ಮಕ್ಕಳ ಪ್ರಗತಿಗೆ ಪ್ರದರ್ಶನ ಉತ್ತಮ ವೇದಿಕೆ : ಲವೀಶ್ ಓರ್ಡಿಯಾ
ಮಕ್ಕಳು ಯಾವುದೇ ಭಯ ಆತಂಕಗಳಿಲ್ಲದೆ ಸ್ವಚ್ಛ ಪರಿಸರದಲ್ಲಿ ಮುಕ್ತವಾಗಿ ತನ್ನ ಕಲಿಕೆಯನ್ನು ತಾನೆ ಹೊರ ಹಾಕಲು ಹಾಗೂ ಶಿಕ್ಷಕರಿಗೆ ಮಕ್ಕಳ ಪ್ರಗತಿಯನ್ನು ದಾಖಲಿಸಿಕೊಳ್ಳಲು ಇಂತಹ ಯೋಜನೆಗಳು ಮತ್ತು ಪ್ರದರ್ಶನ ಒಂದು ಉತ್ತಮ ವೇದಿಕೆಯಾಗುತ್ತದೆ ಎಂದು ಮುಖ್ಯ ಅತಿಥಿಯಾಗಿ ಭಾಗವಹಿಸಿದ ಸಹಾಯಕ ಆಯುಕ್ತ, ಬೀದರ ಲವೀಶ್ ಓರ್ಡಿಯಾ ನುಡಿದರು.
ನಗರದ ಗುರು ನಾನಕ ಪಬ್ಲಿಕ್ ಶಾಲೆಯಲ್ಲಿ ಎರಡು ದಿವಸದ ಯೋಜನಾ ಕಾರ್ಯ ಪ್ರಸ್ತುತಿ ಮತ್ತು ಪ್ರದರ್ಶನ (ಪ್ರೊಜೆಕ್ಟ್ ಡೇ) ಉದ್ಘಾಟಿಸಿ ಮಾತನಾಡಿದ ಅವರು ರೋಬೆಟಿಕ್ ಬಗ್ಗೆ ಜಾಗೃತಿ ಮೂಡಿಸುತ್ತಿರುವುದು ಒಳ್ಳೆಯ ಸಂಕೇತವಾಗಿದೆ. ನಾವು ಮಾಡುತ್ತಿರುವ ಕೆಲಸ ಮಕ್ಕಳ ಕೂಡಾ ಮಾಡುತ್ತಿದ್ದಾರೆ. ಈ ವಿಜ್ಞಾನ ಮೇಳದಲ್ಲಿ ತಮ್ಮ ಪ್ರತಿಭೆ ಮೂಲಕ ಜನರಿಗೆ ಜಾಗೃತಿ ಮೂಡಿಸುತ್ತಿದ್ದಾರೆ, ವ್ಯಾಪಕ ಮೌಲ್ಯ ಮಾಪನದ ಅತ್ಯಂತ ಪರಿಣಾಮಕಾರಿ ಸಾಧನವಾದ ಯೋಜನೆ ಕಾರ್ಯ ಮಕ್ಕಳಿಗೆ ತನ್ನ ಕಲಿಕೆ ಬಗ್ಗೆ ಆತ್ಮ ವಿಶ್ವಾಸ ಮೂಡಿಸುತ್ತದೆ ಎಂದು ಹೇಳಿದರು.
ಇನ್ನೊರ್ವ ಮುಖ್ಯ ಅತಿಥಿಯಾಗಿ ಭಾಗವಹಿಸಿದ ಕೃಷಿ ವಿಜ್ಞಾನ ಕೇಂದ್ರದ ಮುಖ್ಯ ಮತ್ತು ಹಿರಿಯ ವಿಜ್ಞಾನಿ ಡಾ|| ಸುನೀಲ ಕುಮಾರ ಎನ್.ಎಂ. ಮಾತನಾಡಿ ಮಕ್ಕಳ ಪ್ರಗತಿಯನ್ನು ಅರ್ಥೈಸಿಕೊಳ್ಳಲು ಮತ್ತು ಸಾಧನೆ ಸಲಕರಣೆಗಳನ್ನು ರಚಿಸಕೊಳ್ಳಲು, ಪರಿಷ್ಕøತ ವಹಿಸಲು ಯೋಜನಾ ಕಾರ್ಯ ಒಂದು ಪ್ರಮುಖ ಸಾಧನೆವಾಗಿದೆ. ಮಕ್ಕಳಲ್ಲಿ ಆತ್ಮವಿಶ್ವಾಸವನ್ನು ಮೂಡಿಸಲು ಇಂತಹ ಪ್ರದರ್ಶನಗಳು ಅಗತ್ಯವಿದೆ ಎಂದರು.
ಅಪೇಕ್ಷಿತ ಶಾಲಾ ಸನ್ನಿವೇಶವನ್ನು ನಿರ್ಮಾಣ ಮಾಡಿಕೊಡುವುದೆ ನಮ್ಮ ಉದ್ದೇಶವಾಗಿತ್ತು. ಈ ಸನ್ನಿವೇಶ ಮಕ್ಕಳಿಗೆ ಸಮಗ್ರ ಅಭಿವೃದ್ಧಿಯತ್ತ ಮುನ್ನಡೆಯಲು ದಾರಿ ಮಾಡಿಕೊಡುತ್ತದೆ ಎಂದು ನಾವು ಭಾವಿಸುತ್ತೇವೆ. ನಾವು ಎಲ್ಲಿದ್ದೇವೆÉ, ನಾವು ಪಡೆದುಕೊಂಡ ಕಲಿಕೆಯ ಅನುಭವಗಳು ಯಾವುವು ಮುಂತಾದ ವಿಷಯಗಳ ಕುರಿತು ಮಕ್ಕಳ ಮಾಹಿತಿ ಪಡೆದುಕೊಂಡು ಅಡ್ಡಿ ಆತಂಕಗಳಿಲ್ಲದೆ ತಮ್ಮ ಪೋಷಕರ ಎದುರಿಗೆ ತಮ್ಮ ಮಟ್ಟವನ್ನು ಪ್ರದರ್ಶಿಸಿರುವುದು ನಮಗೆ ಅತ್ಯಂತ ಸಂತಸವನ್ನುಂಟು ಮಾಡಿದೆ ಎಂದು ಗುರು ನಾನಕ ಶಾಲೆಯ ಆಡಳಿತ ಮಂಡಳಿಯ ಉಪಾಧ್ಯಕ್ಷೆ ಡಾ|| ರೇಷ್ಮಾ ಕೌರ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಶ್ರೀ ನಾನಕ ಝಿರಾ ಸಾಹೇಬ್ ಫೌಂಡೆಷನ್ ಅಧ್ಯಕ್ಷ ಡಾ|| ಎಸ್.ಬಲಬೀರ್ ಸಿಂಗ್, ಪ್ರಾಂಶುಪಾಲೆ ಶ್ರೀಮತಿ ನಾಳಿನಿ ಡಿ.ಜಿ., ಅಮಜದ ಅಲಿ, ಡೀನರಾದ ಹನುಮಾನ, ಮುಖ್ಯ ಗುರುಗಳಾದ ಆರೀಫ್ ಹಾದಿ ಉಪಸ್ಥಿತರಿದ್ದರು.