ಹೆಚ್ಚುತ್ತಿರುವ ಜಾತಿಯತೆ, ಹೋರಾಟ ಅನಿವಾರ್ಯ-ಪ್ರೇಮಸಾಗರ ದಾಂಡೇಕರ್.
ಬೀದರ: ದೇಶದಾದ್ಯಂತ ಜಾತಿಯ ಪಿಡುಗು ದಿನೇ ದಿನೇ ಹೆಚ್ಚುತ್ತಿದ್ದು, ದಲಿತರು ಹೋರಾಟ ಮಾಡುವುದು ಅನಿವಾರ್ಯವಾಗಿದೆ ಎಂದು ಜಿಲ್ಲಾ ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆಯ ಅಧಿಕಾರಿ ಪ್ರೇಮಸಾಗರ ದಾಂಡೇಕರ್ ಹೇಳಿದರು. ದಿನಾಂಕ: 26-08-2023 ರಂದು ನಗರದ ಶಿವಾ ಇಂಟರ್ ನ್ಯಾಷ್ನಲ್ ಹೊಟೆಲ್‌ನಲ್ಲಿ ವಿವಿಧ ದಲಿತ ಸಂಘಟನೆಗಳಿAದ ಡಾ. ಅಂಬೇಡ್ಕರ ವಾದಿಗಳಾದ ದಿ: ಎಲ್.ಆರ್. ಬಾಲಿ ಹಾಗೂ ವಿಠಲ ಗದ್ದರ್ ರವರಿಗೆ ಆಯೋಜಿಸಲಾಗಿರುವ ನುಡಿ ನಮನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಶಿಕ್ಷಣ ಕ್ಷೇತ್ರದಲ್ಲಿ ಜಾತಿಯತೆ ಹೆಚ್ಚಾಗುತ್ತಿದ್ದು, ಮಾನಸಿಕ ಹಿಂಸೆ ತಾಳದೇ, ಕಳೆದ 10-12 ತಿಂಗಳಲ್ಲಿ ಸುಮಾರು 10 ಸಾವಿರಕ್ಕೂ ಹೆಚ್ಚು ಐ.ಐ.ಟಿ. ವಿದ್ಯಾರ್ಥಿಗಳು ಕಾಲೇಜು ಬಿಟ್ಟು, ಮನೆಗೆ ಮರಳಿದರೆ ಕೆಲವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿಸಿದರು.
ಕಾಲೇಜುಗಳಲ್ಲಿ ವಿದ್ಯಾರ್ಥಿಗಳ ಅಡ್ಡ ಹೆಸರುಗಳಿಂದ ಅವರನ್ನು ದಲಿತರು ಎಂದು ಗುರುತಿಸುತ್ತಿರುವ ಅಧಿಕಾರಿಗಳು ತಾರತಮ್ಯ ನೀತಿ ಅನುಸರಿಸುತ್ತಾ, ಮಾನಸಿಕವಾಗಿ ಹಿಂಸಿಸುತ್ತಿದ್ದಾರೆ ಎಂದು ಹೇಳಿದರು.
ಈ ಜಾತಿಯತೆ ಬರೆ ಭಾರತ ದೇಶದಲ್ಲಿಯೇ ಅಲ್ಲ, ಅಮೇರಿಕಾದಂತಹ ವಿದೇಶಗಳಲ್ಲಿಯೂ ತಾಂಡವವಾಡುತ್ತಿದ್ದು, ಅಲ್ಲಿ ಉನ್ನತ ವ್ಯಾಸಂಗ ಹಾಗೂ ನೌಕರಿ ಮಾಡುತ್ತಿರುವ ದಲಿತರನ್ನು ಶೋಷಣೆಗೆ ಒಳಪಡಿಸಿ, ಮಾನಸಿಕವಾಗಿ ಕುಗ್ಗಿಸಲಾಗುತ್ತಿದೆ ಎಂದು ವಿವರಿಸಿದರು.
ಜಾತಿಯತೆಯ ನೋವು ಅನುಭವಿಸಿದ ಬುದ್ಧಿ ಜೀವಿಗಳು, ಪ್ರಗತಿಪರರು, ಇದರ ವಿರುದ್ಧ ಧ್ವನಿಯೆತ್ತಿ ಹೋರಾಟ ಮಾಡುವುದು ಅನಿವಾರ್ಯವಾಗಿದೆ ಎಂದು ಹೇಳಿದಲ್ಲದೇ ಅನೇಕ ದಲಿತ ವಿದ್ಯಾರ್ಥಿಗಳು ಪದವಿ ಮುಗಿಸಿ ಮನೆಯಲ್ಲಿ ಕೂಡದೇ, ವಿವಿಧ ಉದ್ಯೋಗಗಳಲ್ಲಿ ತೊಡಗಿಸಿಕೊಂಡು, ಆರ್ಥಿಕವಾಗಿ ಸಬಲರಾಗಬೇಕು, ಅಲ್ಲದೇ ವಿವಿಧ ಕ್ರೀಡಾ ಪಟುಗಳಗಾಗಿ ಮುಂದುವರೆಯಬೇಕು ಎಂದು ಸಲಹೆ ನೀಡಿದರು.
ನಮ್ಮನ್ನಾಳುವ ರಾಜಕೀಯ ನಾಯಕರುಗಳು ಕೂಡ ಒಳ್ಳೆಯ ಮನಸ್ಥಿತಿವುಳ್ಳವರಾಗಿದ್ದು, ಅಂಬೇಡ್ಕರ ವಿಚಾರವಾದಿಗಳಾಗಿರಬೇಕು, ಅಂತಹವರನ್ನು ನಾವು ಆಯ್ಕೆ ಮಾಡಿಕೊಳ್ಳುವುದು ಅನಿವಾರ್ಯ ಎಂದು ಹೇಳಿದರು.
ಗದ್ದರ್ ಹಾಗೂ ಎಲ್.ಆರ್. ಬಾಲಿಯವರು ತಮ್ಮ ಜೀವನದುದ್ದಕ್ಕೂ ಅಂಬೇಡ್ಕರ ಹಾಗೂ ಬುದ್ಧರ ವಿಚಾರಗಳ ಮೇಲೆ ಹೋರಾಟ ನಡೆಸುತ್ತಾ, ಕೆಳ ವರ್ಗದ ಹಾಗೂ ಶೋಷಿತರಿಗೆ ನ್ಯಾಯ ಒದಗಿಸುವಲ್ಲಿ ಯಶಸ್ವಿಯಾಗಿದ್ದಾರೆ ಎಂದರು.
ಮುಂಬೈ ವಿಶ್ವವಿದ್ಯಾಲಯದ ಕಾನೂನು ವಿಭಾಗದ ನಿವೃತ್ತ ಮುಖ್ಯಸ್ಥರು, ಹಿರಿಯ ವಕೀಲರು ಹಾಗೂ ಸಂವಿಧಾನ ತಜ್ಞರಾದ ಡಾ. ಸುರೇಶ ಮಾನೆಯವರು ವಿಶೇಷ ಉಪನ್ಯಾಸ ನೀಡುತ್ತಾ, ದೇಶದಲ್ಲಿ ಬುದ್ಧ, ಡಾ. ಅಂಬೇಡ್ಕರನ್ನೊಳಗೊAಡ ವಿಚಾರಗಳ ಬಹುಜನ ಚಳುವಳಿ, ಪುನರ್ ಸಂಘಟಿಸಬೇಕಾಗಿದೆ ಎಂದು ಹೇಳಿದರು.
ದಿ: ಎಲ್.ಆರ್. ಬಾಲಿ ಉತ್ತರ ಭಾರತದಲ್ಲಿ ಹೆಚ್ಚು ಕೆಲಸ ಮಾಡಿದ್ದಾರೆ. ಗದ್ದರ್ ಅವರು ದಕ್ಷಿಣ ಭಾರತದಲ್ಲಿ ಹೆಚ್ಚು ಕಾರ್ಯ ನಿರ್ವಹಿಸಿ, ಜನರ ಸಮಾನತೆಗಾಗಿ ಹೋರಾಡಿದ್ದಾರೆ ಎಂದು ಹೇಳಿದ ಅವರು ಎಲ್.ಆರ್. ಬಾಲಿಯವರು ತಮ್ಮ ಸಂಪೂರ್ಣ ಜೀವನದುದ್ದಕ್ಕೂ ಅಂಬೇಡ್ಕರ ಚಳುವಳಿಯಲ್ಲಿಯೇ ಮುಂದುವರೆದರು ಎಂದು ವಿವರಿಸಿದರು.
ಮಹಾರಾಷ್ಟçದ ಕೋಲಾಪೂರದ ಶಾಹು ಮಹಾರಾಜರು ಬಡ ಜನರ ಉದ್ಧಾರಕ್ಕಾಗಿ ಶ್ರಮಿಸಿದವರು, ಶೇ. 50% ಮೀಸಲಾತಿ ಜಾರಿ ಮಾಡಿ, ಜನರ ಅಭಿವೃದ್ಧಿಗಾಗಿ ಶ್ರಮಿಸಿದರು. ಈಕಡೆ ಅಂದರೆ ಕರ್ನಾಟಕದಲ್ಲಿ ಶಾಹು ಮಹಾರಾಜರ ಮಾದರಿಯಲ್ಲಿ ವಿವಿಧ ಹಿಂದುಳಿದ ಜನರ ಉದ್ಧಾರಕ್ಕಾಗಿ ಶೇ. 75% ಮೀಸಲಾತಿಯನ್ನು ಕೃಷ್ಣದೇವರಾಯ ಒಡೆಯರು ಜಾರಿ ಮಾಡಿ, ಜನರ ಅಭಿವೃದ್ಧಿಗೆ ಶ್ರಮಿಸುತ್ತಾ, ಬುದ್ಧ ಹಾಗೂ ಡಾ. ಅಂಬೇಡ್ಕರ ವಿಚಾರಗಳಲ್ಲಿ ಮಾರ್ಗದರ್ಶನ ನೀಡಿ, ಜಾಗೃತರನ್ನಾಗಿ ಮಾಡಿದರು.
ನಂತರ ಡಾ. ಅಂಬೇಡ್ಕರ ಅವರು ಸಂವಿಧಾನ ರಚಿಸಿ, ಸರ್ವ ಜನರ ಹಿತಕ್ಕಾಗಿ ಶ್ರಮಿಸಿದರು. ಇವರ ಕಾಲಮಾನದಲ್ಲಿ ಬಹುತೇಕ ಜನರ ಏಳ್ಗೆಯಾಯಿತು, ಇವರ ನಂತರ ಕಾನ್ಷಿರಾಮರು ಅಂಬೇಡ್ಕರ ಚಳುವಳಿ ಮಾದರಿಯಲ್ಲಿಯೇ ಹೋರಾಟ ಮಾಡುತ್ತಾ, ಬಹುಜನ ಸಮಾಜ ಪಕ್ಷ ಅಧಿಕಾರಕ್ಕೆ ತಂದರು. ಈ ಮೂಲಕ ಬಹುತೇಕ ಜನರ ಪ್ರಗತಿಯಾಯಿತೆಂದು ಹೇಳಿದರು. ಈಗಿನ ಸಂದಿಗ್ದ ಪರಿಸ್ಥಿತಿಯಲ್ಲಿ ಒಳ್ಳೆಯ ಮನಸ್ಥಿತಿಗಳ ಮುಂದಾಳತ್ವದಲ್ಲಿ ಬಹುಜನ ಚಳುವಳಿ ಪುನರ್ ಸಂಘಟನೆ ಮಾಡುವುದು ಅನಿವಾರ್ಯವಾಗಿದೆ ಎಂದು ವಿವರಿಸಿದರು.
ಎಸ್.ಎಸ್.ಡಿ. ದಕ್ಷಿಣ ಭಾರತದ ಕಾರ್ಯದರ್ಶಿಗಳು ಹಾಗೂ ದಲಿತ ರತ್ನ ಪುರಸ್ಕೃತರಾವ ವೈಜಿನಾಥ ವಡ್ಡೆ ಮಾತನಾಡಿ, ಅಗಲಿದ ಎಲ್.ಅರ್. ಬಾಲಿ ಹಾಗೂ ವಿಠಲ ಗದ್ದರ್ ಅವರ ಕುರಿತು ಮಾತನಾಡಿ, ಅವರ ಕಾರ್ಯಗಳಿಗೆ ಶ್ಲಾಘಿಸಿದರು.
ಭಾರತೀಯ ಭೀಮಸೇನಾದ ರಾಷ್ಟಿçÃಯ ಸಂಚಾಲಕರಾದ ಎಂ.ಪಿ. ಮೂಲಭಾರತಿ ಪ್ರಾಸ್ತಾವಿಕ ಮಾತನಾಡಿದರು, ಹಿರಿಯ ಸಾಹಿತಿಗಳಾದ ಚಂದ್ರಕಾAತ ಪೋಸ್ತೆ ಅಧ್ಯಕ್ಷತೆ ವಹಿಸಿದರು, ನಿವೃತ್ತ ಪ್ರಾಚಾರ್ಯರಾದ ವಿಠಲದಾಸ ಪ್ಯಾಗೆ, ಹೈಕೋರ್ಟ್ ವಕೀಲರಾದ ಸೈಯದ ತಲಾ ಹಾಶ್ಮಿ, ಬೀದರನ ಹಿರಿಯ ವಕೀಲರಾದ ನಾರಾಯಣ ಗಣೇಶ, ಘೋಡಂಪಳ್ಳಿ ವಸತಿ ಸಹಿತ ಪ್ರಥಮ ದರ್ಜೆ ಮಹಾವಿದ್ಯಾಲಯ ಪ್ರಾಚಾರ್ಯರಾದ ಪ್ರೊ. ದೇವಿದಾಸ ತುಮಕುಂಟೆ, ಬೀದರ ಅಕ್ಕಮಹಾದೇವಿ ಮಹಿಳಾ ಪದವಿ ಮಹಾವಿದ್ಯಾಲಯದ ಪ್ರೊ. ಎಸ್.ಜಿ. ಹುಗ್ಗಿ ಪಾಟೀಲ, ಹಿರಿಯ ವಕೀಲರಾದ ಮಾಣಿಕರಾವ ಗೊಡಬೊಲೆ, 371(ಜೆ) ಸಮಿತಿ ಕ.ವಿ.ಪ್ರ.ನಿ. ನೌಕರರ ಸಂಘ ರಾಜ್ಯದ ಸಂಚಾಲಕರಾದ ಸುಮಂತ ಕಟ್ಟಿಮನಿ, ಭಾರತೀಯ ಭೀಮಸೇನಾದ ರಾಜ್ಯಾಧ್ಯಕ್ಷರಾದ ಸುರೇಶ ಶಿಂಧೆ, ಸಾಹಿತಿ ಎಂ.ಎಸ್. ಮನೋಹರ, ಭಾರತೀಯ ಭಿಮಸೇನಾದ ರಾಷ್ಟಿçÃಯ ಕಾರ್ಯದರ್ಶಿ ಸುನೀಲ ಡೊಳ್ಳೆ, ಬುದ್ಧಿಷ್ಟ ಸೊಸೈಟಿ ಆಫ್ ಇಂಡಿಯಾ ಜಿಲ್ಲಾಧ್ಯಕ್ಷ ಡಾ. ಬಾಬು ಆಣದೂರೆ, ಕರ್ನಾಟಕ ರಾಜ್ಯ ಎಸ್.ಸಿ., ಎಸ್.ಟಿ. ಪ್ರಾಥಮಿಕ ಮತ್ತು ಮಾಧ್ಯಮಿಕ ಕ್ಷೇಮಾಭಿವೃದ್ಧಿ ಸಂಘದ ಜಿಲ್ಲಾಧ್ಯಕ್ಷ ವೈಜಿನಾಥ ಸಾಗರ, ಸರ್ಕಾರಿ ಪದವಿ ಪೂರ್ವ ಕಾಲೇಜು ಕಮಠಾಣಾ ಉಪನ್ಯಾಸಕರಾದ ರಾಜಪ್ಪ ಗೂನಳ್ಳಿಕರ್, ಭಾರತೀಯ ಭೀಮಸೇನಾದ ಮಹಿಳಾ ಘಟಕದ ರಾಷ್ಟಿçÃಯ ಉಪಾಧ್ಯಕ್ಷರಾದ ಶ್ರೀಮತಿ ಗೀತಾ ಬಿ. ಛಲವಾದಿ, ಕರ್ನಾಟಕ ಸರ್ಕಾರಿ, ಅರೆ ಸರ್ಕಾರಿ ಪರಿಶಿಷ್ಟ ಜಾತಿ ನೌಕರರ ಅಸೊಸಿಯೇಷನ್ ಅಧ್ಯಕ್ಷರಾದ ನಾಗೇಂದ್ರ ಸಿಂಗೋಡೆ, ಪ್ರಧಾನ ಕಾರ್ಯದರ್ಶಿ ಗಣಪತಿ ಭಕ್ತ, ಕಲ್ಯಾಣ ಕರ್ನಾಟಕ ಪ್ರೌಢ ಶಾಲಾ ಶಿಕ್ಷಕರ ಸಂಘದ ರಾಜ್ಯಾಧ್ಯಕ್ಷ ಪಾಂಡುರAಗ ಬೆಲ್ದಾರ್, ಭಾರತೀಯ ಭೀಮ ಸೇನಾದ ಯುವ ಘಟಕ ರಾಜ್ಯಾಧ್ಯಕ್ಷರಾದ ಗೌತಮ ಚಿಂತಲಗೇರಾ, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಗುತ್ತಿಗೆದಾರರ ಸಂಘದ ಜಿಲ್ಲಾಧ್ಯಕ್ಷರಾದ ರವಿ ಹಾಸನಕರ್, ಭಾರತೀಯ ಭೀಮಸೇನಾದ ಮಹಿಳಾ ಘಟಕದ ಜಿಲ್ಲಾಧ್ಯಕ್ಷ ಶ್ರೀಮತಿ ಸುಧಾರಾಣಿ ಗುಪ್ತಾ, ಉಪಾಧ್ಯಕ್ಷರಾದ ಸಂಜು ಸಾಗರ, ಅಧ್ಯಕ್ಷರಾದ ರಾಜು ಪ್ರಸಾದ ವೇದಿಕೆಯ ಮೇಲಿದ್ದರು.
ಕಾರ್ಯಕ್ರಮಕ್ಕು ಮುನ್ನ ಬಕ್ಕಪ್ಪಾ ದಂಡಿನ್ ಮತ್ತು ದೇವಿದಾಸ ಚಿಮಕೋಡ ಹಾಗೂ ಸಂಗಡಿಗರು ಕ್ರಾಂತಿಗೀತೆಗಳು ಹಾಡಿದರು. ಭಾರತೀಯ ಭೀಮಸೇನಾದ ರಾಷ್ಟಿçÃಯ ಉಪಾಧ್ಯಕ್ಷ ಅಶೋಕ ಕುಮಾರ ಮಾಳಗೆ ಸಂಚಾಲನೆ ಮಾಡಿದರು, ಕೊನೆಯಲ್ಲಿ ಬಬ್ರುವಾಹನ ಬೆಳಮಗಿ ವಂದಿಸಿದರು.