ಬೀದರ್

ರೈತರ ಸಮಸ್ಯೆಗಳು ಬಗೆಹರಿಸುವ ಮುಖ್ಯಮಂತ್ರಿಗಳಿಗೆ ಮನವಿ

ಬೀದರ ಜಿಲ್ಲೆಯ ರೈತರು ವಿವಿಧ ಸಮಸ್ಯೆಗಳಲ್ಲಿ ಸಿಲುಕಿ ಪರದಾಡುತ್ತಿದ್ದು, ಈ ಕೆಳಕಂಡ ರೈತರ ಸಮಸ್ಯೆಗಳು ಕುಲಂಕುಶವಾಗಿ, ತಿಳಿದುಕೊಂಡು, ಶೀಘ್ರದಲ್ಲಿ ಈಡೇರಿಸಬೇಕಾಗಿ ಕೋರಲಾಗಿದೆ.
ಬೇಡಿಕೆಗಳು: ಅತಿವೃಷ್ಟಿಯಿಂದ ಬೆಳೆ ಹಾನಿಯಾದ ರೈತರಿಗೆ ಪ್ರತಿ ಎಕರೆಗೆ ರೂ. 50000/- ನೇರವಾಗಿ ರೈತರ ಖಾತೆಗೆ ಜಮಾ ಮಾಡಬೇಕು. ರಾಜ್ಯ ಸರ್ಕಾರವು ಘೋಷಣೆ ಮಾಡಿದಂತೆ 0% ಬಡ್ಡಿಯಲ್ಲಿ 5 ಲಕ್ಷದವರೆಗೆ ಪ್ರತಿಯೊಬ್ಬ ರೈತನಿಗೆ ಸಾಲ ಕೊಡುವ ವ್ಯವಸ್ಥೆ ಬರೀ ಕಾಗದದಲ್ಲಿದ್ದು, ಅದನ್ನು ಕಾರ್ಯರೂಪಕ್ಕೆ ತರಬೇಕು. ಕಾಡು ಪ್ರಾಣಿಗಳಿಂದ ರೈತರ ಬೆಳೆ ರಕ್ಷಣೆ ಮಾಡಲು ಪರ್ಯಾಯ ವ್ಯವಸ್ಥೆ ಹುಡುಕಿ, ರೈತರ ಹಿತ ಕಾಪಾಡಬೇಕು. ಹಿಂದಿನ ಸರ್ಕಾರದಂತೆ ಮುಖ್ಯಮಂತ್ರಿ ರೈತ ಸನ್ಮಾನ ಯೋಜನೆಯಲ್ಲಿ ಪ್ರತಿ ವರ್ಷಕ್ಕೆ ಎರಡು ಹಂತದಲ್ಲಿ ಕೂಡಿ 4 ಸಾವಿರ ರೂಪಾಯಿ ತಾವು ಕೂಡ ರೈತರ ಖಾತೆಗೆ ಜಮೆ ಮಾಡಬೇಕು. ರಸಗೊಬ್ಬರಗಳು ಮಾರುಕಟ್ಟೆಯಲ್ಲಿರಬಹುದು, ಪಿ.ಕೆ.ಪಿ.ಎಸ್.ನಲ್ಲಿ ಇರಬಹುದು, ಎಂ.ಆರ್.ಪಿ.ಗಿAತ ಹೆಚ್ಚಿನ ಹಣ ರೈತರಿಂದ ವಸೂಲಿ ಮಾಡುತ್ತಿದ್ದು, ಅದಕ್ಕೆ ಕಡಿವಾಣ ಹಾಕಿ, ಎಂ.ಆರ್.ಪಿ. ಬೆಲೆಗೆ ಮಾರುವ ವ್ಯವಸ್ಥೆ ಮಾಡಬೇಕು ಎಂದು ಇಂದು ಜಿಲ್ಲಾಧಿಕಾರಿಗಳ ಮುಖಾಂತರ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ರೈತ ಸಂಘದ ಜಿಲ್ಲಾಧ್ಯಕ್ಷರಾದ ಸಿದ್ರಾಮಪ್ಪಾ ಆಣದೂರೆ. ಶ್ರೀಮಂತ್ ಬಿರಾದಾರ, ದಯಾನಂದ ಸ್ವಾಮಿ ಸಿರ್ಸಿ, ಚಂದ್ರಶೇಖರ ಜಮಖಂಡಿ, ಸತೀಶ ನನ್ನೂರ, ಶಮಕರೆಪ್ಪಾ ಪಾರಾ ಇದ್ದರು.

Ghantepatrike kannada daily news Paper

Leave a Reply

error: Content is protected !!