ಪುರಸಭೆ ಅಧಿಕಾರಿಗಳು ಸರಿಯಾಗಿ ಕೆಲಸ ಮಾಡಲಿ
ಇಂದು ಹುಮ್ನಾಬಾದ್ ಪುರಸಭೆಯಲ್ಲಿ ಮಾಹಿತಿ ಹಕ್ಕು ಮತ್ತು ಸಾಮಾಜಿಕ ಕಾರ್ಯಕರ್ತರ ವೇದಿಕೆ ತಾಲೂಕು ಘಟಕದ ವತಿಯಿಂದ ಸಾರ್ವಜನಿಕ ಸಮಸ್ಯೆಗಳನ್ನು ಆದಷ್ಟು ಬೇಗ ಪರಿಹರಿಸಬೇಕೆಂದು ಮನವಿ ಸಲ್ಲಿಸಲಾಯಿತು.
ಪುರಸಭೆಯ ಎಲ್ಲಾ ಸಿಬ್ಬಂದಿಗಳು ಐಡಿ ಕಾರ್ಡ್ ಧರಿಸಬೇಕು. ಹಾಗೂ ಸಿಬ್ಬಂದಿಗಳ ಟೇಬಲ್ ಮೇಲೆ ಅವರ ಹೆಸರು ಮತ್ತು ಕರ್ತವ್ಯದ ನಾಮಫಲಕ ಇಡಬೇಕು. ಸಾರ್ವಜನಿಕ ಕೆಲಸಗಳ ಸಕಾಲ ಬೋರ್ಡ್ ಹಚ್ಚಬೇಕು.
ಸಾರ್ವಜನಿಕರಿಂದ ಬಂದಂತಹ ಪ್ರತಿಯೊಂದು ಅರ್ಜಿಗಳಿಗೆ ಕ್ರಮ ಸಂಖ್ಯೆ ಅಳವಡಿಸಿ ಕ್ರಮ ಸಂಖ್ಯೆಯ ಮುಖಾಂತರ ಕೆಲಸವಾಗುವಂತೆ ಕಾರ್ಯ ನಿರ್ವಹಿಸಬೇಕು. ತಮಗೆ ಬೇಕಾದವರ ಕೆಲಸವನ್ನು ಸಿಬ್ಬಂದಿಗಳು ಬೇಗನೆ ಮಾಡಿ
ಕೊಡುತ್ತಿದ್ದಾರೆ.
ಆದರೆ ಸಾರ್ವಜನಿಕರ ಕೆಲಸಗಳನ್ನು ವಿಳಂಬ ಮಾಡುತ್ತಿದ್ದಾರೆ ಆದ್ದರಿಂದ ಕ್ರಮ ಸಂಖ್ಯೆ ಅನುಗುಣವಾಗಿ ಸಾರ್ವಜನಿಕರ ಅರ್ಜಿಗಳನ್ನು ತೆಗೆದುಕೊಳ್ಳಬೇಕು, ಹಾಗೆಯೇ ಹುಮ್ನಾಬಾದ್ ನಗರದ ರಸ್ತೆಗಳ ರಿಪೇರಿ ಹಾಗೂ ಕಾಲುವೆಗಳ ರಿಪೇರಿ ಆದಷ್ಟು ಬೇಗನೆ ಮಾಡಬೇಕು.
ಇಂತಹ ಹಲವು ಸಮಸ್ಯೆಗಳ ಬಗ್ಗೆ ಮಾಹಿತಿ ಹಕ್ಕು ಮತ್ತು ಸಾಮಾಜಿಕ ಕಾರ್ಯಕರ್ತರ ವೇದಿಕೆ ತಾಲೂಕು ಘಟಕ ವತಿಯಿಂದ ಪುರಸಭೆ ಸಿಬ್ಬಂದಿಗಳಿಗೆ ಮನವಿ ಸಲ್ಲಿಸಲಾಯಿತು