ದ್ವಿತೀಯ ಪಿಯುಸಿ 2ನೇ ಪೂರಕ ಪರೀಕ್ಷೆಗಳಲ್ಲಿ ನಕಲು ನಡೆಯದಂತೆ ಮುಂಜಾಗ್ರತೆವಹಿಸಿ – ಅಪರ ಜಿಲ್ಲಾಧಿಕಾರಿ ಶಿವಕುಮಾರ ಶೀಲವಂತ
ಬೀದರ. ಆಗಸ್ಟ್.19 – ಆಗಸ್ಟ್.21 ರಿಂದ ಸೆಪ್ಟೆಂಬರ್ 2 ರವರೆಗೆ ನಡೆಯಲಿರುವ ದ್ವಿತೀಯ ಪಿಯುಸಿ 2 ನೇ ಪೂರಕ ಪರೀಕ್ಷೆಗಳಲ್ಲಿ ನಕಲು ನಡೆಯದಂತೆ ಆಯಾ ಕಾಲೇಜಿನ ಪ್ರಾಂಶುಪಾಲರು. ಕಸ್ಟೋಡಿಯನ್ ಮತ್ತು ಪರೀಕ್ಷಾ ವೀಕ್ಷಕರು ಮುಂಜಾಗ್ರತೆ ವಹಿಸಬೇಕೆಂದು ಅಪರ ಜಿಲ್ಲಾಧಿಕಾರಿ ಶಿವಕುಮಾರ ಶೀಲವಂತ ಹೇಳಿದರು.
ಅವರು ಶನಿವಾರ ಜಿಲ್ಲಾಧಿಕಾರಿಗಳ ಕಛೇರಿ ಸಭಾಂಗಣದಲ್ಲಿ ದ್ವಿತೀಯ ಪಿಯುಸಿ 2ನೇ ಪೂರಕ ಪರೀಕ್ಷೆಗಳ ಪೂರ್ವ ಸಿದ್ದತಾ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿದರು.
ಪ್ರತಿ ವರ್ಷದಂತೆ ಈ ವರ್ಷವು ಪರೀಕ್ಷೆಗಳು ಸುಸೂತ್ರವಾಗಿ ನಡೆಯಬೇಕು ಮತ್ತು ಯಾವುದೇ ನಕಲು ನಡೆಯದಂತೆ ನೋಡಿಕೊಳ್ಳಬೇಕು. ಪರೀಕ್ಷಾ ಕೇಂದ್ರಗಳ 200 ಮೀಟರ್ ಸುತ್ತಲೂ ಕಲಂ 144 ಜಾರಿಯಲ್ಲಿರುತ್ತದೆ ಹಾಗೂ ಈ ಕೇಂದ್ರಗಳ ಹತ್ತಿರದಲ್ಲಿ ಪರೀಕ್ಷೆ ನಡೆಯುವ ಸಂದರ್ಭದಲ್ಲಿ ಯಾವುದೇ ಝರಾಕ್ಸ ಅಂಗಡಿಗಳು ತೆರೆಯದಂತೆ ನೋಡಿಕೊಳ್ಳಬೇಕೆಂದರು.
ಜಿಲ್ಲೆಯಲ್ಲಿ ಪರೀಕ್ಷೆಗಳು ಒಟ್ಟು 12 ದಿನ 11 ಪರೀಕ್ಷಾ ಕೇಂದ್ರಗಳಲ್ಲಿ ನಡೆಯಲಿವೆ. 12260 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಲಿದ್ದಾರೆ. ಬೀದರ ನಗರದಲ್ಲಿ 4 ಪರೀಕ್ಷಾ ಕೇಂದ್ರಗಳು, ಹುಮನಾಬಾದನಲ್ಲಿ 2, ಬಸವಕಲ್ಯಾಣದಲ್ಲಿ 2, ಔರಾನಲ್ಲಿ 1, ಭಾಲ್ಕಿಯಲ್ಲಿ 2 ಪರೀಕ್ಷಾ ಕೇಂದ್ರಗಳು ಇರಲಿವೆ ಎಂದರು.
ಪರೀಕ್ಷೆಗಳು ಮಧ್ಯಾಹ್ನ 2:15 ರಿಂದ 5:30 ವರೆಗೆ ನಡೆಯಲಿದ್ದು ಪ್ರಶ್ನೆ ಪತ್ರಿಕೆಗಳು ಮುಂಚಿತವಾಗಿ 1:15 ಕ್ಕೆ ಪರೀಕ್ಷಾ ಕೇಂದ್ರಗಳ ಒಳಗಡೆ ಇರಬೇಕು ಮತ್ತು ಪ್ರಶ್ನೆ ಪತ್ರಿಕೆಗಳನ್ನು ತರಲು ಯಾರಿಗೆ ಜವಾಬ್ದಾರಿ ನೀಡಲಾಗಿದೆ ಅವರೇ ಬಂದು ತೆಗೆದುಕೊಂಡು ಹೋಗಬೇಕು ಅವರ ಪರವಾಗಿ ಯಾರು ಬರವಂತಿಲ್ಲ ಪ್ರತಿ ಪರೀಕ್ಷಾ ಕೇಂದ್ರಗಳಲ್ಲಿ ಪೆÇಲೀಸ್ ಕಾನಸ್ಟೆಬಲಗಳನ್ನು ನಿಯೋಜನೆ ಮಾಡಲಾಗುತ್ತಿದೆ ಎಂದರು.
ಯಾವುದೇ ಕಾಲೇಜಿನಲ್ಲಿ ನಕಲು ಹಾಗೂ ಇತರೆ ಯಾವುದೇ ಅಹಿತಕರ ಘಟನೆ ನಡೆದಿರುವ ಕುರಿತು ದೂರುಗಳು ಬಂದರೆ ಸಂಬಂಧಿಸಿದವರ ವಿರುದ್ದ ಕಠಿಣ ಕ್ರಮ ಜರುಗಿಸಲಾಗುವುದು ಹಿಂದೆ ಭಾಲ್ಕಿಯಲ್ಲಿ ನಡೆದ ಘಟನೆ ತಮಗೆ ನೆನಪಿರಬಹುದು ಅಂತವುಗಳು ಮರುಕಳಿಸಬಾರದು ಎಂದರು.
ಈ ಸಭೆಯಲ್ಲಿ ಹೆಚ್ಚುವರಿ ಪೆÇಲೀಸ್ ಅಧೀಕ್ಷಕರಾದ ಮಹೇಶ ಮೆಘಣ್ಣವರ, ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕರಾದ ಚಂದ್ರಕಾಂತ ಶಾಬಾದಕರ್, ಜಿಲ್ಲಾ ಪಂಚಾಯತ ಉಪ ಕಾರ್ಯದರ್ಶಿ ಸೂರ್ಯಕಾಂತ ಬಿರಾದಾರ, ತಾಲ್ಲೂಕು ಮಟ್ಟದ ಅಧಿಕಾರಿಗಳು, ಪ್ರಾಂಶುಪಾಲರು, ಕಸ್ಟೋಡಿಯನ್, ಪರೀಕ್ಷಾ ವೀಕ್ಷಕರು ಸೇರಿದಂತೆ ಇತರರು ಉಪಸ್ಥಿತರಿದ್ದರು.