ಬೀದರ್

ಸ್ವ-ಸಹಾಯ ಸಂಘ, ನೈರ್ಮಲ್ಯ ಸಮಿತಿ ಸದಸ್ಯರಿಗೆ ಓ.ಡಿ.ಎಫ್ ಪ್ಲಸ್ ಪುನಶ್ಛೇತನ ಕಾರ್ಯಕ್ರಮ

ಔರಾದ- ಔರಾದ ತಾಲ್ಲೂಕ ಪಂಚಾಯತನ ಸಾಮರ್ಥ್ಯ ಸೌಧದಲ್ಲಿ ಸ್ವ-ಸಹಾಯ ಸಂಘ, ನೈರ್ಮಲ್ಯ ಸಮಿತಿ ಸದಸ್ಯರು, ಎನ್.ಆರ್.ಎಲ್.ಎಮ್ ಸಿಬ್ಬಂದಿ, ಕೃಷಿ ಸಖಿ, ಹಾಗೂ ಪಶು ಸಖಿ ಅವರಿಗೆ ಓ.ಡಿ.ಎಫ್ ಪ್ಲಲ್ಸ್ ಪುನಶ್ಛೇತನ ಕಾರ್ಯಕ್ರಮವನ್ನು ಶಾಂತೀಶ್ವರಿ ಸ್ವಯಂ ಸೇವಾ ಸಂಸ್ಥೆಯಿAದ ಹಮಿಕೊಳ್ಳಲಾಯಿತು. ಬೀದರ ಜಿಲ್ಲಾ ಪಂಚಾಯತ ಸಹಾಯಕ ಯೋಜನಾಧಿಕಾರಿಗಳಾದ ಶಿವಕುಮಾರ ಎಲ್ಲಾಳ ಅವರು ಕಾರ್ಯಗಾರ ಉದ್ಘಾಟಿಸಿ ಮಾತನಾಡಿ ಗ್ರಾಮಗಳು ಓ.ಡಿ.ಎಫ್ ಪ್ಲಸ್ ಎಂದರೆ(ಒಪನ್ ಡೇಫೀಕೆಶನ್ ಫ್ರೀ) ಬಯಲು ಬರ್ಹಿದಸೆ ಮುಕ್ತ ಎಂದರ್ಥ. ಈ ನಿಟ್ಟಿನಲ್ಲಿ ಸ್ವ-ಸಹಾಯ ಸಂಘ, ನೈರ್ಮಲ್ಯ ಸಮಿತಿ ಸದಸ್ಯರು, ಎನ್.ಆರ್.ಎಲ್.ಎಮ್ ಸಿಬ್ಬಂದಿ, ಕೃಷಿ ಸಖಿ, ಹಾಗೂ ಪಶು ಸಖಿ ಅವರಿಗೆ ಪುನಶ್ಛೇತನ ಕಾರ್ಯಗಾರದ ಮೂಲಕ ಗ್ರಾಮೀಣ ಭಾಗದ ಸಾರ್ವಜನಿಕರಲ್ಲಿ ಬಯಲು ಬರ್ಹಿದಸೆ ತಡೆದು ಅದರ ಬಗ್ಗೆ ಜಾಗೃತಿ ಮೂಡಿಸುವುದು ಪುನಶ್ಛೇತನದ ಕಾರ್ಯಕ್ರಮದ ಮುಖ್ಯ ಉದ್ದೇಶವಾಗಿದೆ ಎಂದರು.
ರಾಜ್ಯ ಅಭಿವೃದ್ಧಿ, ಸಮನ್ವಯ ಮತ್ತು ಮೇಲುಸ್ತುವಾರಿ ಸಮಿತಿ ಸದಸ್ಯರಾದ ಶಿವಯ್ಯಾ ಸ್ವಾಮಿ ಅವರು ಮಾತನಾಡಿ ನಾರಿ ಶಕಿ ಜಾಗೃತಿಗೊಳಿಸಿದರೆ ಇಡಿ ಸಮುದಾಯಕ್ಕೆ ಜಾಗೃತಿ ಮಾಡಿದಂತಾಗುತ್ತದೆ ಎಂದು ಸ್ವ ಸಹಾಯ ಸಂಘ ಹಾಗೂ ಕೃಷಿ ಹಾಗೂ ಪಶು ಸಖಿರವರಿಗೆ ಪುನಶ್ಛೇತನ ಕಾರ್ಯಗಾರದ ಮೂಲಕ ಬಯಲು ಬರ್ಹಿದಸೆ ಮುಕ್ತ ಗ್ರಾಮಗಳನ್ನಾಗಿ ಮಾಡಲು ಸಂಕಲ್ಪ ಮಾಡಲಾಗಿದೆ ಆದರಿಂದ ಗ್ರಾಮೀಣ ಜನತೆ ಬಯಲು ಬರ್ಹಿದಸೆ ಮುಕ್ತ ಗ್ರಾಮಗಳಾಗಿ ಮಾಡಿ ಸ್ವಚ್ಚ ಹಾಗೂ ಸುಂದÀರ ಗ್ರಾಮ ನಿರ್ಮಾಣ ಮಾಡಬೇಕೆಂದು ಸಲಹೆ ನೀಡಿದರು,
ಮುಖ್ಯ ಅತಿಥಿಗಳಾಗಿ ಜಿಲ್ಲಾ ಪಂಚಾಯತನ ಲೆಕ್ಕ ಸಹಾಯಕರಾದ ಪ್ರವೀಣ ಸ್ವಾಮಿ ಮಾತನಾಡಿ ಸ್ವಚ್ಚ ಬೀದರ ಹಾಗೂ ಸ್ವಚ್ಚ ಭಾರತದ ಪರಿಕಲ್ಪನೆಯನ್ನು ನಾವೆಲ್ಲರು ಸೇರಿ ಸಾಕಾರಗೊಳಿಸಬೇಕೆಂದು ತಿಳಿಸಿ ಪುನಶ್ಛೇತನ ಕಾರ್ಯಗಾರ ಕುರಿತು ವಿಶೇಷ ತರಬೇತಿ ನೀಡಿದರು. ಕಾರ್ಯಕ್ರಮದಲ್ಲಿ ಅಮರೇಶ್ವರ ಗೋ ಶಾಲೆಯ ಅಧ್ಯಕ್ಷರಾದ ಶಿವರಾಜ ಅಲ್ಮಾಜೆ, ರಾಷ್ಟೀಯ ಜೀವನೋಪಾಯ ಮಿಷನ್‌ನ ಜಿಲ್ಲಾ ಕಾರ್ಯಕ್ರಮ ಕೃಷಿ ವ್ಯವಸ್ಥಾಪಕರಾದ ಆಕಾಶ ಮಠಪತಿ, ತಾಲ್ಲೂಕ ಕಾರ್ಯಕ್ರಮ ವ್ಯವಸ್ಥಾಪಕರಾದ ರಾಜಕುಮಾರ ಗೋರ್ಟೆ, ವಲಯ ಮೇಲ್ವಿಚಾರರಾದ ಶರಣಬಸಪ್ಪಾ ಸಾವಳೆ, ಶಿವಾನಂದ ಮಡ್ಡೆ ಉಪಸ್ಥಿತರಿದ್ದರು.
ಕಾರ್ಯಗಾರದಲ್ಲಿ ಬಯಲು ಬರ್ಹಿದಸೆ ಮುಕ್ತ, ಸ್ವಚ್ಚತೆ, ಸುಚಿತ್ವ, ನೈರ್ಮಲ್ಯ ಕುರಿತು ಕೇಂದ್ರಿಕೃತ ಗುಂಪು ಚರ್ಚೆ ನಡೆಸಲಾಯಿತು. ಕಾರ್ಯಕ್ರಮದಲ್ಲಿ  ಔರಾದ ತಾಲ್ಲೂಕಿನ ವಿವಿಧ ಗ್ರಾಮಗಳ ಸ್ವ-ಸಹಾಯ ಸಂಘದ ಸದಸ್ಯರು, ನೈರ್ಮಲ್ಯ ಸಮಿತಿ ಸದಸ್ಯರು, ಪಶು ಹಾಗೂ ಕೃಷಿ ಸಖಿ ತರಬೇತಿ ಪಡೆದರು. ಇದೆ ಸಂರ್ಧಭದಲ್ಲಿ ಕಾರ್ಯಗಾರದಲ್ಲಿ ಭಾಗವಹಿಸಿದ ಎಲ್ಲರಿಗೂ ಪ್ರಮಾಣ ಪತ್ರ ವಿತರಿಸಲಾಯಿತು

Ghantepatrike kannada daily news Paper

Leave a Reply

error: Content is protected !!