ರಾಷ್ಟ್ರಮಟ್ಟದ ಕರಾಟೆ ಟೂರ್ನಿ: ಕರ್ನಾಟಕ ತಂಡ ಆಯ್ಕೆ
ಬೀದರ್: ರಾಷ್ಟ್ರಮಟ್ಟದ ಮುಕ್ತ ಕರಾಟೆ ಟೂರ್ನಿಗೆ ಕರ್ನಾಟಕ ತಂಡವನ್ನು ಆಯ್ಕೆ ಮಾಡಲಾಗಿದೆ.ಇಲ್ಲಿಯ ಒಳಾಂಗಣ ಕ್ರೀಡಾಂಗಣದಲ್ಲಿ 15 ಆಟಗಾರರನ್ನು ತಂಡಕ್ಕೆ ಆಯ್ಕೆ ಮಾಡಲಾಯಿತು.ಸಮರ್ಥ ಎ, ಎಂ.ಡಿ. ಫರಹಾನ್, ಪ್ರೀತಂ ರಾಠೋಡ್, ಮೋರೆ ಸುದೇಶ, ನಿಶಿತ್ ಸಾವಳಗಿ, ಎಂ.ಡಿ. ರಿಹಾನ್ ಅಲಿಶಾ, ಆದಿತ್ಯ ಮಾಳಗೆ, ಪುನೀತ್ ಮಾಳಗೆ, ಶಿವ ಮಾಳಗೆ, ಸಮರ್ಥ ಎಸ್, ಲಕ್ಷಿತ್ ಸಾವಳಗಿ, ಅಮುಲ್ ಮಾಳಗೆ, ಸಬೀನ್, ಸೋನು ಹಾಗೂ ದಿನಕರ ಆಯ್ಕೆಯಾದವರಲ್ಲಿ ಸೇರಿದ್ದಾರೆ.
ಕರ್ನಾಟಕ ಮಾರ್ಶಲ್ ಶೊಟೊಕಾನ್ ಕರಾಟೆ ಡೂ ಅಸೋಸಿಯೇಷನ್ ಹಾಗೂ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ವತಿಯಿಂದ ಆಯೋಜಿಸಿದ್ದ ಆಯ್ಕೆ ಪ್ರಕ್ರಿಯೆಯಲ್ಲಿ 50 ಆಟಗಾರರು ಭಾಗವಹಿಸಿದ್ದರು.
ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಅಧಿಕಾರಿ ಪದ್ಮಾವತಿ ಆಯ್ಕೆ ಪ್ರಕ್ರಿಯೆಗೆ ಚಾಲನೆ ನೀಡಿದರು. ಇಲಾಖೆಯ ವ್ಯವಸ್ಥಾಪಕ ಮೌಲಪ್ಪ ಮಾಳಗೆ, ಇಂಡಿಯನ್ ಮಾರ್ಶಲ್ ಶೊಟೊಕಾನ್ ಕರಾಟೆ ಡೂ ಫೆಡರೇಷನ್ ಅಧ್ಯಕ್ಷ ಸುವಿತ್ ಎಸ್. ಮೋರೆ, ಸಿದ್ಧಾರ್ಥ ಎಸ್.ಎಂ, ಮಾಲಾಶ್ರೀ ಎಸ್. ಮೋರೆ, ಎಂ.ಡಿ. ಮಹೆಬೂಬ್, ಸಚಿನ್, ವೈಷ್ಣವಿ, ನಂದಿನಿ ಇದ್ದರು.
ಮಹಾರಾಷ್ಟ್ರದ ಔರಂಗಾಬಾದ್‍ನಲ್ಲಿ ಆಗಸ್ಟ್ 27ಕ್ಕೆ ರಾಷ್ಟ್ರಮಟ್ಟದ ಮುಕ್ತ ಕರಾಟೆ ಟೂರ್ನಿ ನಡೆಯಲಿದೆ.