ಸಹಾರ್ದ ತರಬೇತಿ ಸಂಸ್ಥೆಯಲ್ಲಿ ಬ್ಯಾಂಕಿಂಗ ಪರೀಕ್ಷಾ ತರಬೇತಿ
ಬೀದರ ಡಿಸಿಸಿ ಬ್ಯಾಂಕಿನ ಡಾ|| ಗುರುಪಾದಪ್ಪಾ ನಾಗಮಾರಪಳ್ಳಿ ಸಹಾರ್ದ ತರಬೇತಿ ಸಂಸ್ಥೆಯಲ್ಲಿ ಸೆಪ್ಟೆಂಬರ ಕೊನೆ ವಾರದಲ್ಲಿ ನಡೆಯಲಿರುವ ಬ್ಯಾಂಕಿಂಗ ಪರೀಕ್ಷೆಗಳ ಅಭ್ಯರ್ಥಿಗಳಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಬ್ಯಾಂಕಿಂಗ ಪರೀಕ್ಷಾ ತರಬೇತಿಯನ್ನು ಹಮ್ಮಿಕೊಳ್ಳಲಾಗಿದೆ. ತರಬೇತಿಯು ಸೆಪ್ಟೆಂಬರ ತಿಂಗಳ 13 ರಿಂದ 17 ರವರೇಗೆ 5 ದಿನಗಳ ಕಾಲ ಮುಂಜಾನೆ 10 ರಿಂದ ಸಾಯಂಕಾಲ 5ರ ತನಕ ನಡೆಯಲಿದೆ. ದಿನಪತ್ರಿಕೆಗಳಲ್ಲಿ ಬ್ಯಾಂಕಿಂಗ ಪರೀಕ್ಷೆಗಳ ಬಗ್ಗೆ ಉತ್ತರ ಪತ್ರಿಕೆಗಳನ್ನು ಬಿಡಿಸುವ ನುರಿತ ತರಬೇತುದಾರರು ಬ್ಯಾಂಕಿನ ಉನ್ನತ ಹುದ್ದೆಗಳಲ್ಲಿ ಕೆಲಸ ನಿರ್ವಹಿಸಿದ ಅನುಭವಿಗಳು ತರಬೇತಿ ನಿರ್ವಹಿಸಲಿದ್ದಾರೆ.
ಪರೀಕ್ಷೆಯಲ್ಲಿ ಬರುವÀ ತರ್ಕ (ರೀಸನಿಂಗ) ಗಣಿತ (ಮ್ಯಾತ್ಸ) ಮತ್ತು ಇಂಗ್ಲೀಷ ವಿಷಯಗಳ ಮೇಲೆ ಪ್ರಾತ್ಯಕ್ಷಿಕ ತರಬೇತಿಯನ್ನು ನೀಡಲಾಗುವುದು. ತರಬೇತಿಗೆ ನೋಂದಣಿ ಶುಲ್ಕ ಮಾತ್ರವಿದ್ದು ರೂ 750/- ನೀಡಿ ಆಸಕ್ತ ಅಭ್ಯರ್ಥಿಗಳು ಹೆಸರು ನೋಂದಾಯಿಸಿಕೊಳ್ಳಬೇಕಾಗಿ ವಿನಂತಿಸಲಾಗಿದೆ. ತರಬೇತಿಯಲ್ಲಿ ಭಾಗವಹಿಸಲು ಸೀಮಿತ ಸಂಖ್ಯೆಯ ಅಭ್ಯರ್ಥಿಗಳಿಗೆ ಮಾತ್ರ ಅವಕಾಶವಿದ್ದು ಮೊದಲು ಬಂದವರಿಗೆ ಮೊದಲು ಅವಕಾಶÀ ನೀಡಲಾಗುವುದು.