ಬೀದರ ಡಿಸಿಸಿ ಬ್ಯಾಂಕ್ ರಾಷ್ಟ್ರದಲ್ಲಿಯೇ ಮುಂಚುಣಿ.
ಬೀದರ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ನಿ., ಬೀದರ. 1922ರಲ್ಲಿ ಆರಂಭಗೊಂಡು, ಜಿಲ್ಲೆಯ ಜನತೆಗೆ ವಿಶೇಷವಾಗಿ ಗ್ರಾಮೀಣ ಪ್ರದೇಶದ ರೈತರಿಗೆ ಹಾಗೂ ಬಡ ಮಹಿಳೆಯರಿಗೆ ಸ್ವ ಸಹಾಯ ಗುಂಪುಗಳ ಮೂಲಕ ಮಹತ್ವದ ಸೇವೆಗಳನ್ನು ಸಲ್ಲಿಸುತ್ತ ಇಡೀ ದೇಶಕ್ಕೆ ಮಾದರಿಯಾಗಿರುವುದು ಹೆಮ್ಮೆಯ ವಿಷಯ.
ಸುಮಾರು 25 ವರ್ಷಗಳಿಂದ ಬೀದರ ಜಿಲ್ಲೆಯಲ್ಲಿ, ಸ್ವ ಸಹಾಯ ಗುಂಪುಗಳ ಕಾರ್ಯ ಚಟುವಟಿಕೆಗಳು ಕ್ರಾಂತಿಯಂತೆ ಕಾರ್ಯ ಮಾಡುತ್ತಲಿದೆ. ಜಿಲ್ಲೆಯ ಎಷ್ಟೋ ಬಡ ಮಹಿಳೆಯರು ಶೈಕ್ಷಣಿಕವಾಗಿ…ಆರ್ಥಿಕವಾಗಿ ಹಿಂದೆ ಉಳಿದಿರುವುದು ಮನಗಂಡು, ಅಂದಿನ ಡಿಸಿಸಿ ಬ್ಯಾಂಕಿನ ಘನ ಅಧ್ಯಕ್ಷರಾಗಿದಂತಹ ಡಾ. ಗುರುಪಾದಪ್ಪ ನಾಗಮಾರಪಳ್ಳಿಯವರು ಬಡ, ನಿರ್ಗತಿಕ, ದೀನ-ದಲಿತ & ಹಿಂದೂಳಿದ ಮಹಿಳೆಯವರಿಗೆ ಸ್ವ ಸಹಾಯ ಗುಂಪುಗಳ ಮೂಲಕ ಅವರಲ್ಲಿ ಹುದುಗಿರುವ ಸ್ವ ಸಾಮಥ್ರ್ಯ ಹೊರತಂದು, ಸ್ವಾವಲಂಬಿಗಳಾಗಿ ಬದುಕಲು ಹಣಕಾಸಿನ ನೆರವು ನೀಡಿ “ ಸ್ವ-ಸಹಾಯ ಗುಂಪುಗಳ ಪಿತಾಮಹ ” ರೆನಿಸಿಕೊಂಡರು.
ವೈವಿಧ್ಯಮಯ ಅರಿವು ಮೂಡಿಸಲೆಂದೇ “ಸಹಕಾರ ರೂರಲ್ ಡೆವಲಪ್ಮೆಂಟ್ ಅಕಾಡೆಮಿ” (ಸಹರ್ದಾ) ತರಬೇತಿ ಕೇಂದ್ರವನ್ನು ಸ್ಥಾಪಿಸಿ,ರಾಜ್ಯದ-ರಾಷ್ಟ್ರದ-ಅಂತರಾಷ್ಟ್ರೀಯ ಪ್ರತಿನಿಧಿಗಳಿಗೆ ತರಬೇತಿಯನ್ನು ಕೊಡಿಸಿ,ಡಿಸಿಸಿ ಬ್ಯಾಂಕು ಗಳಲ್ಲಿನ ಸಹಕಾರ ರಂಗದ ಪ್ರಥಮ ತರಬೇತಿ ಸಂಸ್ಥೆ ಎಂಬ ಹೆಗ್ಗಳಿಕೆಗೆ ಪಾತ್ರ ವಾದದ್ದು ಶ್ಲಾಂಘನಿಯ.
• ಶಾರದಾ-ರೂಡ್ಶೆಟ್ಟಿ ಸಂಸ್ಥೆ;- ಬೀದರ ಡಿಸಿಸಿ ಬ್ಯಾಂಕು ತನ್ನ 188 ಪ್ಯಾಕ್ಸ್ಗಳ ಮೂಲಕ ಸ್ವ ಸಹಾಯ ಗುಂಪುಗಳನ್ನು ರಚಿಸಿ, ಆರ್ಥಿಕ ನೆರವು ನೀಡಿದ ನಂತರ, ಸ್ವ ಸಹಾಯ ಗುಂಪಿನ ಸದಸ್ಯರು ಸ್ವಾವಲಂಬಿಯಾಗಬೇಕಾದರೆ ತರಬೇತಿಗಳು ಅಗತ್ಯ. ಅಲ್ಲದೆ ಗ್ರಾಮೀಣ ಭಾಗದಲ್ಲಿನ ನಿರುದ್ಯೋಗಿ ಯುವಕ/ ಯುವತಿಯರ ಹಿತದೃಷ್ಟಿಯನ್ನು ಗಮನದಲ್ಲಿಟ್ಟುಕೊಂಡು ಈ ತರಬೇತಿ ಸಂಸ್ಥೆ ಪ್ರರಂಭಿಸಿದ ಹೆಗ್ಗಳಿಕೆ ಡಾ. ಗುರುಪಾದಪ್ಪಾ ನಾಗಮಾರಪಳ್ಳಿಯವರಿಗೆ ಸಲ್ಲುತ್ತದೆ.
ಡಿಸಿಸಿ ಬ್ಯಾಂಕಿನ ಸಹಾರ್ದ ತರಬೇತಿ (ರೂಡ್ಶೆಟ್ಟಿ) ಕೇಂದ್ರದಿಂದ ಹಲವಾರು ವ್ಯೆಕ್ತಿತ್ವ ವಿಕಸನ ತರಬೇತಿ ಯೋಂದಿಗೆ…….
• ಬಡ ಮಹಿಳೆಯರಿಗೆ ಒಗ್ಗಟ್ಟಿನ ಶಕ್ತಿ ತಿಳಿಸಿ,
• ಸ್ವ ಸಹಾಯದ ಸಾಮಥ್ರ್ಯ ಕಲಿಸಿ,
• ಹಣ-ಹಣ ಕೂಡಿಸುವ, ಉಳಿತಾಯದ ಮಹತ್ವ ತಿಳಿಸಿ.
• ಬ್ಯಾಂಕ ವ್ಯವಹಾರದ ಜ್ಞಾನ ಕೂಡಿಸಿ,
• ಭದ್ರತೆ ಪಡೆಯದೇ ಆರ್ಥಿಕ ಸಹಾಯ ನೀಡಿ, ಆರ್ಥಿಕ ಸಬಲೀಕರಣ, ಸಮಾಜಿಕ ಉನ್ನತಿ, ರಾಜಕೀಯ ನೆಲೆ,
ಹೀಗೆ ಹಲವು ರೀತಿಯ ತರಬೇತಿಗಳು ನೀಡುವಲ್ಲಿ ಡಿಸಿಸಿ ಬ್ಯಾಂಕ ಕಂಕಣ ಬದ್ಧವಾಗಿ ನಿಂತಿದೆ.ಈ ಎಲ್ಲದರ ಶ್ರಮದ ಫಲವಾಗಿ ಇಂದು ಲಕ್ಷಾಂತರ ಮಹಿಳೆಯರು ಸಮಾಜಿಕವಾಗಿ ಜಾಗೃತರಾಗಿದ್ದಾರೆ. ರಾಷ್ಟ್ರ-ರಾಜ್ಯಗಳ ಕಾರ್ಯಕ್ಕೆ ಕೈ ಜೋಡಿಸುವುದು, ಅನ್ಯಾಯದ ವಿರುದ್ಧ ಸಿಡಿದೇಳುವುದು, ರಾಷ್ಟ್ರ ಮಟ್ಟದ ಆಚರಣೆ / ಸ್ವಚ್ಛ-ಶುದ್ಧ ಪರಿಸರ ಕಾಪಾಡುವಿಕೆ / ಕಾನೂನನ್ನು ತಿಳಿದುಕೊಂಡು ಗೌರವದ ಬದುಕು ಸಾಗಿಸುತಿದ್ದಾರೆ.
ಇಷ್ಟೇ ಅಲ್ಲದೇ ಸ್ವಾಭಿಮಾನದಿಂದ ಎದೆ ಮೆಟ್ಟಿ ಬದುಕು ಸಾಗಿಸಲು ಮುಂದಾಗಿದ್ದಾರೆ. ಸಾಮಾಜಿಕ ಪ್ರಜ್ಞೆಯೊಂದಿಗೆ, ಮಹಿಳೆಯರು ತಮಗೆ ಮಿಸಲಿಟ್ಟ ಸರ್ಕಾರದ ಅಧಿಕಾರಿಗಳು ಪಡೆಯಲು ಪೈಪೋಟಿಮಾಡಿ, ಇಂದು ಬೀದರ ಜಿಲ್ಲೆಯಲ್ಲಿ ಮಹಿಳಾ ಸ್ವ ಸಹಾಯ ಗುಂಪಿನ ಸದಸ್ಯರು ಜಿಲ್ಲಾ ಪಂಚಾಯತ್ ಸದಸ್ಯರಾಗಿ, ತಾಲೂಕಾ ಪಂಚಾಯತ ಅಧ್ಯಕ್ಷರಾಗಿ, ತಾಲೂಕಾ ಪಂಚಾಯತ ಉಪಾಧ್ಯಕ್ಷರಾಗಿ, ಗ್ರಾಮ ಪಂಚಾಯತ ಅಧ್ಯಕ್ಷ, ಗ್ರಾಮ ಪಂಚಾಯತ ಉಪಾಧ್ಯಕ್ಷ, ಗ್ರಾಮ ಪಂಚಾಯತ ಸದಸ್ಯರಾಗಿ ರಾಜಕೀಯದಲ್ಲಿ ಧುಮುಕಿ ಕ್ರಾಂತಿಯನ್ನೇ ಮಾಡುತ್ತಿದ್ದಾರೆ. ಮಹಿಳೆಯರ ಎದೆಯಲ್ಲಿ ಅವ್ಯಕ್ತವಾಗಿ ಹುದುಗಿದ ಸಾಮಥ್ರ್ಯೆಕ್ಕೆ, ಸ್ವತಂತ್ರತೆ ಹಾಗೂ ತರಬೇತಿ ಮತ್ತು ಆರ್ಥಿಕ ಸಹಾಯ….ನೀರೆರದಂತಾಗಿ, ಇಂದು ಹೆಮ್ಮರವಾಗಿ ಬೆಳೆದು ನಿಲ್ಲುತಿದ್ದಾರೆ.
….2….
ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ 2022-23 ನೇ ಸಾಲಿನಲ್ಲಿ ಸ್ವ ಸಹಾಯ ಗುಂಪಿನ ಸದಸ್ಯರುಗಳಿಗೆ ಅತೀ ಕಡಿಮೆ ಬಡ್ಡಿ ದರದಿಂದ, ರೂ.603.12 ಕೋಟಿ ಸಾಲ ವಿತರಿಸಿ, ಮಾರ್ಚ-2023 ರ ಅಂತ್ಯಕ್ಕೆ ರೂ.735.70 (ಏಳು ನೂರ ಮುವತ್ತೈದು ಕೋಟಿ ಎಪ್ಪತ್ತು ಲಕ್ಷ ಮಾತ್ರ) ಸಾಲ ಹೊರಬಾಕಿ ಹೊಂದಿರುತ್ತದೆ. ಇದರಿಂದ ಅಪಾರ ಬಡ ಕುಟುಂಬಗಳು ಆರ್ಥಿಕವಾಗಿ ಬಲಿಷ್ಟವಾಗುತ್ತ ಸಾಗುತ್ತಿವೆ.
ಹಾಗೆಯೇ ಬ್ಯಾಂಕ್ ಸಾಲ ಪಡೆದ, ಗುಂಪಿನÀ ಸದಸ್ಯರು ಆಕಸ್ಮಾತ್ ಮರಣ ಹೊಂದಿದ್ದಲ್ಲಿ, ಕುಟುಂಬದವರ ಮೇಲೆ ಸಾಲದ ಭಾರ ವಾಗಬಾರದೆಂದು, ಭಾರತ ಸರ್ಕಾರದ ಸ್ವಾಮ್ಯತ್ವ ಹೊಂದಿರುವ, ಭಾರತೀಯ ಜೀವ ವಿಮಾ ನಿಗಮದ ಸಹಭಾಗಿತ್ವದೊಂದಿಗೆ ಈ ಕೆಳಗಿನಂತೆ ಅತೀ ಕಡಿಮೆ Pಡಿemium ಮೊತ್ತ ದಲ್ಲಿ ಸ್ವ-ಸಹಾಯ ಗುಂಪಿನ ಸದಸ್ಯರ ಜೀವ ವಿಮೆ ಮಾಡಿಸಲು ಮುಂದಾಗಿ, ಜಿಲ್ಲೆಯ ಸ್ವ-ಸಹಾಯ ಗುಂಪಿನ ಸದಸ್ಯರುಗಳಿಗೆ ಹಣಕಾಸು ವರ್ಷ 2022-23 ನೇ ಸಾಲಿನಲ್ಲಿ, ಒಟ್ಟು 1,02,747 ಸದಸ್ಯರಿಗೆ ಜೀವ ವಿಮೆಗೆ ಒಳಪಡಿಸಲಾಗಿದೆ. ಸದರಿ ಕಾರ್ಯದಲ್ಲಿ ಇಡೀ ರಾಷ್ಟ್ರದ ಡಿಸಿಸಿ ಬ್ಯಾಂಕುಗಳ ಪೈಕಿ, ಬೀದರ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ಏಕೈಕವಾಗಿ ಪರಿಚಯಿಸಿ, ಕೆಲಸ ನಿರ್ವಹಿಸುತ್ತಿರುವುದು ಹೆಮ್ಮಯ ವಿಷಯವಾಗಿದೆ.
Sl.no | Loan amt. Range | Sum Insured Slab (Plan) | Premium amt. |
1 | Rs.10,000/- to Rs. 25,000/- | Rs. 25000/- | Rs. 97/- |
2 | Rs.25,001/- to Rs. 50,000/- | Rs. 50,000/- | Rs. 194/- |
3 | Rs.50,001/- to Rs. 75,000/- | Rs. 75,000/- | Rs. 291/- |
4 | Rs.75,001/- to Rs. 1,00,000/- | Rs. 1,00,000/- | Rs. 384/- |
5 | Rs.1,00,001/- to Rs. 2,00,000/- | Rs. 2,00,000/- | Rs. 768/- |
ಈಗಾಗಲೇ ಬ್ಯಾಂಕ್ ಸಾಲ ಪಡೆದ, ಜಿಲ್ಲೆಯ ಕೆಲವು ಸ್ವ-ಸಹಾಯ ಗುಂಪಿನ ಸದಸ್ಯರು ಮರಣ ಹೊಂದಿದ್ದು, ಜುಲೈ-15, 2023ರ ಅಂತ್ಯಕ್ಕೆ ಓಟ್ಟು 14 ಜನ ಮರಣ ಹೊಂದಿರುವÀ ಸದಸ್ಯರ ಕ್ಲೇಮ್ ಸಲ್ಲಿಸಲಾಗಿ,ಈ ಪೈಕಿ 6 ಸದಸ್ಯರು ಜೀವ ವಿಮೆಯ ಕ್ಲೇಮ್ ಮೊತ್ತವನ್ನು ಪಡೆದಿರುತ್ತಾರೆ. ಅದರಲ್ಲಿ ಬಸವ ಕಲ್ಯಾಣ ತಾಲೂಕಿನ 3 ಸದಸ್ಯರು ಹಾಗೂ ಹುಮನಾಬಾದ ತಾಲೂಕಿನ ಒಬ್ಬ ಸದಸ್ಯಳು, ಭಾಲ್ಕಿ ತಾಲೂಕಿನ ಒಬ್ಬ ಸದಸ್ಯಳು ಹಾಗೂ ಕಮಲನಗರ ತಾಲೂಕಿನ ಒಬ್ಬ ಸದಸ್ಯಳು ಒಟ್ಟು ರೂ.3,50,000/- ವಿಮಾ ಮೊತ್ತ ಪಡೆದಿರುತ್ತಾರೆ.
ಹಿಗಾಗಿ ಬ್ಯಾಂಕ ಸಾಲ ಪಡೆದು, ಅಕಸ್ಮಾತ್ ಮರಣ ಹೊಂದಿದ ಸ್ವ ಸಹಾಯ ಗುಂಪಿನ ಸದಸ್ಯರ ಕುಟುಂಬ ಹಾಗೂ ಸ್ವ ಸಹಾಯ ಗುಂಪು ಮತ್ತು ಬ್ಯಾಂಕು ಪಡಬೇಕಾದ ಸಾಲದ ಭಾರವನ್ನು, ವಿಮಾ ಸಂಸ್ಥೆಗೆ ಜೊಡಿಸಿರುವುದರಿಂದ ಎಲ್ಲರಿಗೂ ಅನುಕೂಲವಾಗುತ್ತಿದೆ.