ಪ್ರಾಮಾಣಿಕ ಪ್ರಯತ್ನದಿಂದ ಯಶಸ್ಸು ಸಾಧ್ಯ: ಶಾಹಾಬಾದಕರ್
ಸಂಜೆವಾಣಿ ವಾರ್ತೆ. ಬೀದರ್: ಪ್ರಾಮಾಣಿಕ ಪ್ರಯತ್ನದಿಂದ ಯಶಸ್ಸು ಸಾಧ್ಯ ಎಂದು ಪದವಿ ಪೂರ್ವ ಶಿಕ್ಷನ ಹಾಗೂ ವೃತ್ತಿ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಚಂದ್ರಕಾಂತ ಶಹಾಬಾದಕರ್ ನುಡಿದರು.
ಶನಿವಾರ ನಗರದ ಡಾ.ಚನ್ನಬಸವ ಪಟ್ಟದ್ದೇವರ ರಂಗಮಂದಿರದಲ್ಲಿ ಟ್ಯಾಪರೂಟ್ ಗ್ರೂಪ್ ಆಫ್ ಇನಸ್ಟುಟೇಷನ್‍ನ ಮಾತೆ ಮಾಣಕೇಶ್ವರಿ ಪದವಿ ಪೂರ್ವ ಕಾಲೇಜು ವತಿಯಿಂದ ಈ ವರ್ಷದ ಪದವಿ ಪೂರ್ವ ದ್ವೀತೀಯ ವರ್ಷದಲ್ಲಿ ಸಾಧನೆಗೈದ ವಿದ್ಯಾರ್ಥಿಗಳಿಗಾಗಿ ಜರುಗಿದ ಸನ್ಮಾನ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ಪ್ರಾಮಾಣಿಕ ಹಾಗೂ ಕಠಿಣ ಪರಿಶ್ರಮದಿಂದ ವಿದ್ಯಾರ್ಥಿಗಳ ಭವಿಷ್ಯ ಉಜ್ವಲಗೊಳ್ಳುತ್ತದೆ. ವಿದ್ಯಾರ್ಥಿಗಳು ಯಾವಾಗಲು ಧನಾತ್ಮಕ ಚಿಂತನೆ ಹಾಗೂ ಸಕಾರಾತ್ಮಕ ಮನೋಭಾವ ಬೆಳೆಸಿಕೊಳ್ಳಬೇಕು. ದೊಡ್ಡ ಕನಸ್ಸು ಕಾಣಬೇಕು, ಅದನ್ನು ಸಾಕಾರಗೊಳಿಸಲು ನಿರ್ದಿಷ್ಟ ಗುರಿ ಇರಿಸಿಕೊಳ್ಳಬೇಕು. ಪಾಲಕರು ತಮ್ಮ ಮಕ್ಕಳ ಭವಿಷ್ಯ ಎತ್ತರದಲ್ಲಿ ಕಾಣಲು ಅವರ ಮೇಲೆ ಸದಾ ನಿಗಾ ಇಡಬೇಕು ಅಂದಾಗ ಮಾತ್ರ ಶ್ರೇಷ್ಠ ಸಾಧನೆ ಸಾಧ್ಯವಾಗಿದೆ ಎಂದರು.
ಸಾನಿಧ್ಯ ವಹಿಸಿದ ರಾಮಕೃಷ್ನ ವಿವೇಕಾನಂದ ಆಸ್ರಮದ ಅಧ್ಯಕ್ಷರಾದ ಪೂಜ್ಯ ಜ್ಯೋತಿರ್ಮಯಾನಂದ ಸ್ವಾಮಿಜಿ ಮಾತನಾಡಿ, ವಿದ್ಯಾರ್ಥಿಗಳು ಬರೀ ಅಂಕ ಗಳಿಸಿ ಮುನ್ನಡೆದರೆ ಪರಿಪೂರ್ಣ ಶಿಕ್ಷಣ ಎನಿಸುವುದಿಲ್ಲ ಅದು ಕೇವಲ ವರ್ಗಾವಣೆಯ ಶಿಕ್ಷಣವೆನಿಸುತ್ತದೆ. ನೈತಿಕ, ಸಾಮಾಜಿಕ ಹಾಗೂ ಅಧ್ಯಾತ್ಮವನ್ನು ಶಿಕ್ಷಣದ ಜೊತೆಗೆ ಸಂಭೋಧಿಸಿದಾಗ ಸುಸಂಸ್ಕøತ ಶಿಕ್ಷಣ ರಾಯಭಾರಿಗಳಾಗಿ ಹೊರ ಹೊಮ್ಮಬಲ್ಲರು ಎಂದವರು ತಿಳಿಸಿದರು.
ವೈಸ್ ಆಫ್ ಬೀದರ್‍ನ ಮುಖ್ಯಸ್ಥ ಸದಾನಂದ ಜೋಷಿ ಮಾತನಾಡಿ, ಇಂದು ಶಿಕ್ಷಣ ವಾಣಿಜ್ಯಕರಣವಾಗಿ ಮಾರ್ಪಡುತ್ತಿರುವುದು ಕಳವಳಕಾರಿ ಬೆಳವಣಿಗೆ. ಇಂದು ಎಲ್ಲ ವಿದ್ಯಾರ್ಥಿಗಳು ಬರೀ ನೀಟ್ ಹಾಗೂ ಸಿಇಟಿಗೆ ಮಾರು ಹೋಗಿ ಪ್ರಬಲ ಸ್ಪರ್ಧೆ ಎದುರಿಸುತ್ತಿರುವರು. ಆದ್ದರಿಂದ ವಿದ್ಯಾರ್ಥಿಗಳಿಗೆ ವಿವಿಧ ಅವಕಾಶಗಳಿದ್ದು, ಅವುಗಳತ್ತ ಸಾಗಬೇಕು, ಭವಿಷ್ಯದಲ್ಲಿ ಹಣ ಗಳಿಸುವ ಮನುಷ್ಯತ್ವ ಬೆಳೆಸಿಕೊಳ್ಳದೇ ಸಾಮಾಜಿಕ ಹಾಗೂ ಪರೋಪಕಾರಿ ಬದುಕು ಕಟ್ಟಿಕೊಳ್ಳಬೇಕೆಂದು ಕರೆ ನೀಡಿದರು.
ಅಧ್ಯಕ್ಷತೆ ವಹಿಸಿದ ಸಾಯಿಜ್ಞಾನ ಶಾಲೆಯ ಅಧ್ಯಕ್ಷ ರಮೇಶ ಕುಲಕರ್ಣಿ ಮಾತನಾಡಿ, ಮಾತೆ ಮಾಣಕೇಶ್ವರಿ ಯಾವತ್ತೂ ನಮ್ಮದೇ ಕಾಲೇಜು. ಅದನ್ನು ಸದ್ಯ ಟ್ಯಾಪ್ರೂಟ್ ಗ್ರೂಪ್ ಆಫ್ ಇನ್ಸ್ಟಿಟ್ಯೂಟ್‍ಗೆ ತಾತ್ಕಾಲಿಕವಾಗಿ ನಡೆಸಲು ಕೊಟ್ಟಿದ್ದೇವೆ. ಯಾವತ್ತಿದ್ದರೂ ಅದು ನಮ್ಮದೇ. ಮುಂದೆಯೂ ಅದು ನಮ್ಮದಾಗಿರುತ್ತದೆ ಎಂದು ತಮ್ಮ ಅನುಭವ ಹಂಚಿಕೊಂಡರು.
ಪತ್ರಕರ್ತ ಓಂಕಾರ ಮಠಪತಿ ಮಾತನಾಡಿದರು. ಕಾಲೇಜಿನ ಪ್ರಾಚಾರ್ಯ ಕುಮಾರ ರೆಡ್ಡಿ ಪ್ರಾಸ್ತಾವಿಕ ಮಾತನಾಡಿದರು. ಜಿಲ್ಲಾ ಉಪನ್ಯಾದಸಕರ ಸಂಘಸ ಅಧ್ಯಕ್ಷ ಓಂಕಾರ ಸೂರ್ಯವಂಶಿ ಹಾಗೂ ಪತ್ರಕರ್ತ ಸಂಜುಕುಮಾರ ಬುಕ್ಕಾ ವೇದಿಕೆಯಲ್ಲಿದ್ದರು.
ಈ ಸಂದರ್ಭದಲ್ಲಿ ಪಿ.ಯು.ಸಿ ದ್ವೀತಿಯ ವರ್ಷದಲ್ಲಿ ಅಗ್ರ ಶ್ರೇಣಿಯಲ್ಲಿ ಪಸಾದ, ನೀಟ್ ಹಾಗೂ ಕೆಸೆಟ್‍ನಲ್ಲಿ ಉತ್ತಮ ಸಾಧನೆಗೈದ ವಿದ್ಯಾರ್ಥಿಗಳಿಗೆ ಸನ್ಮಾನಿಸಿ ಗೌರವಿಸಲಾಯಿತು. ನಂತರ ವಿದ್ಯಾರ್ಥಿಗಳಿಂದ ಸಾಂಸ್ಕøತಿಕ ಕಾರ್ಯಕ್ರಮಗಳು ಜರುಗಿದವು.
ಆರಂಭದಲ್ಲಿ ಕು.ಸಿದ್ದಮ್ಮ ಹಾಗೂ ಅಂತರಾ ಪ್ರಾರ್ಥನೆ ಸಲ್ಲಿಸಿದರು. ಕು.ಸೃಷ್ಟಿ ಸ್ವಾಗತ ನೃತ್ಯಗೈದರು. ಉಪನ್ಯಾಸಕ ಲೋಕೇಶ ಉಡಬಳೆ ಸ್ವಾಗತಿಸಿ, ಉಪನ್ಯಾಸಕಿ ಪವಿತ್ರಾ ಹಾಗೂ ಆಕಾಂಕ್ಷಾ ಕಾರ್ಯಕ್ರಮ ನಿರೂಪಿಸಿದರು.