ಪ್ರತಿಯೊಬ್ಬರೂ ಒಂದಾದರೂ ಸಸಿ ನೆಡುವ ಸಂಕಲ್ಪ ಮಾಡಬೇಕು -ಡೆನೀತಾ ಪ್ರಾಂಶುಪಾಲರು
ಬೀದರಃ-ಜು 27, ಸ್ವಚ್ಛತಾ ಹಾಗೂ ಪರಿಸರ ನೈರ್ಮಲ್ಯ ಕಾಪಾಡುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ. ಪರಿಸರ ಸುಂದರವಾಗಿದ್ದರೆ ನಾವೆಲ್ಲರೂ ಸಮೃದ್ಧವಾದ ಬದುಕು ಬದುಕಲು ಸಾಧ್ಯವಾಗುತ್ತದೆ. ಆದಕಾರಣ ನಮ್ಮ ಮನೆ ಮತು ್ತಸುತ್ತಮುತ್ತಲಿನ ಓಣಿಗಳು ಸ್ವಚ್ಛವಾಗಿರಬೇಕು ಮತ್ತು ಮನೆಗೊಂದು ಮರ ಇರಬೇಕು ಅಂದಾಗ ಮಾತ್ರ ನಮಗೆ ಶುದ್ಧವಾದ ಆಮ್ಲಜನಕ ದೊರಕುತ್ತದೆ ಎಂದು ನವೀನ ಪ್ರಿ ಪಬ್ಲಿಕ್ ಸ್ಕೂಲಿನ ಪ್ರಾಂಶುಪಾಲರಾದ ಡೆನೀತಾ ಅವರು ನುಡಿದರು.
ಅವರು ಇಂದು ದಿನಾಂಕ 26-7-2023 ರಂದು ಬೀದರ ನಗರದಲ್ಲಿರುವ ನವೀನ ಪ್ರಿ ಪಬ್ಲಿಕ್ ಸ್ಕೂಲಿನಲ್ಲಿ ಆಯೋಜಿಸಿರುವ ಸ್ವಚ್ಛತಾ ಹಾಗೂ ಸಸಿ ನೆಡುವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡುತಿದ್ದರು. ಅವರು ಮುಂದುವರೆದು ಮಾತನಾಡಿ ಪ್ರತಿಯೊಬ್ಬರೂ ಒಂದಾದರೂ ಸಸಿ ನೆಡುವ ಸಂಕಲ್ಪ ಮಾಡಬೇಕೆಂದು ಕರೆ ನೀಡಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ ಕಾಮಶೆಟ್ಟಿ ಚಿಕಬಸೆ ಅವರು ಮಾತನಾಡಿ, ನಾವು ಶುದ್ಧವಾದ ಆಹಾರ ತೆಗೆದುಕೊಳ್ಳುವಂತೆ ಶುದ್ದವಾದ ಗಾಳಿಯ ಸೇವೆನೆ ಮಾಡಬೇಕಾದರೆ ನಮ್ಮ ಸುತ್ತಮುತ್ತಲಿನ ಪರಿಸರ ಸ್ವಚ್ಛವಾಗಿರಬೇಕು. ಇದರಿಂದ ರೋಗ-ರುಜಿನಗಳು ಸಹ ಹರಡುವುದು ತಡೆಗಟ್ಟುತ್ತದೆ. ಹಾಗಾಗಿ ನಾವು ಮನೆಗೊಂದು ಸಸಿ ನೆಡುವ ಮೂಲಕ ನಮ್ಮ ಪರಿಸರ ಮಾಲಿನ್ಯ ಕಾಪಾಡಿಕೊಳ್ಳಬೇಕು, ಶಾಲೆಯಲ್ಲಿ ಇಂತಹ ಕಾರ್ಯಕ್ರಮಗಳು ಹಮ್ಮಿಕೊಳ್ಳುವುದರಿಂದ ಮಕ್ಕಳಲ್ಲಿ ಚಿಕ್ಕಂದಿನಿಂದಲೆ ಪರಿಸರ ಮತ್ತು ಸ್ವಚ್ಛತೆಯ ಬಗ್ಗೆ ಅರಿವು ಮೂಡುತ್ತದೆ ಇದು ಉತ್ತಮ ಕಾರ್ಯವಾಗಿದೆ. ಎಂದರು.
ಇದೇ ಸಂದರ್ಭದಲ್ಲಿ ಶಾಲೆಯ ಆವರಣದಲ್ಲಿ ಮಕ್ಕಳಿಂದ ಸಸಿ ನೆಡಲಾಯಿತು. ಶಾಲೆಯ ಉಸ್ತುವಾರಿ ಸುಧಾರಾಣಿ ಕಾರ್ಯಕ್ರಮ ನಿರೂಪಿಸಿದರು, ಶಾಲೆಯ ಸಂಚಾಲಕರಾದ ಸುನೀತಾ ರಾಮಶೆಟ್ಟಿ ಅವರು ಸ್ವಾಗತಿಸಿದರು. ಕಾಯಕ್ರಮದಲ್ಲಿ ಶಾÀಲೆಯ ಸಿಬ್ಬಂದಿಗಳು ವಿದ್ಯಾರ್ಧಿಗಳು ಮತ್ತಿರರು ಪಾಲ್ಗೊಂಡಿದ್ದರು.