ಬೀದರ್

“ಪರಿಸರಕ್ಕೆ ಪೂರಕವಾದ ಬೆಳೆ ವೈವಿಧ್ಯತೆ ಮತ್ತು ನಿರ್ವಹಣಾ ಕ್ರಮಗಳತ್ತ ಗಮನಹರಿಸೋಣ” –ಶ್ರೀ. ಜಿಯಾ ಉಲ್ಲಾ ಕೆ.

ಕೃಷಿ ವಿಜ್ಞಾನ ಕೇಂದ್ರ ಬೀದರನಲ್ಲಿ ಕೃಷಿ ಇಲಾಖೆ ಕೃಷಿ ಸಂಶೋಧನಾ ಕೇಂದ್ರ ಮತ್ತು ಕೃಷಿ ವಿಜ್ಞಾನ ಕೇಂದ್ರದ ವತಿಯಿಂದ ಕೃಷಿ ಇಲಾಖೆಯ ಅಧಿಕಾರಿಗಳಿಗೆ ದ್ವೈಮಾಸಿಕ ಕಾರ್ಯಗಾರ ಹಾಗೂ ಜಿಲ್ಲಾ ಕೃಷಿ ತರಬೇತಿ ಕೇಂದ್ರ, ಔರಾದ ವತಿಯಿಂದ ಒಂದು ದಿನದ ತರಬೇತಿಯನ್ನು ದಿ:28-08-2024 ರಂದು ಏರ್ಪಡಿಸಲಾಯಿತು.
ಕಾರ್ಯಗಾರ ಉದ್ಘಾಟನಾ ಕಾರ್ಯಕ್ರಮದಲ್ಲಿ ಅಧ್ಯಕ್ಷತೆವಹಿಸಿದ ಕೃಷಿ ಸಂಶೋಧನಾ ಕೇಂದ್ರದ ಮುಖ್ಯಸ್ಥೆ ಡಾ. ಭವಾನಿ ಕೆ. ಯವರು ಮಾತನಾಡುತ್ತಾ ವಿಶ್ವವಿದ್ಯಾನಿಲಯದಲ್ಲಿ ರೂಪುಗೊಂಡ ತಾಂತ್ರಿಕತೆಗಳು ರೈತರ ಕ್ಷೇತ್ರಗಳಿಗೆ ಕೊಂಡೊಯ್ಯೋಲು ಕೃಷಿ ಇಲಾಖೆಯ ಪಾತ್ರ ಮಹತ್ತರದು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. ಕಾರ್ಯಕ್ರಮದ ಸಂಮುಖವಹಿಸಿದ ಜಂಟಿ ಕೃಷಿ ನಿರ್ದೇಶಕರು ಶ್ರೀ. ಜಿಯಾ ಉಲ್ಲಾ ಕೆ. ರವರು ಮಾತನಾಡುತ್ತಾ ಕೃಷಿ ಪರಿಸರ ಹಾಗೂ ಮಾನವರ ಆರೋಗ್ಯ ದೃಷ್ಠಿಯಿಂದ ಬೆಳೆ ವೈವಿಧ್ಯತೆ ಕಾಪಾಡುತ್ತಾ ಕೃಷಿಯಲ್ಲಿ ಹಾನಿಕಾರಕ ರಸಾಯನಿಕಗಳ ಬಳಕೆ ತಗ್ಗಿಸುವಂತೆ ರೈತರಿಗೆ ಮನವರಿಕೆಮಾಡಿಕೊಡುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಈ ನಿಟ್ಟಿನಲ್ಲಿ ಪೂರಕ ತಾಂತ್ರಿಕತೆಗಳನ್ನು ರೈತರಿಗೆ ತಲುಪಿಸಲು ನಾವೆಲ್ಲರು ಶ್ರಮಿಸೋಣ ಎಂದು ನೆರೆದ ಅಧಿಕಾರಿಗಳಿಗೆ ಕರೆ ನೀಡಿದರು. ಕಾರ್ಯಗಾರದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದ ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥರು ಡಾ. ಸುನೀಲಕುಮಾರ ಎನ್.ಎಮ್ ರವರು ಮಾತನಾಡುತ್ತಾ ನೂತನ ತಾಂತ್ರಿಕತೆಗಳು ಕುರಿತು ಅಧಿಕಾರಿಗಳು ಮನವರಿಕೆ ಮಾಡಿಕೊಂಡು ರೈತರಿಗೆ ತಲುಪಿಸಲು ಇಂತಹ ಕಾರ್ಯಗಾರ ಬಹುಮುಖ್ಯವಾಗಿದೆ. ಕಾರಣಾಂತರಗಳಿಂದ ಸ್ಥಗಿತವಾಗಿದ್ದ ಸದರಿ ಕಾರ್ಯಕ್ರಮ ಮರುಆರಂಭಗೊಂಡಿರುವ ಕುರಿತಾಗಿ ಹರ್ಷ ವ್ಯಕ್ತಪಡಿಸಿದರು.

ತಾಂತ್ರಿಕ ಸಮಾವೇಶದಲ್ಲಿ ಜಿಲ್ಲೆಯ ವಿವಿದ ತಾಲೂಕಿನ ಸಹಾಯಕ ಕೃಷಿ ನಿರ್ದೇಶಕರುಗಳಾದ ಶ್ರೀ. ಧೂಳಪ್ಪಾ, ಶ್ರೀ. ಎಂ.ಎ.ಕೆ ಅನ್ಸಾರಿ, ಡಾ. ಶರಣಕುಮಾರ ಕಲ್ಯಾಣಿ, ಶ್ರೀ. ಗೌತಮ, ಡಾ. ಮಲ್ಲಿಕಾರ್ಜುನ ಪಿ.ಎಮ್. ಹಾಗೂ ಶ್ರೀ. ಮಾರ್ಥಂಡ ರವರು ಬೆಳೆ ಪರಿಸ್ಥಿತಿ ಮಂಡಿಸಿದರು. ನಂತರದಲ್ಲಿ ಕೃಷಿ ಸಂಶೋಧನಾ ಕೇಂದ್ರ ಬೀದರನ ಹವಮಾನ ತಜ್ಞರಾದ ಡಾ. ಬಸವರಾಜ ಬಿರಾದರ ರವರು ಮಳೆ ಪರಿಸ್ಥಿತಿ ಕುರಿತು ಮಾಹಿತಿ ನೀಡಿದರು. ನಂತರದಲ್ಲಿ ಪ್ರಾಧ್ಯಾಪಕರಾದ ಡಾ. ಆರ್.ಎಲ್. ಜಾಧವ ರವರು ಪ್ರಸಕ್ತ ಬೆಳೆಗಳಲ್ಲಿ ಕೈಗೊಳ್ಳಬೇಕಾದ ನಿರ್ವಹಣಾ ಕ್ರಮಗಳು ಕುರಿತು ಮಾಹಿತಿ ವದಗಿಸಿದರು. ಕಾರ್ಯಗಾರದಲ್ಲಿ ಪ್ರಸಕ್ತ ಬೆಳೆಗಳಾದ ತೊಗರಿ, ಸೋಯಾ, ಕಬ್ಬು ಮತ್ತು ಹತ್ತಿ ಬೆಳೆಗಳಲ್ಲಿ ಕೀಟ ಮತ್ತು ರೋಗ ನಿರ್ವಹಣಾ ತಾಂತ್ರಿಕತೆಗಳ ಕುರಿತು ಡಾ. ಸುನೀಲಕುಮಾರ ಎನ್.ಎಮ್. ಮುಖ್ಯಸ್ಥರು ಕೃಷಿ ವಿಜ್ಞಾನ ಕೇಂದ್ರ, ಬೀದರ ವಿಷಯ ಮಂಡಿಸಿದರು. ಹಿಂಗಾರು ಹಂಗಾಮು ಬೆಳೆಗಳ ಹೊಸ ತಳಿಗಳ ವಿವರಣೆಯನ್ನು ಡಾ. ಜ್ಞಾನದೇವ ಬಿ. ತಿಳಿಸಿಕೊಟ್ಟರು. ಕಬ್ಬು ಮತ್ತು ಹಣ್ಣು ಬೆಳೆಗಳಲ್ಲಿ ಹಸಿರಲೆ ಗೊಬ್ಬರವಾಗಿ ಬೆಳೆಯಬಲ್ಲ ಮ್ಯುಕುನಾ ಎಂಬ ಹೊಸ ಬೆಳೆ ಕುರಿತು ಕಿರು ಮಾಹಿತಿಯನ್ನು ಡಾ. ನಿಂಗದಳ್ಳಿ ಮಲ್ಲಿಕಾರ್ಜುನ ನೀಡಿದರು.

ಸದರಿ ಕಾರ್ಯಕ್ರಮದಲ್ಲಿ ಕೃಷಿ ಇಲಾಖೆಯ ಉಪಕೃಷಿ ನಿರ್ದೇಶಕರಾದ ಶ್ರೀ. ರಾಘವೇಂದ್ರ ಹಾಗೂ ಶ್ರೀ. ಸೂರ್ಯಕಾಂತ ಬೀರಾದರ, ಜಂಟಿ ಕೃಷಿ ನಿರ್ದೇಶಕರ ಕಛೇರಿಯ ಸಹಾಯಕ ಕೃಷಿ ನಿರ್ದೇಶಕರು (ಜಾಗೃತ ದಳ) ಡಾ. ಮಚೇಂದ್ರನಾಥ ವಡ್ಡಿ , ಶ್ರೀ. ರಾಜಕುಮಾರ ಎಖೇಳ್ಳಿಕರ ಸಹಾಯಕ ಕೃಷಿ ನಿರ್ದೇಶಕರು (ವಿಷಯ ತಜ್ಞರು), ಶ್ರೀಮತಿ ರೂಪಾ ಸಹಾಯಕ ಕೃಷಿ ನಿರ್ದೇಶಕರು (ಮೇಲ್ವಿಚಾರಣೆ ಮತ್ತು ಮೌಲ್ಯಮಾಪನ) ಎಲ್ಲಾ ರೈತ ಸಂಪರ್ಕ ಕೇಂದ್ರದ ಮಖ್ಯಸ್ಥರು ಸಹಾಯಕ ಕೃಷಿ ಅಧಿಕಾರಿಗಳು ಮತ್ತು ಆತ್ಮ ಯೋಜನೆಯ ಸಿಬ್ಬಂದಿಗಳು ಭಾಗವಹಿಸಿದ್ದರು. ಆರಂಭದಲ್ಲಿ ಶ್ರೀ. ಶಿವಕುಮಾರ ಹುಗ್ಗೆ ಸಹಾಯಕ ಕೃಷಿ ನಿರ್ದೇಶಕರು (ಕೇಂದ್ರ ಸ್ಥಾನ) ಸ್ವಾಗತಿಸಿದರು. ತರಬೇತಿ ಆಯೋಜಕರಾದ ಜಿಲ್ಲಾ ಕೃಷಿ ತರಬೇತಿ ಕೇಂದ್ರ ಔರಾದ ನ ಸಹಾಯಕ ಕೃಷಿ ನಿರ್ದೇಶಕಿ ಶ್ರೀಮತಿ ಆರತಿ ಪಾಟೀಲ ತರಬೇತಿಗೆ ಆಗಮಿಸಿದ ಸರ್ವರಿಗೂ ವಂದಿಸಿದರು.

Ghantepatrike kannada daily news Paper

Leave a Reply

error: Content is protected !!