ಬೀದರ್

ಇತರರಿಗೆ ಮಾದರಿಯಾಗುವ ರೀತಿಯಲ್ಲಿ ಬದುಕು ಸಾಗಿಸಬೇಕು-ನ್ಯಾಯಾಧೀಶ ಎಸ್.ಕೆ.ಕನಕಟ್ಟೆ

ಬೀದರ, ಜುಲೈ 19 – ಮದುವೆ ಮತ್ತು ಕುಟುಂಬ ಸಾಮಾಜಿಕವಾಗಿ ಹೆಚ್ಚಿನ ಸಾಮಾಜಿಕ ಪ್ರಗತಿಯ ಹಂತವನ್ನು ಸೂಚಿಸುತ್ತದೆ. ಇದು ಭಾವನೆ ಮತ್ತು ಸಾಮರಸ್ಯ ಮತ್ತು ಸಂಸ್ಕೃತಿಯ ಜಗತ್ತಿನಲ್ಲಿ ಮನುಷ್ಯನ ಪ್ರವೇಶವನ್ನು ಸೂಚಿಸುತ್ತದೆ. ಕುಟುಂಬ ಸಂತಸವಾಗಿದ್ದರೆ ಇಡೀ ಸಮುದಾಯ ಮತ್ತು ಸಮಾಜ ಎರಡು ಸುಂದರವಾಗಿರುತ್ತವೆ. ಬದಲಾದ ಕಾಲಘಟ್ಟದಲ್ಲಿ ದಂಪತಿಗಳಿಬ್ಬರು ಚಿಕ್ಕ ಪುಟ್ಟ ವಿಚಾರಗಳಿಗೆ ಪೋಲಿಸ್ ಠಾಣೆ ನ್ಯಾಯಾಲಯಕ್ಕೆ ಅಲೆದಾಡುವ ಬದಲಾಗಿ ಮನೆಯ, ಗ್ರಾಮದ ಹಿರಿಯರ ಮಾತನ್ನು ಕೇಳಿ ನೆಮ್ಮದಿಯಿಂದ ಬದುಕಬೇಕು ಆಗಲೇ ಸಂಸಾರಕ್ಕೊAದು ಅರ್ಥ ಬರುತ್ತದೆ. ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಮೂಲಕ ರಾಜಿ ಸಂಧಾನ ಮಾಡಿಕೊಂಡ ದಂಪತಿಗಳು ಇತರರಿಗೆ ಮಾದರಿಯಾಗುವ ರೀತಿಯಲ್ಲಿ ಬದುಕು ಸಾಗಿಸಬೇಕೆಂದು ಹಿರಿಯ ಸೀವಿಲ್ ನ್ಯಾಯಾಧೀಶರು ಹಾಗೂ ಸದಸ್ಯ ಕಾರ್ಯದರ್ಶಿಗಳಾದ ಎಸ್.ಕೆ.ಕನಕಟ್ಟೆ ಹೇಳಿದರು.
ಕಲಬುರ್ಗಿ ಜಿಲ್ಲೆಯ ಜೇವರ್ಗಿ ತಾಲೂಕಿನ ಯಡ್ರಾಮಿಯ ವಿಠಲ್ ತಂದೆ ಲಕ್ಷ್ಮಣ ಇವರು ಬೀದರ ನಗರದ ಸುನೀತಾ ಅವರೊಂದಿಗೆ ಸಾಂಪ್ರದಾಯಿಕವಾಗಿ ಮದುವೆ ಆಗಿದ್ದರು. ಅವರಿಬ್ಬರಿಗೆ ಒಂದು ಗಂಡು ಮಗು ಇದ್ದು ಅದು ಮರಣ ಹೊಂದಿರುತ್ತದೆ. ಮಗುವಿನ ಮರಣ ಹೊಂದಿದ ನಂತರ ವೈಮನಸ್ಸುಗಳಿಂದ ಬೈಯುವುದು ಹೊಡೆಯುವುದು ಮಾಡುತ್ತಾರೆ ಎಂದು ಸುನೀತಾ ತನ್ನ ಗಂಡನ ಬಗ್ಗೆ ದೂರನ್ನು ತನ್ನ ತವರಿಗೆ ಸುದ್ದಿ ಮುಟ್ಟಿಸಿ ತರುವಾಯ ಮಹಿಳಾ ಪೋಲಿಸ ಠಾಣೆಗೆ ಹಾಜರಾಗಿ ದೂರನ್ನು ನೀಡಿದರು.
ಮಹಿಳಾ ಪೋಲಿಸ ಠಾಣೆಯ ಸಿ.ಪಿ.ಐ.ವಿಜಯಕೂಮಾರ ಅವರು ರಾಜಿ ಸಂದಾನಕ್ಕಾಗಿ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರಕ್ಕೆ ಕಳುಹಿಸಿರುತ್ತಾರೆ, ನಂತರ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದಿಂದ ನೋಟಿಸ್ ಜಾರಿ ಮಾಡಿ ಸದರಿ ದಂಪತಿಗಳನ್ನು ಪ್ರಾಧಿಕಾರಕ್ಕೆ ಕರೆಯಸಿ ಅವರ ಕೌಟುಂಬಿಕ ಸಮಸ್ಯೆಗಳನ್ನು ಆಲಿಸಿ, ಗಂಡನನ್ನು ಬುದ್ಧಿಮಾತು ಹೇಳಿ ಒಂದಾಗುವುದು ಅತಿ ಮುಖ್ಯವಾಗಿರುತ್ತದೆ ಮತ್ತು ಕಾನೂನಾತ್ಮಕ ವಿಚಾರಗಳನ್ನು ತಿಳಿಸಿ ಮನಪರಿವರ್ತನೆಗೊಳಿಸಿ ಜುಲೈ 19 ರಂದು ದಂಪತಿಗಳಿಬ್ಬರನ್ನು ರಾಜಿ ಸಂಧಾನದ ಮೂಲಕ ಒಂದುಗೂಡಿಸಿ ಸಿಹಿ ಹಂಚಿ ದಂಪತಿಗಳನ್ನು ಒಂದು ಮಾಡಿರುತ್ತಾರೆ.
ಸದರಿ ದಂಪತಿಗಳ ಹತ್ತಕ್ಕೂ ಅಧಿಕ ಸಂಬAಧಿಕರು ಹಾಗೂ ಮಹಿಳಾ ಪೋಲಿಸ ಠಾಣೆಯ ಸಿ.ಪಿ.ಐ. ವಿಜಯಕೂಮಾರ ಅವರು ಹಾಗೂ ಪ್ರಾಧಿಕಾರದ ಸಿಬ್ಬಂದಿಗಳಾದ, ಜಗಧೀಶ್ವರ ದೊರೆ, ಆಕಾಶ ಸಜ್ಜನ, ಜೀವನ, ಮತ್ತು ಯೋಹನ, ಮಂಜುನಾಥ ರೊಟ್ಟಿ ಮತ್ತಿತರರು ರಾಜಿ ಸಂಧಾನದ ಮೂಲಕ ಒಂದಾದ ದಂಪತಿಗಳಿಗೆ ಶುಭಕೋರಿದರು.
Ghantepatrike kannada daily news Paper

Leave a Reply

error: Content is protected !!