ಸಿರಿಧಾನ್ಯ ಆಧಾರಿತ ಖಾದ್ಯಗಳ ಸ್ಪರ್ಧೆ
ಈ ವರ್ಷವು ಅಂತರಾಷ್ಟ್ರೀಯ ಸಿರಿಧಾನ್ಯಗಳ ವರ್ಷವೆಂದು ಆಚರಿಸುತ್ತಿರುವ ಹಿನ್ನೆಲೆಯಲ್ಲಿ ಸಿರಿಧಾನ್ಯಗಳ ಬೇಸಾಯ ಮತ್ತು ಬಳಕೆಗೆ ಉತ್ತೆಜನಕ್ಕೆ ಪೂರಕವಾಗಿ ಸಿರಿಧಾನ್ಯ ಬೆಳೆಗಳ ಬೀಜ ವಿತರಣೆ ಪ್ರಾತ್ಯಕ್ಷಿಕೆ ಮತ್ತು ತರಬೇತಿ ಹೀಗೆ ಹಲವು ಚಟುವಟಿಕೆಗಳನ್ನು ಕೃಷಿ ವಿಜ್ಞಾನ ಕೇಂದ್ರ ಹಮ್ಮಿಕೊಂಡಿದೆ. ಅದರ ಮುಂದುವರೆದ ಭಾಗವಾಗಿ ಭಾರತಿಯ ಸಿರಿಧಾನ್ಯ ಸಂಶೋಧನಾ ಸಂಸ್ಥೆ, ಹೈದ್ರಾಬಾದ ಅವರೊಂದಿಗೆ ಜಂಟಿಯಾಗಿ ಜನವಾಡಾ ಹತ್ತಿರದ ಬೀದರ ಕೃಷಿ ವಿಜ್ಞಾನ ಕೇಂದ್ರದಲ್ಲಿ ಆಗಸ್ಟ್ 18 ರಂದು ಮಹಿಳೆಯರಿಗಾಗಿ ಸಿರಿಧಾನ್ಯ ಆಧಾರಿತ ಖಾದ್ಯಗಳ ಸ್ಪರ್ಧೆಯನ್ನು ಬೆಳಿಗ್ಗೆ 10 ಗಂಟೆಗೆ ಏರ್ಪಡಿಸಲಾಗಿದೆ.
ಭಾಗವಹಿಸಲಿಚ್ಛಿಸುವ ಮಹಿಳೆಯರು ಸಿರಿಧಾನ್ಯ ಆಧಾರಿತ ಸಿಹಿ ಅಥವಾ ಖಾರಾ ತಿಂಡಿ-ತಿನಿಸಿನೊಂದಿಗೆ, ಅದನ್ನು ತಯಾರಿಸುವ ವಿವರವಾದ ವಿಧಾನದೊಂದಿಗೆ ಸ್ಪರ್ಧೆಯಲ್ಲಿ ಭಾಗವಹಿಸಬೇಕು. ತಿಂಡಿ-ತಿನಿಸುಗಳ ಪೌಷ್ಠಿಕತೆ, ರುಚಿ ಹಾಗೂ ಮಂಡಿಸುವಿಕೆಯ ಆಧಾರದ ಮೇಲೆ ಮೌಲ್ಯಮಾಪನ ಮಾಡಲಾಗುವುದು.
ಸ್ಪರ್ಧೆಗೆ ನೊಂದಾಯಿಸಲಿಚ್ಛಿಸುವವರು ಮೊಬೈಲ್ ಸಂಖ್ಯೆ: 9480696318, 9980102727, 9611111929 ಗೆ ಸಂಪರ್ಕಿಸಿ ಆಗಸ್ಟ್ 17 ರೊಳಗಾಗಿ ಹೆಸರುಗಳನ್ನು ನೊಂದಾಯಿಸಬಹುದು. ಮೊದಲು ನೊಂದಾಯಿಸಿದ 25 ಮಹಿಳಾ ಅಭ್ಯರ್ಥಿಗಳಿಗೆ ಮಾತ್ರ ಪ್ರವೇಶ. ಸ್ಪರ್ಧೆಯಲ್ಲಿ ಭಾಗವಹಿಸಿದ ವ್ಯಕ್ತಿ ಅಥವಾ ಸಂಘದ ಮುಖ್ಯಸ್ಥರಿಗೆ ಪ್ರಶಸ್ತಿ ಪತ್ರವನ್ನು ವಿತರಿಸಲಾಗುವುದು. ಆಯ್ಕೆಗೊಂಡ ಉತ್ತಮ ಖಾದ್ಯ ಉತ್ಪನಗಳ ವಾಣಿಜ್ಯಿಕರಣ ಮತ್ತು ಮಾರಾಟ ಮಾಡಲು ಸಲಹೆಗಳನ್ನು ಕೃಷಿ ವಿಜ್ಞಾನ ಕೇಂದ್ರ ಸಹಕರಿಸುವುದು.
ಸ್ಪರ್ಧೆಗೆ ತಗಲುವ ಎಲ್ಲ ಖರ್ಚು ವೆಚ್ಚವನ್ನು ಸ್ಪರ್ಧಾಳುಗಳಿಗೆ ಭರಿಸಬೇಕು ಎಂದು ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.