ಬೀದರ್

ಜು.13: ಬೀದರದಲ್ಲಿ ರಾಜ್ಯ ಮಟ್ಟದ : ಕಾಯಕರತ್ನ ಪ್ರಶಸ್ತಿ ಪ್ರದಾನ

ನನ್ನಶಿಕ್ಷಣ-ನನ್ನಹಕ್ಕು ಶೈಕ್ಷಣಿಕ ವಿಚಾರ ಸಂಕಿರಣ ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ತು ದೊಡ್ಡಬಳ್ಳಾಪುರ-ಬೆಂಗಳೂರು ಇವರಿಂದ ಆಯೋಜನೆ ಬೀದರ್-ಜು:10/ ಐತಿಹಾಸಿಕ ಹಾಗೂ ಕಾಯಕನಾಡು ಬೀದರ್‍ನಲ್ಲಿ ಜುಲೈ 13 ರಂದು ಶನಿವಾರ ಬೆಳಗ್ಗೆ 9.30ಕ್ಕೆ ಡಾ.ಚನ್ನಬಸವ ಪಟ್ಟದೇವರ ರಂಗಮಂದಿರಲ್ಲಿ ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ತು ದೊಡ್ಡಬಳ್ಳಾಪುರ-ಬೆಂಗಳೂರು,ಬೀದರ್ ಜಿಲ್ಲಾ ಶಾಖೆ ಹಾಗೂ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಬೀದರ್ ಇವರ ಸಹಯೋಗದಲ್ಲಿ ಪ್ರಥಮ ಬಾರಿಗೆ ರಾಜ್ಯ ಮಟ್ಟದ ಕಾಯಕ ರತ್ನ ಪ್ರಶಸ್ತಿ ಪ್ರಧಾನ ಹಾಗೂ ನನ್ನ ಶಿಕ್ಷಣ ನನ್ನಹಕ್ಕು ಶೈಕ್ಷಣಿಕ ವಿಚಾರ ಸಂಕಿರಣ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದು ಸಂಸ್ಥೆಯ ರಾಜ್ಯ ಸಂಚಾಲಕರಾದ ದಾನಿ ಬಾಬುರಾವ್ ಹೇಳಿದರು. ಇಂದು ಪತ್ರಿಕಾ ಗೋಷ್ಠಿಯಲ್ಲಿ ಕಾರ್ಯಕ್ರಮ ಕುರಿತು ಮಾಹಿತಿಯನ್ನು ನೀಡಿ ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ತು ವೈಜ್ಞಾನಿಕ ಚಿಂತಕ ಡಾ. ಹುಲಿಕಲ್ ನಟರಾಜ್ ಅವರ ನೇತೃತ್ವದಲ್ಲಿ ಆರಂಭಿಸಿ ಯಶಸ್ವಿ 4 ವರ್ಷಗಳಾಗಿದ್ದು, ಸಂಸ್ಥೆಯು ರಾಜ್ಯಾಧ್ಯಾಂತ ಸಂಘಟಿಸಲಾಗಿದೆ. ಎಲ್ಲಾ ಜಿಲ್ಲೆ ಹಾಗೂ ತಾಲ್ಲೂಕು ಕೇಂದ್ರಗಳಲ್ಲಿ ತನ್ನ ಶಾಖೆಗಳನ್ನು ಆರಂಭಿಸಿದ್ದು ಅತಿ ಕಡಿಮೆ ಸಮಯದಲ್ಲಿ ಐವತ್ತು ಸಾವಿರಕ್ಕೂ ಹೆಚ್ಚಿನ ಸದಸ್ಯರನ್ನು ಹೊಂದಿದ ಹೆಗ್ಗಳಿಕೆ ಸಂಸ್ಥೆಗಿದೆ. ಸಂಸ್ಥೆಯಲ್ಲಿ ಅನೇಕ ಗಣ್ಯ ಚಿಂತಕರು, ವಿಜ್ಞಾನಿಗಳು ಹಾಗೂ ವೈಜ್ಞಾನಿಕ ಅರಿವುಳ್ಳ ಬರಹಗಾರರ ಮಾರ್ಗದರ್ಶನದಲ್ಲಿ ನಡೆಯುತ್ತ ಬಂದಿದೆ. ಪ್ರತಿ ವರ್ಷ ರಾಜ್ಯ ಮಟ್ಟದ ವೈಜ್ಞಾನಿಕ ಸಮ್ಮೇಳನಗಳನ್ನು, ನಾಯಕತ್ವ ಶಿಬಿರಗಳನ್ನು, ವಿಚಾರ ಸಂಕಿರಣ, ಸಾಧಕರಿಗೆ ಹೆಚ್.ಎನ್.ಪ್ರಶಸ್ತಿ ಹಾಗೂ ಶ್ರಮಿಕರಿಗೆ ಕಾಯಕ ರತ್ನ ಪ್ರಶಸ್ತಿ ಪ್ರಧಾನ, ಸಾಹಿತಿ, ಚಿಂತಕರೊಂದಿಗೆ ಸಂವಾದ, ವಿದ್ಯಾರ್ಥಿಗಳಿಗೆ ಅರಿವಿನ ಕಾರ್ಯಕ್ರಮಗಳನ್ನು ಆಯೋಜಿಸುತ್ತ ಬಂದಿದ್ದು ಮೌಢ್ಯಮುಕ್ತ ಸಮಾಜ ನಿರ್ಮಾಣ ಮಾಡುವ ಉದ್ದೇಶ ನಮ್ಮ ಸಂಸ್ಥೆಗಿದ್ದು, ಆನ್‍ಲೈನ್ ಮೂಲಕ ಅನೇಕ ಕಾರ್ಯಕ್ರಮಗಳನ್ನು ಆಯೋಜಿಸುತ್ತ ಬರುತ್ತಿದೆ, ಪ್ರತಿ ತಿಂಗಳು ಅಮವಾಸೆಯಂದು ಅಮೃತಾ ಅಮವಾಸೆ ಕಾರ್ಯಕ್ರಮವನ್ನು ನಿರಂತರವಾಗಿ ನಡೆಸಲಾಗುತ್ತಿದೆ, ಎಲ್ಲಾ ಜಿಲ್ಲಾ ಹಾಗೂ ತಾಲ್ಲೂಕು ಕೇಂದ್ರಗಳಲ್ಲಿ ಅಲ್ಲದೆ ಗ್ರಾಮೀಣ ಭಾಗಗಳಲ್ಲೂ ಕಾರ್ಯಕ್ರಮಗಳನ್ನು ನಿರಂತರವಾಗಿ ನಡೆಸಲಾಗುತ್ತಿದೆ. ಪ್ರತಿ ವರ್ಷದಂತೆ ಈ ವರ್ಷವು ಸಹ ರಾಜ್ಯ ಮಟ್ಟದ ಕಾರ್ಯಕ್ರಮವನ್ನು ಆಯೋಜಿದ್ದು ಬಸವಕಲ್ಯಾಣ ಅನುಭವ ಮಂಟಪದ ಅಧ್ಯಕ್ಷರಾದ ನಾಡೋಜ ಡಾ.ಬಸವಲಿಂಗ ಪಟ್ಟದೇವರ ದಿವ್ಯ ಸಾನ್ನಿಧ್ಯದಲ್ಲಿ ಹಾಗೂ ಜ್ಞಾನ ಯೋಗಾಶ್ರಮದ ಸಿದ್ರಾಮ ಶರಣರು ಬೆಳ್ದಾಳ ಇವರ ನೇತೃತ್ವದಲ್ಲಿ ನಡೆಯುವ ಕಾರ್ಯಕ್ರಮವನ್ನು ಅರಣ್ಯ,ಜೈವಿಕ ಮತ್ತು ಪರಿಸರ ಇಲಾಖೆ ಹಾಗೂ ಬೀದರ್ ಜಿಲ್ಲಾ ಉಸ್ತುವಾರಿ ಸಚಿವರಾದ ಈಶ್ವರ ಖಂಡ್ರೆ ಉದ್ಘಾಟಿಸುವರು. ಪೌರಾಡಳಿತ ಮತ್ತು ಹಜ್ ಸಚಿವರಾದ ರಹೀಮ್ ಖಾನ್ ಹಾಗೂ ಇಸ್ರೋದ ಮಾಜಿ ಅಧ್ಯಕ್ಷರು ಹಾಗೂ ಹೆಸರಾಂತ ವಿಜ್ಞಾನಿಗಳಾದ ಡಾ.ಎ.ಎಸ್.ಕಿರಣ್ ಕುಮಾರ್ ಕಾಯಕ ರತ್ನ ಪ್ರಶಸ್ತಿ ಪ್ರಧಾನ ಮಾಡಲಿದ್ದಾರೆ. ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷರಾದ ಡಾ.ಹುಲಿಕಲ್ ನಟರಾಜ್ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಲಿದ್ದಾರೆ. ನನ್ನಹಕ್ಕು-ನನ್ನಶಿಕ್ಷಣ ಕುರಿತು ವಿಶೇಷ ಉಪನ್ಯಾಸ: ಅಂತರಾಷ್ಟ್ರೀಯ ಕೌಶಲ್ಯ ತರಬೇತುದಾರರಾದ ಚೇತನರಾಮ್ ಅವರು ವಿಶೇಷವಾದ ಉಪನ್ಯಾಸವನ್ನು ನೀಡಲಿದ್ದಾರೆ. ಇವರು ದೇಶ ಹಾಗೂ ವಿದೇಶಗಳಲ್ಲಿ ಸಾಕಷ್ಟು ಉಪನ್ಯಾಸಗಳನ್ನು ನೀಡಿದ್ದು ಇವರ ಮಾತುಗಳು ಎಲ್ಲಾರ ಮನ ಮುಟ್ಟುತ್ತವೆ. ಕಾರ್ಯಕ್ರಮದಲ್ಲಿ ಬೀದರ್ ಲೋಕಸಭಾ ಸದಸ್ಯರಾದ ಸಾಗರ ಈ ಖಂಡ್ರೆ,ವಿಧಾನ ಪರಿಷತ್ತು ಸದಸ್ಯರಾದ ಮಾರುತಿರಾವ್ ಮೂಳೆ, ಡಾ.ಚಂದ್ರಶೇಖರ್ ಬಿ.ಪಾಟೀಲ್ ಹಾಗೂ ಹೈದರಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆಗಳ ಆಡಳಿತ ಮಂಡಳಿ ಸದಸ್ಯರಾದ ಡಾ.ರಜನೀಶ್ ವಾಲಿ ಇವರನ್ನು ವಿಶೇಷವಾಗಿ ಸನ್ಮಾನಿಸಲಾಗುವುದು. ಔರದ್‍ನ ಶಾಸಕರಾದ ಪ್ರಭು ಬಿ.ಚವ್ವಾಣ್, ಬೀದರ್ ದಕ್ಷಿಣ ಕ್ಷೇತ್ರದ ಶಾಸಕರಾದ ಡಾ.ಶೈಲೇಂದ್ರ ಕೆ. ಬೆಲ್ದಾಳೆ, ಹುಮನಾಬಾದ್‍ನ ಡಾ.ಸಿದ್ದಲಿಂಗಪ್ಪ ಎನ್.ಪಾಟೀಲ್, ಬೀದರ್ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಬಸವರಾಜ ಜಾಬಶೆಟ್ಟಿ, ನಗರಸಭೆ ಅಧ್ಯಕ್ಷ ಮಹ್ಮದ್ ಗೌಸ್, ನಗರಾಭಿವೃದ್ದಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಬಾಬುವಾಲಿ, ಬೀದರ್ ಕಸಾಪ ಜಿಲ್ಲಾಧ್ಯಕ್ಷ ಸುರೇಶ್ ಚನ್ನಶೆಟ್ಟಿ,ಖ್ಯಾತ ವೈದ್ಯರಾದ ಡಾ.ಆಂಜನಪ್ಪ, ಡಿಡಿಪಿಐ ಸಲೀಂ ಪಾಶಾ, ವೈಜ್ಞಾನಿಕ ಪರಿಷತ್ತಿನ ರಾಜ್ಯ ಕಾರ್ಯದರ್ಶಿ ಆರ್. ರವಿ ಬಿಳಿಶಿವಾಲೆ, ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ರಾಜೇಂದ್ರಕುಮಾರ್ ಗಂದಗೆ, ಜಾಗತಿಕ ಲಿಂಗಾಯಿತ ಸಮಾಜದ ಜಿಲ್ಲಾಧ್ಯಕ್ಷ ಬಸವರಾಜ್ ಧನ್ನೂರು, ಶಾಹೀನ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಾ.ಅಬ್ದುಲ್ ಖದಿರ್, ವಿಕಾಸ ಅಕಾಡೆಮಿಯ ಜಿಲ್ಲಾ ಸಂಚಾಲಕ ರೇವಣಸಿದ್ಧಪ್ಪಾ ಬಿಲಾದೆ. ಪ್ರಮುಖರಾದ ಡಾ.ಶಿವಕುಮಾರ್ ಶೆಟಗಾರ, ಎನ್.ಸಿ.ಪಾಟೀಲ್,ಅಖಿಲಾಂಡೇಶ್ವರಿ, ಡಾ.ಖಾಜಾ ಮೈನೋದ್ದೀನ್, ಶರಣಪ್ಪ ಮಿಠಾರೆ, ಸುರೇಂದ್ರ ಹುಡಗಿಕರ್,ಪಾಂಡುರಂಗ ಬೆಲ್ದಾರ, ಬೈರಾಜ ಖಂಡ್ರೆ, ಅಲ್ಲಮಪ ್ರಭು ನಾವದಗೆರೆ, ವಿಜಯಕುಮಾರ ಪಾಟೀಲ್ ರಾಜೇಂದ್ರಕುಮಾರ್ ಮಣಿಗೆರೆ ಇನ್ನೂ ಮೊದಲಾದವರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.

ರಾಜ್ಯ ಮಟ್ಟದ ಕಾಯಕರತ್ನ ಪ್ರಶಸ್ತಿ ಪುರಸ್ಕøತರು: ರಾಜ್ಯದ 37 ಶೈಕ್ಷಣಿಕ ಜಿಲ್ಲೆಗಳಲ್ಲಿ ತಮ್ಮದೆಯಾದ ಕ್ಷೇತ್ರಗಳಲ್ಲಿ ವಿಶೇಷವಾಗಿ ಗುರುತಿಸಿಕೊಂಡಿರುವ ಸಾಧಕರನ್ನು ಗುರುತಿಸಿ ರಾಜ್ಯ ಮಟ್ಟದ ಕಾಯಕ ರತ್ನ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗುತ್ತಿದೆ. ಬೀದರ್ ಡಾ. ಗಂಗಾಂಬಿಕಾ ಅಕ್ಕ, ಡಾ. ಬಿ. ವಿ. ಶಿವಪ್ರಕಾಶ್, ಕಲಬುರ್ಗಿ-ಶಿವಣ್ಣಗೌಡ ಪಾಟೀಲ್, ಯಾದಗಿರಿ-ಚೆನ್ನಪ್ಪ ಆನೆಗುಂದಿ, ರಾಯಚೂರುಡಾ.ಮಲ್ಲೇಶ್ ಗೌಡ ಪಾಟೀಲ್, ಬಳ್ಳಾರಿ-ಕೆ.ದೇವರಾಜ್, ಕೊಪ್ಪಳ-ಡಾ.ಈಶ್ವರ ಶಿ.ಸವದಿ, ವಿಜಯನಗರ-ಗೋಪಾಲ್,ಸಿರಸಿಮಹದೇಶ್ವರ ಲಿಂಗದಾಳ, ಉತ್ತರ ಕನ್ನಡ-ವಿಜಯಕುಮಾರ್ ಯಶವಂತ ನಾಯ್ಕ, ಬೆಳಗಾವಿ-ಡಾ.ನಾಗರಾಜ್ ಬ.ಮರೆಣ್ಣವರ, ಚಿಕ್ಕೋಡಿ-ಸಂಗಪ್ಪ ಲಕ್ಷ್ಮಣ್ ಬಾಡಗಿ, ವಿಜಯಪುರ-ಸರೋಜ ಕೌಲಾಪುರ, ಬಾಗಲಕೋಟೆ-ಡಾ.ಸಂಜಯ ಮ.ಚೀನಿವಾಲ, ಗದಗಪೂರ್ಣಾಜಪ್ಪ ಭರಮಾಜಪ್ಪ ಖರಾಟೆ, ಧಾರವಾಡ-ಜಯಶ್ರೀ ಗೌಳಿಯವರ, ಹುಬ್ಬಳ್ಳಿ-ಶಿವಯೋಗಿ ವಿರಕ್ತ ಮಠ, ಹಾವೇರಿ-ನೀಲಮ್ಮ ಕೆ.ತಳ್ಳಳ್ಳಿ, ಬೆಂಗಳೂರು ನಗ-ಮನು, ಬೆಂ ಉತ್ತರ-ಜಿ.ಶಿವಲಿಂಗೇಗೌಡ, ಬೆಂ. ದಕ್ಷಿಣ-ಸಿ.ರಾಜಣ್ಣ, ಬೆಂ ಗ್ರಾಮಾಂತರ.ಎಂ.ಆರ್.ಉಮೇಶ್, ರಾಮನಗರ-ಪುಟ್ಟರಾಜು, ಶಿವಮೊಗ್ಗ-ಕಾಗೋಡು ತಿಮ್ಮಪ್ಪ, ದಾವಣಗೆರೆ-ದ್ಯಾಮಪ್ಪ ಹೆಚ್.ಎಂ, ಚಿತ್ರದುರ್ಗಸತ್ಯಣ್ಣ, ತುಮಕೂರು-ತಿಪಟೂರು ಕೃಷ್ಣ, ಮಧುಗಿರಿ- ಎಂ. ಶಿವಲಿಂಗಪ್ಪ, ಎಸ್.ರೇಣುಕಾ ಪ್ರಸಾದ್, ಚಿಕ್ಕಬಳ್ಳಾಪುರ-ಜಿ.ಮುನಿರೆಡ್ಡಿ, ಕೋಲಾರ-ಪಿಚ್ಚಳ್ಳಿ ಶ್ರೀನಿವಾಸ್, ಮೈಸೂರು-ಲಕ್ಷೀರಾಮ್, ಹಾಸನ-ಜೆ.ಜೆ.ರಮೇಶ್, ದಕ್ಷಿಣ ಕನ್ನಡ-ಸುಂದರ ಕೆ, ಚಾಮರಾಜ ನಗರಆರ್.ಮಹೇಂದ್ರ, ಮಂಡ್ಯ-ಡಾ.ದೇವರಾಜು ಮೂರ್ಕಾಲು, ಚಿಕ್ಕಮಗಳೂರು-ಸಿ.ವಿ.¨s Àರತ್, ಕೊಡಗು-ಐನಮಂಡ ಲೀಲಾವತಿ, ಉಡುಪಿ-ಮನು ಹಂದಾಡಿ. ಇದೆ ಸಂದರ್ಭದಲ್ಲಿ ರಾಜಣ್ಣಾ ಹುಡಗಿಕರ್, ಡಾ.ಸಿ.ಆನಂದರಾವ್, ಡಾ.ಪಿ.ವಿಠ್ಠಲರೆಡ್ಡಿ,ಡಾ.ಬಸವರಾಜ್ ಬಲ್ಲೂರ, ಡಾ.ಹಾವಗಿರಾವ ಮೈಲಾರೆ, ಚಂದ್ರಶೇಖರ್ ಹೆಬ್ಬಾಳೆ, ಸಹಜಾನಂದ ಕಂದಗೂಳ, ಎಂ.ಎಸ್.ಮನೋಹರ್, ಗುರುನಾಥ ಮೂಲಗೆ, ಸಂತೋಷ ಪಾಟೀಲ್ ಝಿರಾ, ವೆಂಕಟರೆಡ್ಡಿ ಕೋಪಗೀರ, ಸಿದ್ದಾರೆಡ್ಡಿ ಮಾಗೂರಾ, ಮಲ್ಲಿಕಾರ್ಜುನ ಟಂಕಸಾಲೆ, ಪ್ರಭು ಗಂಗು, ಪಾರ್ವತಿ ಸೋನಾರೆ, ಪ್ರಕಾಶ್ ತಾಂದಳೆ, ರೂಪಾ ಪಾಟೀಲ್, ಸುವರ್ಣಾ ವಾಗಮೋರೆ, ತಾನಾಜಿ ಬಿರಾದಾರ, ಅನೀಲಕಮಾರ್ ಶಿಂದೆ, ಮಹಾರುದ್ರಪ್ಪ ಅಣದೂರೆ, ದೀಲಿÀಕುಮಾರ ಡೋಂಗರಗೆ, ಶಿವಪುತ್ರ ಪಾಟೀಲ್ ಮೊದಲಾದವರಿಗೆ ವಿಶೇಷ ಗೌರವ ಸನ್ಮಾನವನ್ನು ನೀಡಲಾಗುತ್ತಿದ್ದು ಕು.ಶಿವಾನಿ ಶಿವದಾಸ ಸ್ವಾಮಿ ಮತ್ತು ತಂಡದವರಿಂದ ಸಂಗೀತ ಕಾರ್ಯಕ್ರಮವನ್ನು ಆಯೋಜಿಸಿದೆ. ಈ ಕಾರ್ಯಕ್ರಮಕ್ಕೆ ರಾಜ್ಯದ ಎಲ್ಲಾ ಜಿಲ್ಲೆ ಹಾಗೂ ತಾಲ್ಲೂಕುಗಳಿಂದ ಭಾಗವಹಿಸಲಿದ್ದು ಹೊರ ಭಾಗದಿಂದ ಬರುವವರಿಗೆ ವಸತಿ ಹಾಗೂ ಭಾಗವಹಿಸಿದ ಎಲ್ಲಾರಿಗೂ ಊಟದ ವ್ಯವಸ್ಥೆಯನ್ನು ಮಾಡಲಾಗಿದೆ ಹಾಗೂ ಬೀದರ್ ಜಿಲ್ಲೆಯಿಂದ ಭಾಗವಹಿಸುವ ಪ್ರಾಥಮಿಕ ಮತ್ತು ಪ್ರೌಢಶಾಲಾ ವಿಜ್ಞಾನ ಶಿಕ್ಷಕರಿಗೆ ಓ.ಓ.ಡಿ ಸೌಲಭ್ಯವನ್ನು ಇಲಾಖೆ ನೀಡಿದೆ. ರಾಜ್ಯ ಮಟ್ಟದ ಕಾಯಕ ರತ್ನ ಪ್ರಶಸ್ತಿ ಪ್ರಧಾನ ಹಾಗೂ ಶೈಕ್ಷಣಿಕ ವಿಚಾರ ಸಂಕಿರಣ ಕಾರ್ಯಕ್ರಮನ್ನು ಜನಪ್ರತಿನಿಧಿಗಳ, ಜಿಲ್ಲಾಡಳಿತ ಹಾಗೂ ಅನೇಕ ಸಂಘ ಸಂಸ್ಥೆಗಳ ಸಹಕಾರದೊಂದಿಗೆ ವ್ಯವಸ್ಥಿತವಾಗಿ ಆಯೋಜಿಸಲಾಗಿದ್ದು ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬಹುದಾಗಿದೆ ಎಂದು ಸುದ್ದಿ ಗೋಷ್ಠಿಯಲ್ಲಿ ತಿಳಿಸಿದ್ದಾರೆ. ಈ ಸಂದರ್ಭದಲ್ಲಿ ಸುರೇಶ್ ಚನ್ನಶೆಟ್ಟಿ ಅಧ್ಯಕ್ಷರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಬೀದರ, ಜಿಲ್ಲಾಧ್ಯಕ್ಷರಾದ ಕಲಾಲ್ ದೇವಿಪ್ರಸಾದ, ಮಮ್ಮದ್ ರಫಿ ತಾಳಿಕೋಟಿ ಶಿವಶಂಕರ್ ಟೋಕ್ರೆ ಶಿವಕುಮಾರ್ ಕಟ್ಟೆ ಸಂತೋμï ಮಂಗಳೂರೆರಾಜೇಂದ್ರ ಮನಗಿರಿ ಹಾಗೂ ಪ್ರಮುಖರು ಹಾಜರಿದ್ದರು.

Ghantepatrike kannada daily news Paper

Leave a Reply

error: Content is protected !!