ವಿದ್ಯಾರ್ಥಿಗಳಿಗೆ ಜಾಗೃತಿ ಮೂಡಿಸಲು ಆರ್.ಟಿ.ಓ. ಸರೂಳಕರ ಮನವಿ
ಬೀದರ ಮೋಟಾರು ವಾಹನ ತರಬೇತಿ ಶಾಲೆಗಳಲ್ಲಿ ಮೋಟಾರು ವಾಹನ ತರಬೇತಿಗೆ ಬರುವ ಅಭ್ಯರ್ಥಿಗಳಿಗೆ ರಸ್ತೆ ಸುರಕ್ಷತಾ ಕುರಿತಾಗಿ ಕಡ್ಡಾಯವಾಗಿ ಹೆಲ್ಮೇಟ್ ಧರಿಸುವುದು, ಸೀಟ್ ಬೆಲ್ಟ್ನ್ನು ಅಳವಡಿಸುವುದು ಹಾಗೂ ರಸ್ತೆ ಸುರಕ್ಷತೆಗೆ ಸಂಬಂಧಿಸಿದ ಕಡ್ಡಾಯ ಚಿನ್ಹೆಗಳು ಹಾಗೂ ನಿಯಮಗಳನ್ನು ಪಾಲಿಸಲು ಎಲ್ಲಾ ಅಭ್ಯರ್ಥಿಗಳಿಗೆ ವಾರಕ್ಕೆ ಒಂದು ಸಲ ಎಲ್ಲಾ ಪ್ರಾಚಾರ್ಯರು ಅವರ ತರಬೇತಿ ಕೇಂದ್ರಗಳಲ್ಲಿ ರಸ್ತೆ ಸುರಕ್ಷತಾ ನಿಯಮಗಳ ಕುರಿತು ಅರಿವು ಮೂಡಿಸಬೇಕು ಎಂದು ಬೀದರ ಪ್ರಾದೇಶಿಕ ಸಾರಿಗೆ ಅಧಿಕಾರಿಗಳಾದ ಶ್ರೀ ಮುರಘೇಂದ್ರ ಸರೂಳಕರ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.