ಬಾಳೂರ ಗ್ರಾ.ಪಂ.ಗೆ ಲಕ್ಷ್ಮಿಬಾಯಿ ಚಲವಾ ಅಧ್ಯಕ್ಷ-ಮುನ್ನೆಮ್ಮ ಉಪಾಧ್ಯಕ್ಷರಾಗಿ ಆಯ್ಕೆ
ಭಾಲ್ಕಿ ಜುಲೈ. 28 ಭಾಲ್ಕಿ ತಾಲೂಕಿನ ಬಾಳೂರ ಗ್ರಾಮ ಪಂಚಾಯತ್‍ಗೆ ಗುರುವಾರ 2ನೇ ಅವದಿಯ ಅಧ್ಯಕ್ಷ-ಉಪಾಧ್ಯಕ್ಷರ ಚುನಾವಣೆ ನಡೆದು, ಅಧ್ಯಕ್ಷ ಸ್ಥಾನಕ್ಕೆ ಅವಿರೋಧ ಆಯ್ಕೆ ಯಾದರೆ ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆದವು.
ಅಧ್ಯಕ್ಷರಾಗಿ ಲಕ್ಷ್ಮಿಬಾಯಿ ನಾರಾಯಣ ಚಲುವಾ ಅವಿರೋಧ ಆಯ್ಕೆಯಾದರೆ ಉಪಾಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆಗೆ ಮಿಸಲಿದ್ದ ಕಾರಣ ಚುನಾವಣೆ ನಡೆದು ಡೊಂಗರಗಿಯ ಸದಸ್ಯರಾದ ಮುನ್ನೆಮ್ಮ ಹಾವಗೆಪ್ಪ ಆಯ್ಕೆಯಾದರು.
ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರಾದ ಪ್ರವೀಣ ಹಣಮಶೆಟ್ಟಿ, ಬಾಪುರಾವ ದೇಶಮುಖ ವಕೀಲರು, ಮುಖಂಡರಾದ ಜಗನ್ನಾಥ ಕರಂಜೆ, ಸತೀಶ ದೇಶಮುಖ, ರಾಜಕುಮಾರ ನಾಯಿಕೊಡೆ, ನಾರಾಯಣ ಚಲುವಾ, ಕಾಶಿನಾಥ ಚಲುವಾ, ಧನರಾಜ ಪಾಟೀಲ್, ಜಮಾಲಸಾಬ್, ಮುಸ್ತಪಾ, ನಾಗಗೊಂಡ ಹಾವಗಿ, ಸಿದ್ರಾಮ ದೇಶಮುಖ ಮತ್ತಿತರರು ಇದ್ದರು.