ಯಲ್ಲಪ್ಪ ಹೆಗಡೆ ಇವರಮೇಲಿನ ಹಲ್ಲೆ ಖಂಡಿಸಿಮನವಿ
ತಹಸೀಲ್ದಾರರು ಚಿಂಚೋಳಿ ರವರ ಮುಖಾಂತರ ರೈತ ಹೋರಾಟಗಾರ ಮತ್ತು ಕುರುಬ ಸಮಾಜದ ಯುವ ಮುಖಂಡ ಯಲ್ಲಪ್ಪ ಹೆಗಡೆ ಇವರಮೇಲಿನ ಹಲ್ಲೆಯನ್ನು ಖಂಡಿಸಿ,ಪ್ರತಿಭಟನೆಯ ಮೂಲಕ ಕೊಡುತ್ತಿರುವ ಮನವಿ ಪತ್ರ ರೈತ ಹೋರಾಟಗಾರ ಮತ್ತು ಕುರುಬ ಸಮಾಜದ ಯುವಮುಖಂಡ ಯಲ್ಲಪ್ಪ ಹೆಗಡೆ ಯವರನ್ನು ಬಿಳಗಿ ತಾಲೂಕಿನ ರೈತರ ಸಮಸ್ಯೆಗಳ ಬಗ್ಗೆ ಸುಗರ ಫ್ಯಾಕ್ಟರಿಯಿಂದ ಬರಬೆಕಾರರೈತರ ಕಬ್ಬಿನ ಬಿಲ್ಲಿನ ಪಾವತಿಸಬೇಕೆಂದು ಒತ್ತಾಯಿಸಿ ಹೋರಾಟ ಮಾಡುತ್ತಿದ್ದು, ಬಿಳಗಿ ತಾಲೂಕಿನ ವಿವಿಧ ಸಮಸ್ಯೆಗಳುಇಡೆರಿಕೆಗಾಗಿ ನಿರಂತರ ಹೋರಾಟ ಮಾಡುತ್ತಿರುವ ಒಬ್ಬ ನಿಷ್ಟವಂತ ಸಮಾಜ ಸೇವಕನ ಮೇಲೆ
ಇಂಗಳಗಿ ಕ್ರಾಸ್ ನಲ್ಲಿ ದುಷ್ಕಮಿಗಳು ಇವರ ಕಾರನ್ನು ಅಡ್ಡಗಟ್ಟಿ ಇವರ ಮೇಲೆ ಮಾರಣಾಂತಿಕ ಹಲ್ಲೆ ಮಾಡಿರುವುದನ್ನು
ಕರ್ನಾಟಕ ಕುರುಬರ ಸಂಘ ಮತ್ತು ಯುವ ಕುರುಬರ ಸಂಘ ತಾಲೂಕಾ ಚಿಂಚೋಳಿ ಘಟಕ ಮತ್ತು ರೈತ ಪರ ಸಂಘಟನೆಗಳು
ಉಗ್ರವಾಗಿ ಖಂಡಿಸುತ್ತವೆ. ಹಲ್ಲೆಯು ರಾಜಕೀಯ ಉದ್ಧೇಶದಿಂದ ಕುಡಿರುವುದು ಕಂಡುಬರುತ್ತಿದೆ. ಹಲ್ಲೆ
ಮಾಡಿದವರನ್ನು ಕೂಡಲೇ ಬಂದಿಸಿ, ಈ ಹಲ್ಲೆಯ ಹಿಂದೆಯಾರಿದ್ದಾರೆ ಎಂಬುವುದನ್ನು ಪತ್ತೆ ಹಚ್ಚಿ, ಕಠಿಣಾತಿ ಕಠಿಣ ಶಿಕ್ಷೆ
ಕೊಡಿಸಬೇಕೆಂದು ಒತ್ತಾಯಿಸುತ್ತೇವೆ. ಮತ್ತು ಈ ಕೆಳಗಿನ ಬೇಡಿಕೆಗಳನ್ನು ಇಡೆರಿಸಬೇಕೆಂದು ಆಗ್ರಹಿಸುತ್ತೇವೆ. .
ಬೇಡಿಕೆಗಳು:ಯಲ್ಲೆಪ್ಪ ಹೆಗಡೆಯಯವರ ಮೇಲೆ ಹಲ್ಲೆ ಮಾಡಿದರವನ್ನು ಕೂಡಲೇ ಬಂಧಿಸಬೇಕು.ಹಲ್ಲೆಯ ಹಿಂದಿರುವ ಮುರುಗೇಶ ನಿರಾಣಿ ಮತ್ತು ಸಂಗಮೇಶ ನಿರಾಣಿ ವಿರುದ್ಧ ಎಫ್ ಆಯ್ದಾಖಲಿಸಬೇಕು ಮತ್ತು ಇವರನ್ನು ಬಂದಿಸಬೇಕು.ಯಲ್ಲಪ್ಪ ಹೆಗಡೆಯವರಿಗೆ ಸೂಕ್ತ ಚಿಕಿತ್ಸೆ ಕೊಡಬೇಕು. ಸೂಕ್ತ ಭದ್ರತೆ ಒದಗಿಸಬೇಕು.ರೇವಣಸಿದ್ದಪ್ಪ ಅಣಕಲ ಕಾರ್ಯದರ್ಶಿಗಳು
ರಾಜಕುಮಾರ ಕಂಡಗೊಂಡ ಯವಕುರುಬ ಸಂಘ ಅಧ್ಯಕ್ಷರುರವಿ ದಸ್ತಾಪೂರ ಸಮಾಜದ.ರಾಜಕುಮಾರ ಕನಕಪೂರ ನಾಗಪ್ಪ ಯಲಮಡಗಿಮಲ್ಲಿಕಾರ್ಜುನ ಪೂಜಾರಿ ಅಣವಾರಗೋಪಾಲ ಎಮ್ , ಪಿ ಗಾರಂಪಳ್ಳಿ.ಅಂಜಪ್ಪ ಕಲ್ಲೂರರಾಮಚಂದ್ರ ಚಿಂಚೋಳಿ ತುಳಜಪ್ಪ ಚಿಂಚೋಳಿ