ತಾಲೂಕಾ ಎಸ್.ಸಿ./ಎಸ್.ಟಿ. ಗುತ್ತಿಗೆದಾರರ ಸಂಘ ನೂತನ ರಚನೆ ಹಾಗೂ ಪದಾಧಿಕಾರಿಗಳ ನೇಮಕ.
ಬೀದರ ಜಿಲ್ಲ ಎಸ್.ಸಿ./ಎಸ್.ಟಿ. ಗುತ್ತಿಗೆದಾರರ ಸಂಘದ ಜಿಲ್ಲಾಧ್ಯಕ್ಷರಾದ ರವಿಂದ್ರಕುಮಾರ ಹಾಸನಕರ್ ಹಾಗೂ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಬುದ್ಧಪ್ರಕಾಶ ಭಾವಿಕಟ್ಟಿ ಆಗಸ್ಟ್ 13 ರಂದು ನಗರದ ಐ.ಬಿ. ಹಾಲ್‌ನಲ್ಲಿ ಸಭೆಯನ್ನು ಕರೆದು, ಬೀದರ ತಾಲೂಕಾ ಎಸ್.ಸಿ./ಎಸ್.ಟಿ. ಗುತ್ತಿಗೆದಾರರ ಸಂಘ ನೂತನ ರಚನೆ ಮಾಡಿ, ಬೀದರ ತಾಲೂಕಾ ಅಧ್ಯಕ್ಷರಾಗಿ ರಾಜಕುಮಾರ ವಾಘಮಾರೆ, ಉಪಾಧ್ಯಕ್ಷರಾಗಿ ಜೈಶೀಲ ಮೇತ್ರೆ ಮತ್ತು ಪಾಂಡುರAಗ ಮಂದಕನಳ್ಳಿ, ಪ್ರಧಾನ ಕಾರ್ಯದರ್ಶಿಯಾಗಿ ಕೀರ್ತಿಕುಮಾರ ಹೊಸಮನಿ ಕಾರ್ಯದರ್ಶಿಗಳಾಗಿ ಕಿರಣಕುಮಾರ ಕನೇರಿ ಹಾಗೂ ಸೂರ್ಯಕಾಂತ ಸಾದುರೆ ಖಜಾಂಚಿಯಾಗಿ ಜೈಶೀಲ ಹಾಸನಕರ್ ಇವರನ್ನು ಸರ್ವಾನುಮತದಿಂದ ನೇಮಕ ಮಾಡಲಾಯಿತು.
ಈ ಸಭೆಯಲ್ಲಿ ಜಿಲ್ಲಾ ಗೌರವಾಧ್ಯಕ್ಷರಾದ ಪಂಡರಿನಾಥ ಮಲ್ಕಾಪೂರ, ಜಿಲ್ಲಾ ಉಪಾಧ್ಯಕ್ಷರುಗಳಾದ ರವಿ ಪಿ. ಚಿಟ್ಟಾ, ವಿನೋದ ಅಪ್ಪೆ, ಸಂಜುಕುಮಾರ ದೊಡಮನಿ, ಜಿಲ್ಲಾ ಖಜಾಂಚಿ ಪೃಥ್ವಿರಾಜ ನಿಟ್ಟೂರೆ, ಸದಸ್ಯರುಗಳಾದ ಅನೀಲಕುಮಾರ ಹಮೀಲಪೂರಕರ್, ಪ್ರಹ್ಲಾದ, ಸತೀಶ ಭೀಮನಗರ, ಅಂಬಾದಾಸ ಟಿಳೇಕರ್, ಪಂಕಜ ಕಟ್ಟಿಮನಿ, ವಿಶಾಲ, ಕಾರ್ತಿಕ ಕನೇರಿ, ರಾಕೇಶ ಚಿದ್ರೆ ಇನ್ನೀತರರು ಉಪಸ್ಥಿತರಿದ್ದರು.