ಹಳಸಿ ಹೋದ ಸಂಬAಧಗಳ ಮರು ಬೆಸುವಿಕೆಯೇ ರಕ್ಷಾ ಬಂಧನ: ಪ್ರೊ.ಮನೋಜಕುಮಾರ
ಬೀದರ್: ಯಾಂತ್ರಿಕ ಯುಗದಲ್ಲಿ ಇಂದು ಸಂಬAಧಗಳು ಹಳಸಿ ಹೋಗುತ್ತಿವೆ, ಮೌಲ್ಯಗಳು ಕುಸಿದು ಸ್ವಾರ್ಥ ಎಲ್ಲೆಡೆ ಮನೆ ಮಾಡಿದೆ. ಪ್ರೀತಿ, ವಿಶ್ವಾಸ ಗೌಣವಾಹಗುತ್ತಿರುವ ಇಂತಹ ಸಂಕ್ರಮಣದ ಕಾಲದಲ್ಲಿ ನಾವಿಂದು ಬದುಕುತ್ತಿದ್ದೇವೆ. ಇಂಥ ದುಸ್ಥಿತಿ ದಮನಗೊಳ್ಳಲು ರಕ್ಷಾ ಬಂಧನ ಆಚರಿಸಲಾಗುತ್ತದೆ ಎಂದು ಮಹಿಳಾ ಪ್ರಥಮ ದರ್ಜೆ ಮಹಾವಿದ್ಯಾಲಯದ ಪ್ರಾಚಾರ್ಯ ಪ್ರೊ.ಮನೋಜಕುಮಾರ ಅಭಿಪ್ರಾಯ ಪಟ್ಟರು.
ಶನಿವಾರ ನಗರದ ಬ್ರಹ್ಮಾಕುಮಾರಿ ಕೇಂದ್ರ ಪಾವನಧಾಮ ಅವರಣದಲ್ಲಿ ರಕ್ಷಾ ಬಂಧನ ಕಾರ್ಯಕ್ರಮ ಉದ್ಘಾಟಿಸಿ ಮಶಾತನಾಡಿದ ಅವರು, ಪಾಶ್ಚಾತ್ಯದ ಪ್ರಭಾವ ಹೆಚ್ಚಾಗಿ ಯುವಜನರ ಮೇಲಾಗುತ್ತಿದ್ದು, ಅದರಲ್ಲೂ ವಿದ್ಯಾವಂತ ಯುವಜನರೆ ದುಷ್ಕೃತ್ಯಕ್ಕೆ ಸಿಲುಕುತ್ತಿರುವರು. ಇಂಥ ದಯನಿಯ ಬೆಳವಣಿಗೆಯಿಂದ ಪಾರಾಗಲು ಕಾಲೇಜು ವಿದ್ಯಾರ್ಥಿಗಳು ತಮ್ಮ ಪಠ್ಯದ ಜೊತೆಗೆ ಬ್ರಹ್ಮಾಕುಮಾರಿ ಈಶ್ವರೀಯ ವಿದ್ಯಾಲಯದಲ್ಲಿ ನೀಡುವ ರಾಜಯೋಗ ಜ್ಞಾನ ಪಡೆದುಕೊಳ್ಳಬೇಕಿದೆ. ಪಾಲಕರಾದವರು ತಮ್ಮ ಮಕ್ಕಳೊಂದಿಗೆ ಈಶ್ವರೀಯ ಕೇಂದ್ರಗಳತ್ತ ಮುಖ ಮಾಡಬೇಕೆಂದು ಕಲರೆ ನೀಡಿದರು.
ದಿವ್ಯ ಸಾನಿಧ್ಯ ವಹಿಸಿದ ಬ್ರಹ್ಮಾಕುಮಾರಿ ಪಾವನಧಾಮದ ಸಂಚಾಲಕಿ ಬಿ.ಕೆ ಪ್ರತಿಮಾ ಬಹೆನ್ಜಿ ಮಾತನಾಡಿ, ನಮ್ಮದು ನಿತ್ಯ ಅನೇಕರೊಂದಿಗೆ ಸಂಬAಧವಿದ್ದರೂ ಪರಮಾತ್ಮನೊಂದಿಗೆ ಏಕೆ ಸಂಭAಧ ಬೆಳೆಸಬೇಕೆಂಬ ಪ್ರಶ್ನೆ ಉದ್ಭವಿಸುತ್ತದೆ. ಶರೀರಕ್ಕೆ ಕರ್ಮದ ಅವಶ್ಯಕತೆ ಇದ್ದರೆ ಆತ್ಮಕ್ಕೆ ಸುಖ, ಶಾಂತಿ, ಶಕ್ತಿ, ಪವಿತ್ರತೆ, ಆನಂದ, ಜ್ಞಾನ, ಬುದ್ದಿಯ ಅವಶಜ್ಯಕತೆ ಇದೆ. ನಾವು ಅನೇಕರೊಂದಿಗೆ ಸಂಭAಧವಿದ್ದರೂ ಪರಮಾತ್ಮನಿಂದ ವಂಚಿತರಾಗಿರುವ ಕಾರಣ ಮನಸ್ಸು ಚಂಚಲವಾಗಿರುತ್ತದೆ. ನಮ್ಮ ಆತ್ಮ ತೃಪ್ತವಾಗಬೇಕಾದರೆ ಗುಣ, ಸ್ತೋತ್ರ, ಶಕ್ತಿ ಹಾಗೂ ಜ್ಞಾನದ ಸಾಗರನಾದ ಆ ಪರಮಾತ್ಮನೊಂದಿಗೆ ಜೋಡಣೆಯಾಗಬೇಕಿದೆ. ಈ ಜೋಡಣೆ ಕಾರ್ಯವನ್ನು ಈಶ್ವರೀಯ ವಿದ್ಯಾಲಯ ತನ್ನ ರಾಜಯೋಗ ಅಭ್ಯಾಸದಿಂದ ಮಾಡುತ್ತದೆ ಎಂದರು.
ಕೇAದ್ರದ ಹಿರಿಯ ರಾಜಯೋಗ ಶಿಕ್ಷಕಿ ಬಿ.ಕೆ ಗುರುದೇವಿ ಅಕ್ಕನವರು ಮಾತನಾಡಿ, ಇಂದು ಎಲ್ಲರಿಗೂ ರಕ್ಷಣೆ ಬೇಕಾಗಿದೆ. ಹಾಗೇ ಬಂಧನದ ಅವಶ್ಯಕತೆಯೂ ಹೌದು. ಪರಮಾತ್ಮನಲ್ಲಿ ನಾವು ಬಂಧಿತರಾದರೆ ಆತ್ಮ ರಕ್ಷಣೆ ಜೊತೆಗೆ ಇತರರ ರಕ್ಷಣೆ ಮಾಡುವ ಸಾಮರ್ಥ್ಯ ಬೆಳೆಸಿಕೊಳ್ಳಬೇಕು. ಎರಡು ಎಳೆ ದಾರವಾದ ರಾಖಿಯ ಬಗ್ಗೆ ನಾವು ಅರಿತುಕೊಳ್ಳಬೇಕು. ಪರಮಾತ್ಮನ ಶಕ್ತಿ ಮೂಲಕ ನಮ್ಮನ್ನು ನಾವು ರಕ್ಷಣೆ ಮಾಡಿಕೊಳ್ಳಬೇಕು. ಇದರಿಂದ ನಮ್ಮ ಭಾವ ಪರಿವರ್ತನೆಯಾಗಿ ವಿಶ್ವ ಪರಿವರ್ತನೆಯ ಸಂಕಲ್ಪದತ್ತ ಸಾಗಬಹುದಿದೆ ಎಂದರು. ಉದ್ಯಮಿ ರಮೇಶ ಗೋಯಲ್ ಮಾತನಾಡಿದರು.ಇದೇ ವೇಳೆ ನೆರೆದ ಎಲ್ಲ ಸಹೋದರ, ಸಹೋದರಿಯರಿಗೆ ಕೇಂದ್ರದಿAದ ರಾಖಿ ಕಟ್ಟುವ ಮೂಲಕ ರಕ್ಷಾ ಬಂಧನ ಆಚರಿಸಲಾಯಿತು.ಆರಂಭದಲ್ಲಿ ಬಿ.ಕೆ ಮಹಾನಂದಾ ರಾಜಯೋಗ ಅಭ್ಯಾಸ ಮಾಡಿಸಿದರು. ಬಿ.ಕೆ ರೇಣುಕಾ ಕಾರ್ಯಕ್ರಮ ನಿರೂಪಿಸಿದರು.