ಬೀದರ ಜಿಲ್ಲೆಯ ಜನತೆಗೆ ಸಿಹಿ ಸುದ್ಧಿ : ಸಚಿವ ಭಗವಂತ ಖೂಬಾ
ಬೀದರ ರೈಲ್ವೆಗೆ ಮಾನ್ಯ ಪ್ರಧಾನಮಂತ್ರಿಗಳಾದ ಸನ್ಮಾನ್ಯ ಶ್ರೀ ನರೇಂದ್ರ ಮೋದಿಜಿಯವರ ಆಶೀರ್ವಾದದಿಂದ ಹಲವಾರು ಅಭಿವೃದ್ದಿ ಕಾಮಗಾರಿಗಳು, ಹೊಸ ರೈಲುಗಳು ಮುಂತಾದ ಸೌಲಭ್ಯಗಳು ನಮ್ಮ ಜನತೆಗೆ ಸಿಗುತ್ತಿದ್ದು, ಇದರ ಜೊತೆಗೆ ವಿಕಾರಾಬಾದ ನಿಂದ ಪರಳಿ ವಾಯಾ ಬೀದರ ಮಾರ್ಗವಾಗಿ ಒಟ್ಟು 267.77 ಕಿಮೀ ರೈಲ್ವೆ ಲೈನ್‍ಗೆ ಡಬಲ್ ಲೈನ್ ಮಾಡಲು ಫೈನಲ್ ಲೋಕೇಷನ್ ಸರ್ವೆ ಮಾಡಲು ರೈಲ್ವೆ ಇಲಾಖೆ ಮಂಜುರಾತಿ ನೀಡಿರುತ್ತದೆ. ಇದು ಮತ್ತೊಂದು ಸಿಹಿ ಸುದ್ಧಿ ಜಿಲ್ಲೆಯ ಜನತೆಗೆ ಒದಗಿರುತ್ತದೆ ಎಂದು ಕೇಂದ್ರ ಸಚಿವ ಭಗವಂತ ಖೂಬಾ ಮಾಹಿತಿ ನೀಡಿದ್ದಾರೆ.
ಸದರಿ ರೈಲ್ವೆ ಡಬಲ್ ಲೈನ್ ನಿರ್ಮಾಣದ ಸರ್ವೆ ಕಾರ್ಯಕ್ಕಾಗಿ ರೂ. 5.36 ಕೋಟಿ ಅನುದಾನ ಮೀಸಲಿಡಲಾಗಿದೆ, ಶೀಘ್ರದಲ್ಲಿ ಟೆಂಡರ್ ಕರೆದು, ಸರ್ವೆ ಕಾಮಗಾರಿ ಪ್ರಾರಂಭಿಸಲಾಗುವುದು, ಡಬಲ್ ಲೈನ್ ಅಭಿವೃದ್ದಿಗೊಂಡಲ್ಲಿ ನಮ್ಮ ಜಿಲ್ಲೆಯ ಜನರಿಗೆ ತುಂಬಾ ಸಹಕಾರಿಯಾಗಲಿದೆ ಎಂದು ತಿಳಿಸಿದ್ದಾರೆ.
ಡಬಲ್ ಲೈನ್ ಇಲ್ಲದ ಕಾರಣ ನಮ್ಮ ರೈಲುಗಳು ವಿಕಾರಾಬಾದ ಮೇಲೆ ನಿಲ್ಲುತ್ತಿವೆ ಇದರಿಂದ ಬೀದರಗೆ ರೈಲುಗಳು ಸಮಯಕ್ಕೆ ಸರಿಯಾಗಿ ಬರಲು ಕೆಲವೊಂದು ಸಲ ವಿಳಂಬವಾಗುತ್ತಿದೆ, ಡಬಲ್ ಲೈನ್ ನಿರ್ಮಾಣದಿಂದ ನಮ್ಮ ರೈಲುಗಳು ಎಲ್ಲಿಯೂ ನಿಲ್ಲದೆ ಸಮಯಕ್ಕೆ ಸರಿಯಾಗಿ ರೈಲುಗಳು ಬೀದರಗೆ ತಲುಪುತ್ತವೆ. ಈ ಡಬಲ್ ಲೈನ್ ಮಾಡಲು ಸರ್ವೆ ಮಾಡಲು ಮಂಜೂರಾತಿ ನೀಡಿರುವ ಪ್ರಧಾನಮಂತ್ರಿಗಳಾದ ಸನ್ಮಾನ್ಯ ಶ್ರೀ ನರೇಂದ್ರ ಮೋದಿಜಿಯವರಿಗೆ ಹಾಗೂ ರೈಲ್ವೆ ಸಚಿವರಾದ ಸನ್ಮಾನ್ಯ ಶ್ರೀ ಅಶ್ವೀನಿ ವೈಷ್ಣವರವರಿಗೆ ಕೇಂದ್ರ ಸಚಿವ ಭಗವಂತ ಖೂಬಾ ಧನ್ಯವಾದಗಳು ತಿಳಿಸಿದ್ದಾರೆ.
ಯಶವಂತಪೂರ ಬೀದರ ರೈಲು ಸಮಯಕ್ಕೆ ಸರಿಯಾಗಿ ಬೀದರ ತರುವ ಉದ್ಧೇಶದಿಂದ ಬೀದರ –ಕಲಬುರಗಿ ಮಧ್ಯೆ ಇರುವ 2 ಡೆಮೋ ರೈಲುಗಳ ಸಮಯ ಸಹ ಬದಲಾಯಿಸಲಾಗಿದೆ, ಎರಡ್ಮೂರು ದಿನಗಳಲ್ಲಿ ರೈಲು ಸಂಖ್ಯೆ: 07761, ಬೀದರನಿಂದ ಕಲಬುರಗಿಗೆ ಬೆಳಿಗ್ಗೆ 7.30ರ ಬದಲಾಗಿ 6.45ಕ್ಕೆ ಬೀದರನಿಂದ ಹೊರಡಲಿದೆ, ಕಲಬುರಗಿಗೆ ಬೆ. 9.30ಕ್ಕೆ ತಲುಪಲಿದೆ. ಮತ್ತು ರೈಲು ಸಂಖ್ಯೆ: 07748, ಸಾ. 4.40ರ ಬದಲಾಗಿ 5.30ಕ್ಕೆ ಬೀದರನಿಂದ ಹೊರಟು ರಾತ್ರಿ 8.20ಕ್ಕೆ ಕಲಬುರಗಿ ಬರಲಿದೆ.
ರೈಲು ಸಂಖ್ಯೆ: 07745 ಬೆ. 7.30ರ ಬದಲಾಗಿ 6.45ಕ್ಕೆ ಕಲಬುರಗಿಯಿಂದ ಹೊರಟು ಬೆ. 9.30ಕ್ಕೆ ಬೀದರ ತಲುಪಲಿದೆ, ರೈಲು ಸಂಖ್ಯೆ: 07764, ಸಾ. 4.40 ರ ಬದಲಾಗಿ ಸಾ.5.30ಕ್ಕೆ ಕಲಬುರಗಿಯಿಂದ ಹೊರಟು ರಾತ್ರಿ 8.05ಕ್ಕೆ ಬೀದರಗೆ ತಲುಪಲಿದೆ.
ಯಶವಂತಪೂರ ಬೀದರ ಹಾಗೂ ಇತರೆ ವೇಗದೂತ ರೈಲುಗಳು ಸಮಯಕ್ಕೆ ಸರಿಯಾಗಿ ಬೀದರಗೆ ತಲುಪುವ ಉದ್ದೇಶದಿಂದ ಈ ಸಮಯ ಬದಲಾವಣೆ ಮಾಡಿಸಲಾಗಿದೆ, ಕ್ಷೇತ್ರದ ಎಲ್ಲಾ ಪ್ರಯಾಣಿಕರು ಈ ಸಮಯ ಬದಲಾವಣೆಯ ಸದೂಪಯೋಗ ಪಡೆದುಕೊಳ್ಳಬೇಕೆಂದು ಕೇಂದ್ರ ಸಚಿವ ಭಗವಂತ ಖೂಬಾ ಜನರಲ್ಲಿ ಮನವಿ ಮಾಡಿಕೊಂಡಿದ್ದಾರೆ.