ಬೀದರ್

ಸಾರ್ವಜನಿಕರು ಸಬ್‌ರ‍್ಮಲ್ ಇಂಪ್ಲಾAಟನ ಸದುಪಯೋಗ ಪಡೆದುಕೊಳ್ಳಿ

ಬೀದರ. ಆಗಸ್ಟ್.18 – ಸಬ್‌ರ‍್ಮಲ್ ಇಂಪ್ಲಾAಟ ಸುರಕ್ಷಿತ ತಾತ್ಕಾಲಿಕ ಗರ್ಭ ನಿರೋಧಕ ವಿಧಾನವಾಗಿದ್ದು, ಇದನ್ನು ಕೈ ತೋಳಿನ ಒಳಭಾಗದಲ್ಲಿ ಅಳವಡಿಸಲಾಗುತ್ತದೆ. ಈ ಸೇವೆಯು ಬ್ರೀಮ್ಸ್ ಬೋಧಕ ಆಸ್ಪತ್ರೆ ಬೀದರ ಹಾಗೂ 100 ಹಾಸಿಗೆಗಳ ತಾಯಿ ಮತ್ತು ಮಕ್ಕಳ ಆಸ್ಪತ್ರೆ ಬೀದರದಲ್ಲಿ ಲಭ್ಯವಿದ್ದು, ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬಹುದಾಗಿದೆ ಬೆಂಗಳೂರು ಕುಟುಂಬ ಕಲ್ಯಾಣ ಸೇವೆಗಳ ಉಪನಿರ್ದೇಶಕಿ ಚಂದ್ರಿಕಾ, ಮಾಸ್ಟರ್ ಟ್ರೇನರ್ ಡಾ.ರಾಜಕುಮಾರ ಹಾಗೂ ಡಾ.ಶಶಾಂತ ಅವರು ತರಬೇತಿ ನೀಡಿದರು.
ಅವರು ಗುರುವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಬೀದರ ಇವರ ಸಂಯುಕ್ತ ಆಶ್ರಯದಲ್ಲಿ ಕುಟುಂಬ ಕಲ್ಯಾಣ ಕಾರ್ಯಕ್ರಮದಡಿಯಲ್ಲಿ ಬ್ರಿಮ್ಸ್ ಬೋಧಕ ಆಸ್ಪತ್ರೆ ಬೀದರ ಇವರ ಸಹಯೋಗದೊಂದಿಗೆ ಬ್ರಿಮ್ಸ್ ಬೋಧಕ ಆಸ್ಪತ್ರೆ ಬೀದರದಲ್ಲಿ ಹಮ್ಮಿಕೊಂಡಿದ್ದ ಸ್ತಿçà ರೋಗ ತಜ್ಞರಿಗೆ ಹಾಗೂ ವೈದ್ಯಾಧಿಕಾರಿಗಳಿಗೆ ನೂತನ ಸಬ್‌ರ‍್ಮಲ್ ಇಂಪ್ಲಾAಟ್ಸ್ ಮತ್ತು ಅಂತರಾ ಚುಚ್ಚುಮದ್ದು ಬಗ್ಗೆ ತರಬೇತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಸಬ್‌ರ‍್ಮಲ್ ಇಂಪ್ಲಾAಟನ್ ಅಳವಡಿಸಿಕೊಳ್ಳುವುದರಿಂದ 05 ವರ್ಷಗಳವರೆಗೆ ಗರ್ಭಧರಿಸುವುದನ್ನು ಮುಂದೂಡಬಹುದು ಮತ್ತು ಈ ಅವಧಿಯಲ್ಲಿ ಗರ್ಭಧರಿಸಲು ಇಚ್ಛಿಸಿದಲ್ಲಿ ಯಾವಾಗಬೇಕಾದರು ಅಳವಡಿಸಿದ ಇಂಪ್ಲಾAಟ ತೆಗೆಯಬಹುದು. ಇದು ಒಂದು ಸರಳ ಹಾಗೂ ಸುರಕ್ಷಿತ ಕುಟುಂಬ ಕಲ್ಯಾಣ ವಿಧಾನವಾಗಿದ್ದು, ಯಾವುದೇ ಅಡ್ಡಪರಿಣಾಮಗಳಿರುವುದಿಲ್ಲ ಎಂದು ಹೇಳಿದರು.
ಈ ಕಾರ್ಯಾಗಾರದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ಧ್ಯಾನೇಶ್ವರ ನಿರಗುಡೆ, ಬ್ರಿಮ್ಸ್ ಬೋಧಕ ಆಸ್ಪತ್ರೆಯ ನಿರ್ದೇಶಕ ಡಾ. ಶಿವಕುಮಾರ ಶೆಟಕರ, ಜಿಲ್ಲಾ ಶಸ್ತç ಚಿಕಿತ್ಸಕ ಡಾ. ಮಹೇಶ ಬಿರಾದರ್, ಆರ್.ಎಂ.ಓ ಡಾ. ದೀಪಾ ಕೊಂಡಾ, ಜಿಲ್ಲಾ ಕುಟುಂಬ ಕಲ್ಯಾಣ ಅಧಿಕಾರಿ ಡಾ. ದಿಲೀಪ ಡೋಂಗ್ರೆ, ಬ್ರಿಮ್ಸ್ ಬೋಧಕ ಆಸ್ಪತ್ರೆಯ ಸ್ತಿçÃರೋಗ ತಜ್ಞರ ವಿಭಾಗದ ಮುಖ್ಯಸ್ಥ ಡಾ. ಉಮಾ ದೇಶಮುಖ, ಬ್ರಿಮ್ಸ್ ಬೋಧಕ ಆಸ್ಪತ್ರೆಯ ಉಪನ್ಯಾಸಕ ಡಾ. ಸರಿತಾ ಭದಭದೆ, ಡಾ. ಜೈಶ್ರೀ ಸ್ವಾಮಿ, ಸ್ತಿçà ರೋಗ ತಜ್ಞರುಗಳಾದ ಡಾ. ಸರೋಜ ಪಾಟೀಲ, ಡಾ. ಸುಮಯ್ಯಾ ಕುಲಸೂಮ್, ಡಾ. ಸುಮಯ್ಯಾ ಫಾತಿಮಾ, ಡಾ. ಎ.ಸಿ. ಲಲಿತಮ್ಮಾ ಹಾಗೂ ಬ್ರಿಮ್ಸ್ ಬೋಧಕ ಆಸ್ಪತ್ರೆಯ ಎಲ್ಲಾ ಸ್ತಿçÃರೋಗ ತಜ್ಞರು ಮತ್ತು ಜಿಲ್ಲೆಯ ಎಲ್ಲಾ ಸರ್ಕಾರಿ ಆರೋಗ್ಯ ಸಂಸ್ಥೆಯ ಸ್ತಿçÃರೋಗ ತಜ್ಞರು ಉಪಸ್ಥಿತರಿದ್ದರು.
Ghantepatrike kannada daily news Paper

Leave a Reply

error: Content is protected !!