ಬೀದರ್

ಉತ್ತಮ ರೀತಿಯಿಂದ  ಹೈನುಗಾರಿಕೆ ಉದ್ಯಮ ಮಾಡಿದ : ನಾರಾಯಣರಾವ್ ಸುಣಗಾರ

ಮಂಗಳವಾರ  ಚಿಟಗುಪ್ಪ ತಾಲ್ಲೂಕಿನ  ಬೇಮಳಖೇಡ ಗ್ರಾಮದ  ಹೈನುಗಾರಿಕೆ ಸುಧಾರಿತ ಪ್ರಗತಿಪರ ರೈತ  ನಾರಾಯಣ ರಾವ್ ಸುಣಗಾರ ಅವರ ಹೊಲದಲ್ಲಿ   ರಿಲಯನ್ಸ್ ಫೌಂಡೇಷನ್ ಬೀದರ್ ಮತ್ತು ಸೇಡ್ಸಿ ಸಂಸ್ಥೆ ಸಹಯೋಗದಲ್ಲಿ ಪ್ರಗತಿಪರ ಹೈನುಗಾರಿಕೆ ರೈತರ ಕ್ಷೇತ್ರ ಭೇಟಿ  ಅಧ್ಯಯನ ಪ್ರವಾಸ ಕಾರ್ಯಕ್ರಮ ಜರುಗಿತು.  ಸೇಡ್ಸಿ ಸಂಸ್ಥೆ ಶ್ರೀನಿವಾಸ್, ಡಾ. ಎಸ್ ಎಸ್ ಹಿರೇಮಠ, , ರಾಮಚಂದ್ರ ಶೇರಿಕಾರ್, ಸಂಗಪ್ಪ ಅತಿವಾಳ, ಮಹೇಶ ಕಣಜೆ, ಸುನೀಲ್, ಕೃಷ್ಣ  ಇತರರಿದ್ದರು.
 ಚಿಟ್ ಗುಪ್ಪಾ
ಕೃಷಿಯಲ್ಲಿ ಹೈನುಗಾರಿಕೆ ಪಾತ್ರ ವಿಶಿಷ್ಠವಾದದ್ದು ಆಗಿದೆ. ತಾಲೂಕಿನ ಬೇಮಳಖೇಡ  ಗ್ರಾಮದ ಹೈನುಗಾರಿಕೆ ಪ್ರಗತಿಪರ ರೈತ  ನಾರಾಯಣರಾವ್ ಸುಣಗಾರ ಅವರು ಕಳೆದ ಐದಾರು ವರ್ಷಗಳಿಂದ  ಉತ್ತಮ ರೀತಿಯಿಂದ  ಹೈನುಗಾರಿಕೆ ಉದ್ಯಮ ಮಾಡಿ  ತನ್ನ ಕುಟುಂಬದ ಆರ್ಥಿಕತೆ ಸುಧಾರಿಸುವ ಮೂಲಕ ಹಾಗೂ ವಲಸೆ ಹೋಗುವ ಯುವಕರಿಗೆ  ಇವರು ಗ್ರಾಮದಲ್ಲಿಯೇ ಕುಳಿತುಕೊಂಡು  ಉತ್ತಮ ರೀತಿಯ ಜೀವನ ಸಾಗಿಸಿ ಇಲ್ಲಿಯೇ ಬದುಕು ಕಟ್ಟಿಕೊಳ್ಳುವ ಬಗ್ಗೆ  ತಿಳಿಸುತ್ತಾ  ತಾವು ಕೂಡ ಎಲ್ಲರಿಗೆ ಮಾದರಿಯಾಗಿದ್ದಾರೆ . ಇಂತಹ ಪ್ರಗತಿಪರ ರೈತರ  ಹೊಲಕ್ಕೆ ಎಲ್ಲವರು  ಕ್ಷೇತ್ರ ಭೇಟಿ ನೀಡಿ  ಖುದ್ದಾಗಿ ಸ್ಥಳದಲ್ಲಿಯೇ  ಎಲ್ಲವುಗಳ ಅನುಭವವನ್ನು ಪಡೆಯಬೇಕು  ಎಂದು  ರಿಲಯನ್ಸ್ ಫೌಂಡೇಶನ್  ಜಿಲ್ಲಾ ಕಾರ್ಯಕ್ರಮ ವ್ಯವಸ್ಥಾಪಕ  ರಾಮಚಂದ್ರ ಸೇರಿಕಾರ್ ನುಡಿದರು.
 ಜಿಲ್ಲೆಯ ಪ್ರಗತಿಪರ ರೈತರಿಗೆ  ಕೈಗೊಂಡ ಮೂರು ದಿನಗಳ  ಪ್ರಗತಿಪರ ರೈತರ ಹೈನುಗಾರಿಕೆ ತರಬೇತಿ ಕಾರ್ಯಕ್ರಮದ ಮೂರನೇ ದಿನವಾದ  ಮಂಗಳವಾರ ಎಲ್ಲಾ ಹೈನುಗಾರಿಕೆ ರೈತರಿಗೆ  ತಾಲೂಕಿನ ಬೇಮಳ ಖೇಡ ಗ್ರಾಮದ ರೈತ  ನಾರಾಯಣ ರಾವ  ಸುಣಗಾರ ಅವರ  ಡೈರಿ ಫಾರ್ಮ್ ಗೆ  ಕ್ಷೇತ್ರ ಅಧ್ಯಯನ ಪ್ರವಾಸ  ಕೈಗೊಂಡು  ಅವರ ಡೈರಿ ಫಾರ್ಮ್ ನಲ್ಲಿರುವ  ನೈಜ ಸಂಗತಿಗಳನ್ನು  ಶಿಬಿರಾರ್ಥಿಗಳಿಗೆ ತಿಳಿಸುವ ಮೂಲಕ ಮಾತನಾಡಿದ ಅವರು ಸನಾತನದ ಧರ್ಮದ ಕಾಲದಿಂದಲೂ ಹೈನುಗಾರಿಕೆ ರೈತರ ಪಾಲನೆ ಪೋಷಣೆ ಮಾಡುತ್ತಾ ಕೈಹಿಡಿದು ನಡೆಸುತ್ತಾ ಸಾಗಿದೆ. ಹೈನುಗಾರಿಗೆ ಹಲವಾರು ಸಮೂದಾಯಗಳ ಆರ್ಥಿಕತೆ ಹೆಚ್ಚಿಸಿ ಸ್ವಾವಲಂಭಿ ಬದುಕು ನೀಡಲು ಪ್ರಮುಖವಾಗಿದೆ. ಆದುದರಿಂದ ಜಿಲ್ಲೆಯ ರೈತರಿಗೆ ಈ ಪ್ರದೇಶ ಹೈನುಗಾರಿಕೆಕೆ ಉತ್ತಮವಾಗಿದೆ. ಇಂತಹ ವಾತವರಣದಲ್ಲಿ ನುರಿತ ತಜ್ಞರ ಮಾಹಿತಿ ಪಡೆದು ಉತ್ತಮ ರೀತಿಯ ಜಾನುವಾರುಗಳನ್ನು ಸಾಕಿ , ಹೆಚ್ಚಿನ ರೀತಿಯ ಹಾಲನ್ನು ಉತ್ಪಾದಿಸುವ ಮೂಲಕ ಎಲ್ಲರು ಉತ್ತಮ ಬದುಕು ಕಂಡುಕೊಳ್ಳಬೇಕಾಗಿದೆ ಎಂದರು.
  ಸೇಡ್ಸಿ ಸಂಸ್ಥೆ(ಸೆAಟರ್ ಆಫ್ ಎಕ್ಷಲೇನಸ್ ಫಾರ್ ಡೈರಿ ಸ್ಕೀಲ್ಸ್ ಆಫ್ ಇಂಡಿಯಾ) ನುರಿತ ತಜ್ಞಾ ಶ್ರೀನಿವಾಸ್ ಮಾತನಾಡಿ ಪ್ರಗತಿಪರ ರೈತ ನಾರಾಯಣರಾವ್ ಸುಣಗಾರ ಅವರು ತಮ್ಮ ಜಮೀನಿನಲ್ಲಿ ಉತ್ತಮವಾದ ಶಡ್ದ್ ನಿರ್ಮಿಸಿ  ಸುಮಾರು 50ಕ್ಕಿಂತ ಹೆಚ್ಚಿನ ಮುರ್ರಾ ಎಮ್ಮೆ, ದೇಸಿ ಎಮ್ಮೆ, ಜಾಫರ್ಅಂಗಿ ಎಮ್ಮೆ ಸೇರಿದಂತೆ ವಿವಿಧ ತಳಿಯ  ಎಮ್ಮೆಗಳನ್ನು ಸಾಕಿ ಅವುಗಳಿಂದ ದಿನಾಲು 500 ನೂರಕ್ಕಿಂತ ಹೆಚ್ಚಿನ ಲಿಟರಗಳಲ್ಲಿ ಹಾಲನ್ನು ಮಾರಾಟ ಮಾಡಿ , ಅಧಿಕ ಆದಾಯ ಗಳಿಸುವುದರ ಮೂಲಕ  ಸಾರ್ಥಕ ಬದುಕು ಸಾಗಿಸುತ್ತಿದ್ದು ಎಲ್ಲರಿಗೂ ಮಾದರಿಯಾಗಿದ್ದಾರೆ. ಇವರಂತೆ ಎಲ್ಲರೂ  ಹಳ್ಳಿಗಾಡಿನಲ್ಲಿಯೇ ಉಳಿದುಕೊಂಡು  ಇಲ್ಲಿಯೇ ಇರುವ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಿಕೊಂಡು ನುರಿತ ರೈತರ ಅನುಭವ ಪಡೆದುಕೊಂಡು ತಾವಿರುವ ಸ್ಥಳಗಳಲ್ಲಿಯೇ ಉತ್ತಮ ರೀತಿಯ ಹಾಲಿನ ಉತ್ಪಾದನೆ ಮಾಡಿ ತಮ್ಮ ಬದುಕು ಬಂಗಾರವಾಗಿಸಿಕೊಳ್ಳಬಹುದು ಎಂದರು.
 ಸೇಡ್ಸಿ ಸಂಸ್ಥೆಯ  ಇನ್ನೋರ್ವ ಪ್ರಮುಖ ವೈದ್ಯ ಡಾ. ಎಸ್ ಎಸ್ ಹಿರೇಮಠ ಅವರು ಮಾತನಾಡಿ , ಗುಣಮಟ್ಟದ ಹಾಲು ಉತ್ಪಾದನೆ, ಸಂಗ್ರಹಣೆ,ಸAಸ್ಕರಣೆ, ಮತ್ತು ಹಾಲಿನ ಉತ್ಪನ್ನಗಳ ಮೂಲಕ ಜಿಲ್ಲೆಯ ರೈತರು ಹೈನುಗಾರಿಕೆಯಿಂದ ಉತ್ತಮವಾದ ಲಾಭಪಡೆಯಬಹುದು. ಹೈನುಗಾರಿಕೆ ರೈತರಿಗಾಗಿ ಸರಕಾರ, ಸರಕಾರೇತರ ಸಂಸ್ಥೆಗಳು ಹೈನುಗಾರಿಕೆ ಬಲಪಡಿಸಲು ಹಗಲಿರುಳು ಶ್ರಮಿಸುತ್ತಿವೆ. ಆದುದರಿಂದ ರೈತರ ಹಾಲಿನ ಗುನಂಟ್ಟವನ್ನು ಹೆಚ್ಚಿಸಲು ಮತ್ತು ಸಂಘಟಿತ ಹಾಲು ಸಂಗ್ರಹಣೆಯ ಪಾಲನ್ನು ಹೆಚ್ಚಿಸುವ ಗುರಿಗಾಗಿ ಜಿಲ್ಲೆಯಲ್ಲಿ ರಿಲಯನ್ಸ್ ಫೌಂಡೇಷನ್ ಸದಕಾಲ ರೈತರ ಏಳಿಗೆಗೆ ಬದ್ದವಾಗಿದೆ. ಜಿಲ್ಲೆಯ ಹೈನುಗಾರಿಕೆಯ ರೈತರು ಸರಕಾರ ಮತ್ತು ಸರಕಾರೇತರ ಸಂಸ್ಥೆಗಳ ಸದುಪಯೋಗ ಪಡೆದುಕೊಂಡು ಉತ್ತಮ ರೀತಿಯ ಹೈನುಗಾರಿಕೆ ಮಾಡಿಕೊಳ್ಳಬಹುದು ಎಂದರು.
 ಇದೇ ವೇಳೆ ಎಲ್ಲಾ ರೈತರಿಗೆ ನಾರಾಯಣರಾವ್ ಸುಣಗಾರ ಅವರ ಡೈರಿ ಫಾರ್ಮ್ ನಲ್ಲಿ ಜಾನುವಾರುಗಳಲ್ಲಿ ಕಾಣಿಸುವ ಪ್ರಮುಖ ರೋಗಗಳಾದ ಕಾಲುಬಾಯಿ ರೋಗ, ಬಂಜೆತನ, ಕೆಚ್ಚಲು ಊತ, ಮೊಲೆ ದ್ವಾರ ಮುಚ್ಚಿ ಹೋಗುವುದು, ಕೆಚ್ಚಲಬಾವು, ಆಜೀರಣತೆ, ಹೊಟ್ಟೆ ಉಬ್ಬರ, ಅಲರ್ಜಿ ಅಥವಾ ವಿಷ ಹುಳುವಿನ ಕಡಿತ, ಮಂಡಿ ಊತ, ಹಾಲಿನಲ್ಲಿ ರಕ್ತ, ಅತಿಸಾರ, ಜ್ವರ, ಚರ್ಮದ ಗಂಟು, ಇನ್ನಿತರ ರೋಗಗಳಿಗೆ ನಾಟಿ ಔಷಧಿ ಸಿದ್ದಪಡಿಸಿ ಅವುಗಳಿಗೆ ಯಾವ ರೀತಿ ನೀಡಬೇಕು ಹಾಗೂ ಜಾನುವಾರುಗಳಿಗೆ ಮನೆಯಲ್ಲಿಯೇ ಯಾವ ರೀತಿ ವಾಸಿ ಮಾಡಬೇಕು ಎನ್ನುವ ಬಗ್ಗೆ ಎಲ್ಲಾ ರೈತರಿಗೆ ಪ್ರತ್ಯಕ್ಷವಾಗಿ ಮಾಹಿತಿ ನೀಡಿ ಅವರಿಂದಲೇ ಮನೆ ಮದ್ದಿನ ಔಷಧಿ ತಯಾರಿಸುವ ಬಗ್ಗೆ ತಿಳಿಸಲಾಯಿತು.
ಜಿಲ್ಲಾ ಕಾರ್ಯಕ್ರಮ ವ್ಯವಸ್ಥಾಪಕ  ರಾಮಚಂದ್ರ ಶೇರಿಕಾರ್, ಸಂಗಪ್ಪ ಅತಿವಾಳ, ಮಹೇಶ ಕಣಜೆ, ಸುನೀಲ್, ಕೃಷ್ಣ , ಬಸವರಾಜ್, ಸಂತೋಷ, ಶ್ಯಾಮ್, ಪ್ರೇಮ್, ಮಧುಕರ್, ರಾಜಕುಮಾರ್, ಇಂದೂಮತಿ, ನಿರ್ಮಲ, ಮಹಾದೇವಿ, ಶಾಂತಾಬಾಯಿ, ಜಗದೇವಿ, ಸರಸ್ವತಿ, ಜಯಶ್ರೀ,ಮಲ್ಲಿಕಾರ್ಜುನ ದೇವಪ್ಪ, ರೇವಣಸಿದ್ದಪ್ಪ ಜಾಡರ್, ಅಮಿತ್, ಮನ್ಮಥ, ಧನರಾಜ್ ,ಬಾಲಾಜಿ ಮೇತ್ರೆ  ಸೇರಿದಂತೆ ಇತರರಿದ್ದರು.
Ghantepatrike kannada daily news Paper

Leave a Reply

error: Content is protected !!