ಬೀದರ್

ಅತಿಥಿ ಉಪನ್ಯಾಸಕರುಗಳಿಗೆ ಸೇವಾ ಭದ್ರತೆ ನೀಡದೇ ನಿರಂತರವಾಗಿ ಎಲ್ಲಾ ಸರ್ಕಾರಗಳು ಮೋಸ : ಅನೀಲಕುಮಾರ ಶಿಂಧೆ

ಬೀದರ: ಕರ್ನಾಟಕ ರಾಜ್ಯದಲ್ಲಿ ಸುಮಾರು 430 ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಿದ್ದು, ಈ ಕಾಲೇಜುಗಳಲ್ಲಿ ಸುಮಾರ 12 ಸಾವಿರಕ್ಕಿಂತಲೂ ಹೆಚ್ಚು ಜನ ಅಥಿತಿ ಉಪನ್ಯಾಸಕರು ಸುಮಾರು 2 ದಶಕಗಳಿಂದ ಸೇವೆ ಸಲ್ಲಿಸುತ್ತಾ ಬರುತ್ತಿದ್ದಾರೆ. ಶೇ 80% ಪ್ರತಿಶತದಷ್ಟು ಅತಿಥಿ ಉಪನ್ಯಾಸಕರುಗಳಿದ್ದಾರೆ, ಶೇ 20% ಖಾಯಂ ಅಧ್ಯಾಪಕರಿದ್ದು, ಸರ್ಕಾರಿ ಡಿಗ್ರಿ ಕಾಲೇಜುಗಳು ನಡೆಯುತ್ತಿರುವುದು ಅಥಿತಿ ಉಪನ್ಯಾಸಕರಿಂದಲೇ. ಹೀಗಿರುವಾಗ ಸುಮಾರು 10, 15, 20 ವರ್ಷಗಳಿಂದ ಸೇವೆ ಸಲ್ಲಿಸುತ್ತಾ ಬರುತ್ತಿರುವ ಅತಿಥಿ ಉಪನ್ಯಾಸಕರುಗಳಿಗೆ ಸೇವಾ ಭದ್ರತೆ ನೀಡದೇ ನಿರಂತರವಾಗಿ ಎಲ್ಲಾ ಸರ್ಕಾರಗಳು ಮೋಸ ಮಾಡುತ್ತ ಬರುತ್ತಿವೆ. ಕೂಡಲೇ ಖಾಯಂಗೊಳಿಸಬೇಕೆಂದು ಕರ್ನಾಟಕ ರಾಜ್ಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳ ಅತಿಥಿ ಉಪನ್ಯಾಸಕರ ಒಕ್ಕೂಟದ ಜಿಲ್ಲಾಧ್ಯಕ್ಷ ಅನೀಲಕುಮಾರ ಶಿಂಧೆ ತಿಳಿಸಿದ್ದಾರೆ.
ನಗರದ ಅಂಬೇಡ್ಕರ್ ವೃತ್ತದ ಸಮೀಪದಲ್ಲಿರುವ ಶ್ರೀ ಸಿದ್ದಿ ವಿನಾಯಕ ಕಾಲೇಜು ಸಭಾಂಗಣದಲ್ಲಿ ಕರ್ನಾಟಕ ರಾಜ್ಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳ ಅತಿಥಿ ಉಪನ್ಯಾಸಕರ ಒಕ್ಕೂಟದ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.
ಉಪನ್ಯಾಸಕರುಗಳ ಕೇವಲ ಕನಿಷ್ಠ ಸಂಬಳ 28 ರಿಂದ 32 ಸಾವಿರಗಳ ವೇತನ ಅದೂ ಕೇವಲ 6 ತಿಂಗಳು 8 ತಿಂಗಳು ಅಷ್ಟೇ ನೀಡುತ್ತಾರೆ. ಮಧ್ಯಂತರದಲ್ಲಿ ಖಾಯಂ ಅಧ್ಯಾಪಕರು ಬಂದ ತಕ್ಷಣವೇ ಕೆಲಸದಿಂದ ಹೊರಗೆ ಹೋಗಬೇಕು. ಅದೆಷ್ಟೋ ವರ್ಷಗಳ ಕಾಲ ಸೇವೆ ಸಲ್ಲಿಸಿ ಸರ್ಕಾರ ಕೊಡುವ ಕನಿಷ್ಠ ವೇತನದಲ್ಲಿ ದುಡಿದು ಸರ್ಕಾರಕ್ಕೆ ಕೋಟಿ ಕೋಟಿ ರೂಪಾಯಿಗಳನ್ನು ಅಥಿತಿ ಉಪನ್ಯಾಸಕರು ಉಳಿಸಿದ್ದಾರೆ.
ಹಲವಾರು ಅಥಿತಿ ಉಪನ್ಯಾಸಕರು ಸೇವೆಯಲ್ಲಿರುವಾಗಲೇ ಸಾವೀಗೀಡಾದರು, ಹೃದಯಘಾತದಿಂದ ಮರಣ ಹೊಂದಿದರು, ಆತ್ಮಹತ್ಯೆ ಮಾಡಿಕೊಂಡರು ಸರ್ಕಾರಗಳು ಕಿಂಚಿತ್ತೂ ಕಾಳಜಿ ತೋರಿಸಲಿಲ್ಲ. ಕನಿಷ್ಟ ಮಾನವೀಯತೆ ದೃಷ್ಟಿಯಿಂದ ಅವರ ಕುಟುಂಬಗಳಿಗೆ ಸಾಂತ್ವಾನದ ನುಡಿಯು ಕೂಡಾ ಹೇಳಲಿಲ್ಲ. ಈ ರಾಜ್ಯದಲ್ಲಿ ಅಥಿತಿ ಉಪನ್ಯಾಸಕರ ಸಮಸ್ಯೆಗೆ ಪರಿಹಾರ ಬೇಕೆ ಬೇಕು. ಸರ್ಕಾರದಲ್ಲಿ ಸಾಕಷ್ಟು ಹುದ್ದೆಗಳು ಖಾಲಿ ಇವೆ. ಸರ್ಕಾರಿ ಉಪನ್ಯಾಸಕರುಗಳಿಗೆ ಸೇವಾ ವಿಲಿನಾತಿ ಅಥವಾ ಸೇವಾ ಭದ್ರತೆ ಕೊಡಬೇಕು. ಅದೆಷ್ಟೋ ಅಥಿತಿ ಉಪನ್ಯಾಸಕರು ವಯೋನಿವೃತ್ತಿಯ ಅಂಚಿನಲ್ಲಿದ್ದಾರೆ. ಸರ್ಕಾರ ಈ ಸಮಸ್ಯೆಗಳಿಗೆ ಪರಿಹಾರ ಸೂಚಿಸಬೇಕು. ಅಥಿತಿ ಉಪನ್ಯಾಸಕರುಗಳ ಕುಟುಂಬಗಳು ನೆಮ್ಮದಿಯಿಂದ ಜೀವನ ಸಾಗಿಸುವಂತಾಗಬೇಕು. ಐದು ಗ್ಯಾರಂಟಿಗಳನ್ನು ಘೋಷಿಸಿದ ಸರ್ಕಾರ, ಅತಿಥಿ ಉಪನ್ಯಾಸಕರಿಗೆ ಖಾಯಂಗೊಳಿಸುವ ಕುರಿತು ಗ್ಯಾರಂಟಿ ನೀಡಬೇಕೆಂದು ಹುಮನಾಬಾದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಅತಿಥಿ ಉಪನ್ಯಾಸಕ ಮತ್ತು ಒಕ್ಕೂಟದ ಗೌರವಾಧ್ಯಕ್ಷ ಡಾ. ವೆಂಕಟ ಜಾಧವ ತಿಳಿಸಿದ್ದಾರೆ.

ಈ ಹಿಂದಿನ ಬಿಜೆಪಿ, ಜೆಡಿಎಸ್ ಸರ್ಕಾರಗಳು ಕೂಡಾ ಅಥಿತಿ ಉಪನ್ಯಾಸಕರುಗಳಿಗೆ ಸೇವಾ ಭದ್ರತೆ ನೀಡಲಿಲ್ಲ. ಸೇವಾ ವಿಲಿನಾತಿ ಮಾಡಲಿಲ್ಲ. ಈಗಿರುವ ಕಾಂಗ್ರೆಸ್ ಸರ್ಕಾರ ತನ್ನ ಪ್ರಣಾಳಿಕೆಯಲ್ಲಿ ಅತಿಥಿ ಉಪನ್ಯಾಸಕರಿಗೆ ಸೇವಾ ಭದ್ರತೆ ಕೊಡುತ್ತೇವೆ ಎಂಬುದಾಗಿ ಹೇಳಿದೆ, ಅಲ್ಲದೇ ಮಾನ್ಯ ಸಿದ್ಧರಾಮಯ್ಯನವರು ವಿರೋಧ ಪಕ್ಷದ ನಾಯಕರಾಗಿದ್ದಾಗ ಅತಿಥಿ ಉಪನ್ಯಾಸಕರಿಗೆ ಖಾಯಂಗೊಳಿಸಬೇಕೆಂದು ತಿಳಿಸಿದ್ದರು. ಆದರೆ ಅಧಿಕಾರಕ್ಕೆ ಬಂದ ಮೂರೇ ತಿಂಗಳಲ್ಲಿ ಮತ್ತೆ ಖಾಯಂ ಉಪನ್ಯಾಸಕರಿಗೆ ಅರ್ಜಿ ಕರೆದಿದ್ದಾರೆ. ಇದು ತಪ್ಪು. ಕೂಡಲೇ ಸರ್ಕಾರ ಅತಿಥಿ ಉಪನ್ಯಾಸಕರಿಗೆ ಖಾಯಂಗೊಳಿಸಬೇಕು. ಇಲ್ಲದಿದ್ದರೆ ರಾಜ್ಯದ 12 ಸಾವಿರ ಉಪನ್ಯಾಸಕರು ಹಾಗೂ 3 ಲಕ್ಷ ವಿದ್ಯಾರ್ಥಿಗಳೊಂದಿಗೆ ಬೆಂಗಳೂರಿನ ಫ್ರೀಡಂ ಪಾರ್ಕ್‍ನಲ್ಲಿ ಹೋರಾಟ ಮಾಡಬೇಕಾಗುತ್ತದೆ ಎಂದು ಜಿಲ್ಲಾಧ್ಯಕ್ಷ ಶಿಂಧೆ ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.
ಇದೇ ವೇಳೆ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಹಾಗೂ ಅತಿಥಿ ಉಪನ್ಯಾಸಕರಾದ ಚಂದ್ರಕಾಂತ ನಾರಾಯಣಪೂರೆ, ಕಾರ್ಯದರ್ಶಿ ಬಸವರಾಜ ಶೇರಿ, ಉಪನ್ಯಾಸಕರಾದ ಪ್ರದೀಪ ರಾಜೊಳೆ, ಸುಭಾಷ ಮಟಕಾರಿ, ಶರಣಪ್ಪ ಬಗ್ದೂರೆ, ಧನರಾಜ ತುಡಮೆ, ಗಾಯತ್ರಿ ಗಂಗು, ಬಾಲಾಜಿ ಪವಾಡೆ, ಮಹೇಶ್ವರಿ ಹೆಡೆ, ಸಂಗೀತಾ, ಬೇಬಿ ಚಿದ್ರಿ, ರೇಣುಕಾ ಭಗವತಿ, ಅಮರ ಮಾಳಗೆ, ಸುಜಾತಾ, ಚೈತನ್ಯ, ಡಾ. ಚೇತನ, ಡಾ. ನಿತೆಶಕುಮಾರ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Ghantepatrike kannada daily news Paper

Leave a Reply

error: Content is protected !!