ಭೀಮಸೇನ ಬಡಿಗೇರ ಸಾಹಿತ್ಯ ಸೇವೆ: ಚನಶೆಟ್ಟಿ ಶ್ಲಾಘನೆ ಮೂರು ಕೃತಿಗಳ ಬಿಡುಗಡೆ
ಬೀದರ್: ನಗರದ ಮೌನೇಶ್ವರ ಮಂದಿರದಲ್ಲಿ ಭಾನುವಾರ ಹುಬ್ಬಳ್ಳಿಯ ವಿಶ್ವಮಯ ಸಾಹಿತ್ಯ ಪ್ರಚಾರ ಸಮಿತಿ ರಜತ ಮಹೋತ್ಸವ ಅಂಗವಾಗಿ ನಡೆದ ಕಾರ್ಯಕ್ರಮದಲ್ಲಿ ಸಾಹಿತಿ ಭೀಮಸೇನ ಬಡಿಗೇರ ಸಂಪಾದಕತ್ವದ ಶ್ರೀ ವಿ.ಜಿ. ದೀಕ್ಷಿತ್ ಸಮಗ್ರ ಸಾಹಿತ್ಯ ಸಂಪುಟ 1, ಬೆಳ್ಳಿ ಬೆಳಕು ಹಾಗೂ ಅಕ್ಕಸಾಲಿಕೆ ಕೃತಿಗಳನ್ನು ಬಿಡುಗಡೆ ಮಾಡಲಾಯಿತು.
ಕೃತಿ ಬಿಡುಗಡೆಗೊಳಿಸಿದ ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಘಟಕದ ಅಧ್ಯಕ್ಷ ಸುರೇಶ ಚನಶೆಟ್ಟಿ ಅವರು, ಭೀಮಸೇನ ಬಡಿಗೇರ ವೃತ್ತಿಯಲ್ಲಿ ಎಂಜಿನಿಯರ್ ಆಗಿದ್ದರೂ, ಸಾಹಿತ್ಯ ಆಸಕ್ತಿ ಬೆಳೆಸಿಕೊಂಡಿದ್ದಾರೆ. ಸಾಹಿತ್ಯ ಕ್ಷೇತ್ರಕ್ಕೆ ಅವರ ಕೊಡುಗೆ ಅಪಾರವಾಗಿದೆ ಎಂದು ಹೇಳಿದರು.
ಕೃತಿಯ ಕುರಿತು ಭೀಮಸೇನ ಬಡಿಗೇರ ಮಾತನಾಡಿದರು. ವಿಶ್ವಕರ್ಮ ಧರ್ಮ ವರ್ಧಿನಿ ಸಂಘದ ಅಧ್ಯಕ್ಷ ಶ್ರೀನಿವಾಸ್ ವಿಶ್ವಕರ್ಮ ಕಾರ್ಯಕ್ರಮ ಉದ್ಘಾಟಿಸಿದರು. ಜಿಲ್ಲಾ ವಿಶ್ವಕರ್ಮ ಸಮಾಜದ ಅಧ್ಯಕ್ಷ ಮಹೇಶ ವಿಶ್ವಕರ್ಮ ಅಧ್ಯಕ್ಷತೆ ವಹಿಸಿದ್ದರು.
ಪ್ರಧಾನ ಕಾರ್ಯದರ್ಶಿ ವಿಶ್ವಕರ್ಮ ಶಿವಾನಂದ ಎಸ್, ಪ್ರಮುಖರಾದ ಭೀಮೇಶ ಬಡಿಗೇರ, ರವೀಂದ್ರ ಲಂಜವಾಳಕರ್, ಚಂದ್ರಕಲಾ ವಿಶ್ವಕರ್ಮ, ಸಿದ್ಧಾರೂಢ ವಿಶ್ವಕರ್ಮ, ಪಾಂಡುರಂಗ ಪಂಚಾಳ, ವಿನಯಕುಮಾರ, ಬಾಬುರಾವ್ ಚಿಮಕೋಡ್, ಅರವಿಂದ ವಿಶ್ವಕರ್ಮ, ಬಾಬುರಾವ್ ವಿಶ್ವಕರ್ಮ, ಶಾಮರಾವ್ ವಿಶ್ವಕರ್ಮ, ನಾರಾಯಣ ವಿಶ್ವಕರ್ಮ, ಈರಣ್ಣ, ವೈಜಿನಾಥ, ರಮೇಶ, ಪಾಂಡುರಂಗ ಪಂಚಾಳ, ನೆಹರೂ, ಏಕನಾಥ, ಸಂಜುಕುಮಾರ, ಸುನೀಲ್, ರಾಘವೇಂದ್ರ, ರಘುನಾಥ, ಸದಾನಂದ, ಸುಲೋಚನಾ ಗುರುನಾಥ, ಶ್ರೀದೇವಿ, ಸವಿತಾ, ಅನುರಾಧ ಎಸ್, ಲಕ್ಷ್ಮಿ ಅರವಿಂದ, ಮೌನೇಶ, ಅಶೋಕ, ಗಣಪತಿ, ಮೌನಪ್ಪ, ವಿಠ್ಠಲರಾವ್ ಪಾಲ್ಗೊಂಡಿದ್ದರು.
ಜಿಲ್ಲಾ ವಿಶ್ವಕರ್ಮ ಸಮಾಜ ಸಮಿತಿ, ವಿಶ್ವಕರ್ಮ ಮೌನೇಶ್ವರ ದೇವಸ್ಥಾನ ಸಮಿತಿ, ವಿಶ್ವಕರ್ಮ ಧರ್ಮ ವರ್ಧಿನಿ ಸಂಘ ಹಾಗೂ ಕಾಳಿಕಾದೇವಿ ದೇವಸ್ಥಾನ ಸಮಿತಿ ವತಿಯಿಂದ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.