ಬೀದರ್

ಸಂತ್ರಸ್ಥ ಕುಟುಂಬಕ್ಕೆ 1 ಕೋಟಿ ರೂ. ಪರಿಹಾರ ನೀಡಿ : ಸುನೀಲ ಭಾವಿಕಟ್ಟಿ ಮನವಿ

ಬೀದರ್ ಸೆ. 04ಃ ಬೀದರ ಜಿಲ್ಲೆಯ ಬಸವಕಲ್ಯಾಣ ತಾಲೂಕಿನ ಗುಣತೀರ್ಥವಾಡಿ ಗ್ರಾಮದಲ್ಲಿನ ಟೋಕರೆ ಕೋಳಿ ಸಮಾಜದ ಕು. ಭಾಗ್ಯಶ್ರೀ ಪಂಡಿತ್ ಆಲಗೊಡೆ ಗುಂಡುರು (18) ಎಂಬ ಯುವತಿಯನ್ನು ತಲೆಯ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆ ಮಾಡಿರುವ ಆರೋಪಿಗಳಿಗೆ ಕೂಡಲೇ ಬಂಧಿಸಿ, ಕಠಿಣ ಶಿಕ್ಷೆಗೆ ಗುರಿ ಪಡಿಸಿ, ಮೃತಳÀ ಕುಟುಂಬಕ್ಕೆ ಸೂಕ್ತ ರಕ್ಷಣೆ ಒದಗಿಸಿ, 1 ಕೋಟಿ ರೂ. ಪರಿಹಾರ ಧನ ನೀಡಬೇಕೆಂದು ಅಂಬಿಗರ ಚೌಡಯ್ಯ ಯುವ ಸೇನೆ ಸಂಸ್ಥಾಪಕ ಅಧ್ಯಕ್ಷರಾದ ಸುನೀಲ ಭಾವಿಕಟ್ಟಿ ಅವರು ಮುಖ್ಯ ಮಂತ್ರಿಗಳಿಗೆ ಬರೆದ ಮನವಿ ಪತ್ರವನ್ನು ಅಪರ ಜಿಲ್ಲಾಧಿಕಾರಿಗಳಿಗೆ ಸಲ್ಲಿಸಿದರು.

ಯುವತಿಯು ಅಗಸ್ಟ್ 29 ರಂದು ನಸುಕಿನಲ್ಲಿ ಮನೆಯಿಂದ ಕಾಣೆಯಾಗಿದ್ದರು. ಅಂದು ನಸುಕಿನಲ್ಲಿ ಬಹಿರ್ದೆಸೆಗೆ ಹೋಗಿರಬಹುದೆನ್ನಲಾಗಿತ್ತು ಆದರೂ ಸಮಯ ಮೀರಿದರು ಪತ್ತೆಯಾಗಲಿಲ್ಲ. ಸೆಪ್ಟೆಂಬರ್ 1 ರಂದು ಗ್ರಾಮದ ಮುಳ್ಳಿನ ಪೊದೆಯಲ್ಲಿ ಭಾಗ್ಯಶ್ರೀ ಮೃತದೇಹ ಪತ್ತೆಯಾಗಿತ್ತು. ನಾಪತ್ತೆ ಆಗಿದ್ದ ದಿನವೇ ಅತ್ಯಾಚಾರ ವೆಸಗಿ ಆಕೆಗೆ ಕೊಲೆ ಮಾಡಲಾಗಿರುತ್ತದೆಂದು ಶಂಕಿಸಲಾಗಿದೆ. ಎಂದು ಯುವತಿಯ ತಂದೆ ಪಂಡಿತ್ ಆಲಗೊಡೆ ಠಾಣೆಗೆ ದೂರು ಸಲ್ಲಿಸಿರುವರು.

ಕೂಡಲೇ ಕು. ಭಾಗ್ಯಶ್ರೀ ಗುಂಡುರೆ (18) ಎಂಬ ಯುವತಿಯನ್ನು ಕೊಲೆಗೈದ ಆರೋಪಿಗಳಿಗೆ ಬಂಧಿಸಿ ಕಠಿಣ ಶಿಕ್ಷೆಗೆ ಗುರಿ ಪಡಿಸಿ, ಹಾಗೂ ಮೃತಳ ಕುಟುಂಬಕ್ಕೆ ನ್ಯಾಯ ಒದಗಿಸಿ ಸೂಕ್ತ ರಕ್ಷಣೆ 1 ಕೋಟಿ ರೂಪಾಯಿ ಪರಿಹಾರ ಧನ ಕೊಡಬೇಕೆಂದು ಮನವಿ ಮಾಡಿದ್ದಾರೆ.

ದೇಶ ಸ್ವಾತಂತ್ರ್ಯ ಪಡೆದು 76 ವರ್ಷಗಳು ಕಳೆದರು ಇಂದಿಗೂ ಸ್ರೀಯರಿಗೆ ಜೀವ ರಕ್ಷಣೆ ಸಿಗದಿರುವುದು ವಿಷಾದನೀಯ ವಿಷಯವಾಗಿದೆ. ನ್ಯಾಯ ಸಿಗದಿದ್ದಲ್ಲಿ ಮುಂಬರುವ ದಿನಗಳಲ್ಲಿ ಅಂಬಿಗರ ಚೌಡಯ್ಯ ಯುವ ಸೇನೆಯಿಂದ ಹೋರಾಟ ಮಾಡಲಾಗುವುದು ಎಂದು ಸರಕಾರಕ್ಕೆ ಆಗ್ರಹಿದ್ದಾರೆ.

ಈ ಸಂದರ್ಭದಲ್ಲಿ ಅಂಬಿಗರ ಚೌಡಯ್ಯ ಯುವ ಸೇನೆ ಸಂಸ್ಥಾಪಕ ಅಧ್ಯಕ್ಷರಾದ ಸುನೀಲ ಭಾವಿಕಟ್ಟಿ, ಟೋಕರೆ ಕೋಳಿ ಸಮಾಜ ಸಂಘದ ಜಿಲ್ಲಾ ಉಪಾಧ್ಯಕ್ಷ ಸುನೀಲ ಖಾಶೆಂಪೂರ್, ಮುಖಂಡರಾದ ಮಾರುತಿ ಮಾಸ್ಟರ್, ರಮೇಶ ಬಾಲೆಬಾಯಿ, ಶಿವಕುಮಾರ ಭಾವಿಕಟ್ಟಿ, ಸಂತೋಷ ಹೊನ್ನಡ್ಡಿ, ರಮೇಶ ಕಮಠಾಣ, ವೆಂಕಟರೆಡ್ಡಿ, ಸಂಗಮೇಶ ಹೊನ್ನಡ್ಡಿ ಸೇರಿದಂತೆ ಇತರರು ಇದ್ದರು.

Ghantepatrike kannada daily news Paper

Leave a Reply

error: Content is protected !!