ಬೀದರ್

ಬಂಟಿ ದರಬಾರೆ(ಇಮಾನ್ಯವೆಲ್) ರವರಿಗೆ ರಾಜ್ಯ ನಿಗಮ ಮಂಡಳಿಯ ಅಧ್ಯಕ್ಷರನ್ನಾಗಿ ನಾಮನಿರ್ದೇಶನ ಮಾಡಲು ಮನವಿ

ಬಂಟಿ ದರಬಾರೆ ರವರು ಅನೇಕ ವರ್ಷಗಳಿಂದ ಸಮಾಜಮುಖಿ ಕೆಲಸಗಳನ್ನು ಮಾಡುವುದಲ್ಲದೇ ಕಾಂಗ್ರೇಸ್ ಪಕ್ಷದಲ್ಲಿ ವಿವಿಧ ಹುದ್ದೆಗಳನ್ನು ಅಲಂಕರಿಸಿ ಔರಾದ (ಬಿ) ಮೀಸಲು ಕ್ಷೇತ್ರದಲ್ಲಿ ತನ್ನದೇ ಆದ ವರ್ಚಸ್ಸು ಹೊಂದಿದ್ದು, ಅನೇಕ ಅಭಿಮಾನಿಗಳನ್ನು ಹೊಂದಿರುತ್ತಾರೆ. ಮತ್ತು ಅನೇಕ ಯುವಕರನ್ನು ಎಲ್ಲಾ ಸಮುದಾಯದ ಜನರನ್ನು ಕಾಂಗ್ರೇಸ್ ಪಕ್ಷಕ್ಕೆ ಬರಮಾಡಿಕೊಂಡು ಪಕ್ಷದ ಏಳಿಗೆಗಾಗಿ ಸಂಘಟನೆಯಲ್ಲಿ ತೊಡಗಿಸಿಕೊಂಡಿರುತ್ತಾರೆ.

ಪ್ರಯುಕ್ತ ಬಂಟಿ ದರಬಾರೆ ರವರ ಕಾಂಗ್ರೇಸ್ ಪಕ್ಷದಲ್ಲಿನ ಕಾರ್ಯ-ಚಟುವಟಿಕೆಗಳನ್ನು ಪರಿಗಣಿಸಿ ಇವರನ್ನು ರಾಜ್ಯ ನಿಗಮ-ಮಂಡಳಿಯ ಅಧ್ಯಕ್ಷರನ್ನಾಗಿ ನಾಮನಿರ್ದೇಶನ ಮಾಡಬೇಕೆಂದು  ಕರ್ನಾಟಕ ಮಾದಿಕ ವೇಲ್ಫೇರ್ ಅಸೊಷಿಯೆಸನ್ ಸಂಸ್ಥಾಪಕ ಅಧ್ಯಕ್ಷರಾದ ಸ್ವಾಮಿದಾಸ ಕೆಂಪೇನೋರ ಅವರ ನೇತೃತ್ವದಲ್ಲಿ ಅರಣ್ಯ ಮತ್ತು  ಪರಿಸರ ವಿಶಾಸ್ತç ಸಚಿವರರಾದ ಈಶ್ವರ ಖಂಡ್ರೆ ಅವರಿಗೆ ಮನವಿ ಸಲ್ಲಿಸಿದ್ದಾರೆ.
ಈ ಸಂದರ್ಭದಲ್ಲಿ ನವೀನ ಅಲ್ಲಾಪೂರೆ, ಶಿವರಾಜ ಹಮೀಲಪೂರಕರ್, ಕಮಲಹಾಸನ್ ಭಾವಿದೊಡ್ಡಿ,
ಜೇಮ್ಸ್ , ನರಸಿಂಗ್ ಮಿರ್ಜಾಪೂರ, ರೀಚರ್ಡ ಹಮೀಲಾಪೂರ, ಸುಧಾಕರ ಡೋಣೆ, ಸುಶೀಲಕುಮಾರ ಕೆಂಪೆ, ಸುರೇಶ ದೊಡ್ಡಿ, ನೋಹನರಾಜ್, ಧನರಾಜ ಮೇತ್ರೆ  ಸೇರಿದಂತೆ ನೂರಾರು ಕಾರ್ಯಕರ್ತರು ಇದ್ದರು.

Ghantepatrike kannada daily news Paper

Leave a Reply

error: Content is protected !!