಸ್ಪತ್ರೆಯವರು ನಿರ್ವಹಿಸುವುದರಿಂದ ಮಗುವು ರೋಗ ಮುಕ್ತವಾಗಲು ಸಾಧ್ಯ ವಾಗುತ್ತದೆ ಎಂದರು.
ಐಸಿಟಿಸಿ ಪ್ರಯೋಗಶಾಲಾ ತಂತ್ರಜ್ಞಾಧಿಕಾರಿಯಾದ ಅರವಿಂದ ಕುಲಕರ್ಣಿ ಯವರು ಮಾತನಾಡಿ, ಭಾರತವನ್ನು 2030 ರವರೆಗೆ ಎಚ್ಐವಿ ಮುಕ್ತ ದೇಶವನ್ನಾಗಿ ಮಾಡುವ ಸಂಕಲ್ಪ ಹೊಂದಿದ್ದು, ಇದಕ್ಕೆ ಎಲ್ಲರೂ ಕೈಜೋಡಿಸಬೇಕು. ಹೊಸ ಪ್ರಕರಣಗಳು ಬರದಂತೆ ನೋಡಿಕೊಳ್ಳಲು ಜಾಗೃತಿ ಒಂದೇ ದಿವ್ಯ ಔಷಧವಾಗಿದ್ದು, ಯುವಕರಲ್ಲಿ ಮತ್ತು ಜನ ಸಾಮಾನ್ಯರಲ್ಲಿ ಹೆಚ್ಚು ಹೆಚ್ಚಿನ ಜಾಗೃತಿ ಕಾರ್ಯಕ್ರಮಗಳನ್ನು ಸರ್ಕಾರದಿಂದ ಮಾಡಲಾಗುತ್ತಿದೆ. ಆದ್ದರಿಂದ ಇದರ ಲಾಭವನ್ನು ಎಲ್ಲರೂ ಪಡೆಯಬೇಕು. ಸಂಕೋಚ, ಅನುಮಾನವಿದ್ದಲ್ಲಿ ಯಾವುದೇ ಪ್ರಶ್ನೆಗಳನ್ನು ಕೇಳಲು ಉಚಿತ ದೂರವಾಣಿ ಸಂಖ್ಯೆ 1097 ಗೆ ಕರೆ ಮಾಡಿ, ಸಮಸ್ಯೆಗಳಿಗೆ ಸಮಾಧಾನ ಪಡೆದುಕೊಳ್ಳ ಬಹುದು ಎಂದು ವಿವರಿಸಿದರು. ಅದೇ ರೀತಿ ಹೆಚ್ಐವಿ ಸೋಂಕು ಕರೆದರೆ ಮಾತ್ರ ಬರುವ ವೈರಾಣುವಾಗಿದೆ, **ಕರೆದರೆ ಮಾತ್ರ ಬರುವೆನು ನಾ ಹೆಚ್ಐವಿ ಎಂದು ಕರೆಯುವರು ನನ್ನ ನಾ ಯಾರ ವೈರಿಯೂ ಅಲ್ಲ. ಕಂಡ ಕಂಡವರಲ್ಲಿ ಹೋಗುವುದಿಲ್ಲ ಎಚ್ಐವಿ ಎಂದು ಕರೆಯುವರು ನನ್ನ ಎನ್ನುವ ಸ್ವರಚಿತ ಕವನವನ್ನು ಹೇಳುವ ಮೂಲಕ ಎಲ್ಲರ ಗಮನವನ್ನು ಸೆಳೆದರು. ಅದೇ ರೀತಿ ರಕ್ತದಾನ ಶ್ರೇಷ್ಠದಾನ ಎನ್ನುವ ಸ್ವರಚಿತ ಜಾಗೃತಿ ಗೀತೆಯನ್ನು ಹಾಡಿ ಎಲ್ಲರಲ್ಲಿ ರಕ್ತ ದಾನದ ಮಹತ್ವವನ್ನು ವಿವರಿಸಿ ದರು. ಕಾರ್ಯಾಗಾರದ ಅಧ್ಯಕ್ಷತೆಯನ್ನು ವಹಿಸಿದ್ದ ಜೈಲರ್ ಟಿ.ಬಿ.ಭಜಂತ್ರಿ ಅವರು ಮಾತನಾಡಿ, ಎಚ್ಐವಿ ಏಡ್ಸ್ ಕುರಿತು ಪ್ರತಿಯೊಬ್ಬರು ಸಂಪೂರ್ಣ ಮಾಹಿತಿಯನ್ನು ಪಡೆಯುವುದರಿಂದ ರೋಗದ ಬಗ್ಗೆ ಹೆದರಿಕೆಯು ಬರುವುದಿಲ್ಲ. ಜೊತೆಗೆ ಸೋಂಕಿತರೊAದಿಗೆ ಕಳಂಕ ಮತ್ತು ತಾರತಮ್ಯ ಮಾಡದೆ ಅವರಿಗೂ ನಮ್ಮಂತೆ ನೋಡಿಕೊಳ್ಳಲು ಧೈರ್ಯ ಬರುತ್ತದೆ. ಸೋಂಕಿತರಿಗೂ ಆತ್ಮಸ್ಥೈರ್ಯ ನೀಡಲು ಅನು ಕೂಲವಾಗುತ್ತದೆ, ಆದ್ದರಿಂದ ಸಿಬ್ಬಂದಿಗಳು ಅನಗತ್ಯ ಹೆದ ರುವುದು ಬೇಡ ,ಎಂದು ನುಡಿದರು. ಕಾರ್ಯಕ್ರಮದಲ್ಲಿ ಔಷಧ ವಿತರಣಾಧಿಕಾರಿ ಸಂತೋಷ ರೆಡ್ಡಿ, ಕಾರಾಗೃಹದ ಸಿಬ್ಬಂದಿಗಳು ಮತ್ತು ಬಂದಿಗಳು ಉಪಸ್ಥಿತರಿದ್ದರು.