ಬೀದರ್

ದ.ಸಂ.ಸ. ಅಂಬೇಡ್ಕರ್ ವಾದ ಜಿಲ್ಲಾ ಮಟ್ಟದ ಸರ್ವ ಸದಸ್ಯರ ಸಭೆ

ಆಗಸ್ಟ್ 13 ರಂದು ಬೀದರ ತಾಲೂಕಿನ ಆಣದೂರ ಗ್ರಾಮದ ವೈಶಾಲಿನಗರದಲ್ಲಿರುವ ಬುದ್ಧವಿಹಾರ ಭವನದಲ್ಲಿ ದ.ಸಂ.ಸ. ಅಂಬೇಡ್ಕರ್ ವಾದ ಜಿಲ್ಲಾ ಮಟ್ಟದ ಸರ್ವ ಸದಸ್ಯರ ಸಭೆ ಹಾಗೂ ಭಾರತ ದೇಶದ ದಲಿತ ಚಳುವಳಿಗಳಿಗೆ ಕ್ರಾಂತಿಕಾರಿ ಹಾಡುಗಳು ಕವನಗಳು ಕಟ್ಟಿದ ದರ್ಬಲ ವರ್ಗಗಳ ಸಾಂಸ್ಕೃತಿಕ ನಾಯಕ ತೆಲಂಗಾಣಾದ ಜನ ಕವಿ ಪ್ರಜಾ ಕವಿ ಎಂದೇ ಹೆಸರಾದ ಗುಮ್ಮಡಿ ವಿಠಲರಾವ ಗದ್ದಾರ್ ಅವರು ಇತ್ತೀಚಿಗೆ ನಿಧನರಾಗಿರುವುದರಿಂದ ಹಾಗೂ ದ.ಸಂ.ಸ ಅಂಬೇಡ್ಕರ್ ವಾದ ಬೀದರ ಜಿಲ್ಲಾ ಸಂಘಟನಾ ಸಂಚಾಲಕರಾಗಿದ್ದ ದಿ. ಬುದ್ಧ ಹರಗೆ ಮಂದಕನಳ್ಳಿ ಇವರಿಗೂ ಕೂಡ ಭಾವಪೂರ್ಣ ಶೃದ್ಧಾಂಜಲಿ ಸಲ್ಲಿಸಿ, ಬುದ್ಧ ಪ್ರಾರ್ಥನೆಯೊಂದಿಗೆ ಪೂಜ್ಯ ಭಂತೇಜಿ ಧಮ್ಮಾನಂದ ರವರು ನೆರವೇರಿಸಿದ್ದರು. ಕಾರ್ಯಕ್ರಮದ ಅಧ್ಯಕ್ಷತೆ ಮಾತನಾಡಿದ ದ.ಸಂ.ಸ. ರಾಜ್ಯ ಸಮಿತಿ ಸದಸ್ಯರು, ಮಾಜಿ ತಾಲೂಕಾ ಪಂಚಾಯತ ಅಧ್ಯಕ್ಷರು ಹುಮನಾಬಾದ ರವರು ಮಾತನಾಡಿದ ಕಳೆದ ವಿಧಾನ ಸಭೆ ಚುನಾವಣೆಯಲ್ಲಿ ಸಂವಿಧಾನ ಬದಲಿಸುತ್ತೇವೆ ಎಂದವರನ್ನೇ ನಾವು ಬದಲಿಸಿದ್ದೇವೆ. 2024 ರ ಲೋಕಸಭಾ ಚುನಾವಣೆಯಲ್ಲಿ ಸಂವಿಧಾನ ವಿರೋಧಿ, ರೈತ ವಿರೋಧಿ, ಕಾರ್ಮಿಕ, ದಲಿತ, ಮಹಿಳೆ ವಿರೋಧಿ ಬಿ.ಜೆ.ಪಿ. ಸರ್ಕಾರವನ್ನು ಕೇಂದ್ರದಿAದ ಕಿತ್ತುಒಗೆದು ಹಳ್ಳಿಯಿಂದ ಜಿಲ್ಲೆಯವರೆಗೆ ಎಲ್ಲಾ ಕಾರ್ಯಕರ್ತರು/ ಪದಾಧಿಕಾರಿಗಳು ಸಕ್ರಿಯವಾಗಿ ಕೆಲಸ ಮಾಡಬೇಕೆಂದು ಕರೆ ನೀಡಿದ್ದರು. ಮುಖ್ಯ ಅತಿಥಿಗಳಾಗಿ ರಾಜ್ಯ ಸಮಿತಿ ಪದಾಧಿಕಾರಿಗಳಾದ ನಾಗಣ್ಣಾ ಬಡಿಗೇರ ಯಾದಗೀರ, ಅರ್ಜುನ ಗೊಬ್ಬು ಕಲಬುರಗಿ, ರಾಮಣ್ಣಾ ಕಲದೇವನಹಳ್ಳಿ ಸುರಪೂರ, ರಾಜಕುಮಾರ ಬನ್ನೇರ್, ಶುಭಾಶ ಜ್ಯೋತಿ, ರಂಜಿತಾ ಜೈನೂ, ಪ್ರಭುರಾವ ಚಿತ್ರಕೋಟಾ ಮಾತನಾಡಿದರು. ಇದೇ ಸಂದರ್ಭದಲ್ಲಿ ಜಿಲ್ಲಾ ಸರ್ವ ಸದಸ್ಯರ ಸಭೆಯಲ್ಲಿ ಕೆಳಕಂಡ ಪ್ರಮುಖ ನಿರ್ಣಯಗಳು ಅಂಗೀಕರಿಸಲಾಯಿತು.
ಸಭೆಯ ನಿರ್ಣಯಗಳು: ದಲಿತ ಸಂಘರ್ಷ ಸಮಿತಿ ಅಂಬೇಡ್ಕರ್ ವಾದ ಸಂಘಟನೆ ಪ್ರಬಲವಾಗಿ ಕಟ್ಟಲು ಪ್ರತಿ ಗ್ರಾಮ ಪಂಚಾಯತ ಹಂತದಲ್ಲಿ 100 ಜನರ ಸಕ್ರಿಯ ಕಾರ್ಯಕರ್ತರ ತಂಡ ರಚನೆ ಮಾಡುವುದು. ಮತ್ತು 500 ಜನರ ಸದಸ್ಯತ್ವ ನೊಂದಣಿ ನೊಂದಿಸುವುದು ಎಂದು ಸಭೆಯ ನಿರ್ಣಯ ಕೈಗೊಂಡಿತು. 2023 ಕರ್ನಾಟಕ ವಿಧಾನ ಸಭೆ ಚುನಾವಣೆಯಲ್ಲಿ ದ.ಸಂ.ಸ, ಐಕ್ಯ ಹೋರಾಟ ಚಾಲನಾ ಸಮಿತಿಯು ಕಾಂಗ್ರೇಸ್ ಪಕ್ಷಕ್ಕೆ ಷರತ್ತು ಬದ್ಧ ಬೆಂಬಲವನ್ನು ನೀಡಿ ಕೋಮುವಾದಿ, ಜಾತಿವಾದಿ, ರೈತ, ಕಾರ್ಮಿಕ, ದಲಿತ ವಿರೋಧಿ ಬಿ.ಜೆ.ಪಿ. ಭ್ರಷ್ಟ ಸರ್ಕಾರವನ್ನು ಕಿತ್ತು ಒಗೆಯಲು ಪ್ರಮುಖ ಪಾತ್ರ ವಹಿಸಿದೆ. ಈ ಸರ್ಕಾರವು ದಲಿತರ ಕಲ್ಯಾಣ ಕಾರ್ಯಕ್ರಮಗಳು ಎಸ್.ಇ.ಪಿ./ ಟಿ.ಎಸ್.ಪಿ. ಅನುದಾನದ ಸಮರ್ಪಕ ಅನುಷ್ಠಾನ ದಲಿತರ ಮೇಲಿನ ದೌರ್ಜನ್ಯಗಳ ನಿಯಂತ್ರಣ ಮಾಡುವಂತೆ ಸರ್ಕಾರದ ಮೇಲೆ ಸಂಘಟನೆಯ ನಿಗಾ ಇಡಲು ತೀರ್ಮಾನಿಸಲಾಯಿತು. ಕಲ್ಯಾಣ ಕರ್ನಾಟಕ ಅಭಿವೃದ್ಧಿಗೆ ಮೀಸಲು ಇಟ್ಟಿರುವ ಸುಮಾರು 5000 ಕೋಟಿ ಹಾಗೂ ಅನುದಾನದಲ್ಲಿ ಮತ್ತು ಬಂದ ಜಿಲ್ಲೆಗಳ ದಲಿತ ಕುಟುಂಬಗಳಿಗೆ ನೇರವಾಗಿ ಆರ್ಥಿಕ ಧನ ಸಹಾಯ ಮಾಡುವ ಯೋಜನೆಗಳು ರೂಪಿಸುವಂತೆ ಸರ್ಕಾರವನ್ನು ಒತ್ತಾಯ ಮಾಡುವ ನಿರ್ಣಯಗಳನ್ನು ಕೈಗೊಂಡಿತು. 2024 ರ ಲೋಕ ಸಭಾ ಚುನಾವಣೆಯಲ್ಲಿ ಸಂವಿಧಾನ ವಿರೋಧಿ ಬಿ.ಜೆ.ಪಿ.ಯ ನರೇಂದ್ರ ಮೋದಿ ಸರ್ಕಾರವನ್ನು ಕಿತ್ತು ಒಗೆಯಲು ಗ್ರಾಮದಿಂದ ಹಿಡಿದು ಜಿಲ್ಲಾ ಹಂತದ ವರೆಗೂ ಎಲ್ಲಾ ಕಾರ್ಯಕರ್ತರು ಈಗಿನಿಂದಲೇ ಕಾರ್ಯ ಪ್ರವರ್ತರಾಗಲು ನಿರ್ಣಯ ಕೈಗೊಳ್ಳಳಾಯಿತು.
ಇದೇ ತಿಂಗಳ ದಿನಾಂಕ : 24, 25, 26, 27 ನೇ 2023 ದಾವಣಗೆರೆ ಜಿಲ್ಲೆಯ ಹರಿಹರದ ಪ್ರೊ. ಬಿ. ಕೃಷ್ಣಪ್ಪ ಸ್ಮಾರಕ ಕೇಂದ್ರದಲ್ಲಿ ನಡೆಯಲಿರುವ ರಾಜ್ಯ ಮಟ್ಟದ ದ.ಸಂ.ಸ. ಅಂಬೇಡ್ಕರ್ ವಾದ ಪದಾಧಿಕಾರಿಗಳು ಮತ್ತು ಸಕ್ರಿಯ ಕಾರ್ಯಕರ್ತರ ಆಧ್ಯಾಯನ ಶಿಬಿರಕ್ಕೆ ಬೀದರ ಜಿಲ್ಲೆಯಿಂದ ಎಲ್ಲಾ ತಾಲೂಕುಗಳಿಂದ ಸುಮಾರು 100 ಜನ ಪದಾಧಿಕಾರಿಗಳನ್ನು ಕರೆದುಕೊಂಡು ಹೋಗಲು ತೀರ್ಮಾನಿಸಲಾಯಿತು.
ಜಿಲ್ಲಾ ಸಮಿತಿ ಮನರ ರಚನೆ ನೂತನ ಪದಾಧಿಕಾರಿಗಳ ಆಯ್ಕೆ:
ಜಿಲ್ಲಾ ಸಮಿತಿಯ ಪ್ರಧಾನ ಸಂಚಾಲಕರಾಗಿ : ಬಸವರಾಜ ಸಾಗರ ಶಮಶೀರನಗರ, ಜಿಲ್ಲಾ ಸಂಘಟನಾ ಸಂಚಾಲಕರಾಗಿ 3 ಝರೆಪ್ಪಾ ರಾಂಪೂರೆ, ಸುಧಾಕರ್ ಮಾಳಗೆ, ರಾಜಕುಮಾರ ಕಾಳೆಕ, ಬಾಬುರಾವ ಮಾಲೆ, ಮಾರುತಿ ಶಿಂಧೆ, ಉಮೇಶ ಭೋರಾಳೆ, ಖಜಾಂಚಿಯಾಗಿ 4 ಸಂಜುಕುಮಾರ ಬ್ಯಾಗಿ.
ಜಿಲ್ಲಾ ಕಾರ್ಯಕಾರಿ ಸಮಿತಿ ಸದಸ್ಯರಾಗಿ :
ಅಹ್ಮದ್ ಪಾಶಾ ಅಲಿಯಾಬಾದ, ವಿಠಲ ಲಾಡಕ, ಓಂಪ್ರಕಾಶ ಮೋರೆ, ಧನಾಜಿ ಕಾಂಬ್ಳೆ ದಾಬಕಾ, ತುಕಾರಾಮ ಸಿಂದಬAದಗಿ, ಕಲ್ಯಾಣ ಕರ್ನಾಟಕದ ದಲಿತ ಕಲಾ ಮಂಡಳಿ ಸಂಚಾಲಕರಾಗಿ ಪ್ರಭುರಾವ ಚಿತ್ತಕೋಟಾ, ಬೀದರ ಜಿಲ್ಲಾ ಕಲಾಮಂಡಳಿ ಸಂಚಾಲಕರಾಗಿ ಸುಭಾಶ್ ಜ್ಯೋತಿ ಅವರನ್ನು ಆಯ್ಕೆ ಮಾಡಲಾಯಿತು.   ಈ ಸಭೆಯಲ್ಲಿ ಬೀದರ ತಾಲೂಕಾ ಸಂಚಾಲಕರಾದ ರಮೇಶ ಮಂದಕನಳ್ಳಿ ಭಾಲ್ಕಿ ತಾಲೂಕಾ ಸಂಚಾಲಕರಾದ ಘಾಳೆಪ್ಪಾ ಮೈಲೂರೆ, ಬಸವಕಲ್ಯಾಣ, ಸಂಚಾಲಕರಾದ ಮಹಾದೇವ ಗಾಯಕವಾಡ, ಹುಮನಾಬಾದ ಸಂಚಾಲಕರಾದ ಕೈಲಾಶ ಮೇಟಿ, ಚಿಟ್ಟಗುಪ್ಪಾ ತಾಲೂಕಾ ಸಂಚಾಲಕರಾದ ಮಾಣಿಕರಾವ ಮಾಡಗೂಳ, ಔರಾದ ತಾಲೂಕು ಸಂಚಾಲಕರಾದ ಮಾರುತಿ ಜಗದಾಳೆ, ದಲಿತ ಮಹಿಳಾ ಒಕ್ಕೂಟದ ಸುಲೆಮ್ಯಾ ದಂಡೆ ಹಾಗೂ ವಿದ್ಯಾರ್ಥಿ ಒಕ್ಕೂಟದ ನಿತಿನ ಹೊಸಮನಿ, ಗೋಪಾಲ ಸಾಗರ, ಶಾಹುರಾಜ ಡಾಕುಳಗಿ, ಸಾಯಿನಿಲ್ ಬಂದು ಅನೇಕ ಕಾರ್ಯಕರ್ತರು ಭಾಗವಹಿಸಿದ್ದರು.

Ghantepatrike kannada daily news Paper

Leave a Reply

error: Content is protected !!