ಬೀದರ್

ಪ್ರೊ. ಜಗನ್ನಾಥ ಹೆಬ್ಬಾಳೆ ಈ ನೆಲದ ಸಾಂಸ್ಕೃತಿಕ ಶಕ್ತಿ : ಪ್ರೊ. ಪರಮೇಶ್ವರ ನಾಯ್ಕ್

ಬೀದರ: ಪ್ರೊ ಜಗನ್ನಾಥ ಹೆಬ್ಬಾಳೆ ಈ ನೆಲದಲ್ಲಿ ಒಂದು ಸಾಂಸ್ಕೃತಿಕ ಶಕ್ತಿಯಾಗಿ ಸದಾ ಕ್ರಿಯಾಶೀಲರಾಗಿದ್ದಾರೆ. ಅವರು ನಮ್ಮ ಬೀದರ ವಿಶ್ವವಿದ್ಯಾಲಯದ ಡೀನರಾಗಿ ಮಾಡಿದ ಸೇವೆ ಸದಾ ಸ್ಮರಣೀಯ ಎಂದು ಬೀದರ ವಿಶ್ವವಿದ್ಯಾಲಯದ ಮೌಲ್ಯಮಾಪನ ಕುಲಸಚಿವ ಪ್ರೊ ಪರಮೇಶ್ವರ ನಾಯ್ಕ್ ಹೇಳಿದರು.
ಬೀದರ ವಿಶ್ವವಿದ್ಯಾಲಯದ ಕನ್ನಡ ವಿಭಾಗ, ಕರ್ನಾಟಕ ಬರಹಗಾರರ ಮತ್ತು ಕಲಾವಿದರ ಸಂಘ ಹಾಗೂ ಕರ್ನಾಟಕ ಕಾಲೇಜು ಕನ್ನಡ ವಿಭಾಗದ ಸಹಯೋಗದಲ್ಲಿ ಶುಕ್ರವಾರ ಬೀದರ ವಿಶ್ವವಿದ್ಯಾಲಯದಲ್ಲಿ ಹಮ್ಮಿಕೊಂಡಿದ್ದ ಪ್ರೊ ಜಗನ್ನಾಥ ಹೆಬ್ಬಾಳೆ ಅವರ ಬದುಕು ಬರಹ ಕುರಿತ ಒಂದು ದಿನದ ರಾಷ್ಟ್ರೀಯ ವಿಚಾರ ಸಂಕಿರಣದ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಶೈಕ್ಷಣಿಕ, ಸಾಹಿತ್ಯಕ, ಸಾಮಾಜಿಕ ತುಡಿತ ವಿರುವ ವ್ಯಕ್ತಿತ್ವ ಹೆಬ್ಬಾಳೆ ಅವರದು ಎಂದರು.
ಸಮಾಜ ವಿಜ್ಞಾನ ನಿಕಾಯದ ಡೀನರಾದ ಪ್ರೊ ದೇವಿದಾಸ ತುಮಕುಂಟೆ ಮಾತನಾಡಿ, ಹೆಬ್ಬಾಳೆ ಅವರದು ಸಮಾಜಪರವಾದ ಕಾಳಜಿ ಶ್ಲಾಘನೀಯ. ಅವರು ಕರ್ನಾಟಕ ಕಾಲೇಜಿನ ಕನ್ನಡ ವಿಭಾಗದ ಜೊತೆಗೆ ಹಲವು ವಿಭಾಗಗಳು ಕಟ್ಟಲು ಶ್ರಮಿಸಿದರು. ಅವರ ಸ್ನೇಹದ ವ್ಯಕ್ತಿತ್ವಕ್ಕೆ ಹಲವರು ಸೋತಿದ್ದಾರೆ. ಬೀದರ ನಲ್ಲಿ ಹಲವು ಸಾಹಿತ್ಯ ಸಮ್ಮೇಳನ, ಜಾನಪದ ಸಮ್ಮೇಳನ ನಡೆಸಿದ ಕೀರ್ತಿಗೆ ಭಾಜನರಾಗಿದ್ದಾರೆ ಎಂದರು.
ಬೀದರ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಕನ್ನಡ ಪ್ರಾಧ್ಯಾಪಕಿ ಡಾ. ಮಹಾದೇವಿ ಹೆಬ್ಬಾಳೆ ಮಾತನಾಡಿ, ಪ್ರೊ ಜಗನ್ನಾಥ ಹೆಬ್ಬಾಳೆ ಅವರದು ಮಾತೃ ಹೃದಯದ ವ್ಯಕ್ತಿತ್ವ. ಸದಾ ಜೀವಪರ, ಜನಪರ ಕಾಳಜಿ ಧ್ಯಾನಿಸುವ ಅಧ್ಯಾಪಕ. ಕೌಟುಂಬಿಕವಾಗಿಯೂ ಸಾಮಾಜಿಕವಾಗಿಯೂ ಅಂತಃಕರಣ ಹೊಂದಿದ ಜೀವ ಎಂದು ಹೇಳಿದರು.
ಬಸವಕಲ್ಯಾಣ ಬಸವೇಶ್ವರ ಸ್ನಾತಕೋತ್ತರ ಕಾಲೇಜು ಪ್ರಾಚಾರ್ಯ ಡಾ. ಶಾಂತಲಾ ಪಾಟೀಲ, ಪ್ರೊ. ಜಗನ್ನಾಥ ಹೆಬ್ಬಾಳೆ ಮಾತನಾಡಿದರು. ಡಾ ರಾಮಚಂದ್ರ ಗಣಾಪೂರ, ಡಾ. ಸಾವಿತ್ರಿ ಹೆಬ್ಬಾಳೆ, ಡಾ ವಿಜಯಕುಮಾರ ಬಿಳಗಿ, ಡಾ. ಸುರೇಖಾ ಬಿರಾದಾರ ಸೇರಿ ಹಲವರಿದ್ದರು.ಡಾ. ಸುನಿತಾ ಕೂಡ್ಲಿಕರ ಸ್ವಾಗತಿಸಿದರು. ಡಾ ಬಸವರಾಜ ಖಂಡಾಳೆ ನಿರೂಪಿಸಿದರು. ಡಾ. ಸಂಗಪ್ಪ ತೌಡಿ ವಂದಿಸಿದರು.

Ghantepatrike kannada daily news Paper

Leave a Reply

error: Content is protected !!