ಜುಲೈ 20ರಂದು ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿರವರ ದೀಕ್ಷಾ ರಜತ ಮಹೋತ್ಸವ: ರವಿಕುಮಾರ
ಬೀದರ್: ಈ ತಿಂಗಳ 20ರಂದು ರಾಜ್ಯದ ಚಿತ್ರದುರ್ಗ ಜಿಲ್ಲೆಯಲ್ಲಿರುವ ಭೂವಿ ಗುರುಪೀಠದ ಶ್ರೀ ಸಿದ್ಧರಾಮೇಶ್ವರ ಮಹಾಸಂಸ್ಥಾನದ ಪೀಠಾಧಿಪತಿ ಪೂಜ್ಯ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮಿಜಿಗಳ 25ನೇ ಪಟ್ಟಾಧಿಕಾರ ಮಹೋತ್ಸವ ನಿಮಿತ್ಯ ಸಿದ್ಧರಾಮೇಶ್ವರ ಸ್ವಾಮಿಜಿಗಳ ದೀಕ್ಷಾ ರಜತ ಮಹೋತ್ಸವ ಹಾಗೂ ರಾಷ್ಟ್ರೀಯ ಭೂವಿ ಜನೋತ್ಸವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಕರ್ನಾಟಕ ಭೂವಿ ನಿಗಮದ ಅಧ್ಯಕ್ಷ ರವಿಕುಮಾರ.ಎಸ್ ತಿಳಿಸಿದರು.
ಶುಕ್ರವಾರ ನಗರದ ಜಿಲ್ಲಾ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಟಿ ಉದ್ದೇಸಿಸಿ ಮಾತನಾಡಿರುವ ಅವರು, ಇದು ಮೂರು ದಿವಸಗಳ ವರೆಗೆ ನಡೆಯುವ ಕಾರ್ಯಕ್ರಮದಲ್ಲಿ ಸಮಾಜದಿಂದ ನೂತನ ಸಂಸದರಾಗಿ ನೇಮಕಗೊಂಡಿರುವ ಕೋಲಾರ ಸಂಸದ ಮಲ್ಲೇಶ ಬಾಬು, ಕೇಂದ್ರ ಮಂತ್ರಿಗಳಾದ ಪ್ರಲ್ದಾದ್ ಜೋಷಿ, ಹೆಚ್.ಡಿ ಕುಮಾರಸ್ವಾಮಿ, ಶೋಭಾ ಕರನ್ಲಾಜೆ ಹಾಗೂ ವಿ.ಸೋಮನ್ಣ, ರಾಜ್ಯ ಸರ್ಕಾರದಲ್ಲಿ ಸಮಾಜದ ಮಂತ್ರಿಯಾಗಿರುವ ಶಿವರಾಜ ತಂಗಡಗಿ ಸೇರಿದಂತೆ ಸಮಾಜದ ನಾಲ್ಕು ಜನ ಬಿಜೆಪಿ ಹಾಗೂ ಮೂರು ಜನ ಕಾಂಗ್ರೆಸ್ ಶಾಸಕರನ್ನು ಇದೇ ವೇಳೆ ಸನ್ಮಾನಿಸಲಾಗುವುದು. ಮೂರು ಜನ ಯು.ಪಿ.ಎಸ್.ಸಿಯಲ್ಲಿ ಪಾಸಾದ ಸಮಾಜದ ಪ್ರತಿಭೆಗಳಿಗೆ ಪ್ರೋತ್ಸಾಹಿಸುವ ಕಾರ್ಯಕ್ರಮ ಜರುಗಲಿದೆ. ಶೇಕಡಾ 85 ಪ್ರತಿಶತಕ್ಕಿಂತ ಹೆಚ್ಚು ಅಂಕ ಪಡೆದ ಎಸ್.ಎಸ್.ಎಲ್.ಸಿ ಹಾಗೂ ಪಿ.ಯು.ಸಿ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಜರುಗಲಿದೆ. ಹಾಗೇ ವಧು-ವರರ ಸಮಾವೇಶ, ಸಮಾಜದ ಬೆಳವಣಿಗೆ ಕುರಿತು ಸಂವಾದ, ರಕ್ತದಾನ ಶಿಬಿರ. ಆರೋಗ್ಯ ಶಿಬಿರ, ಪಿ.ಹೆಚ್.ಡಿ ಪದವೀಧರರು ಮತ್ತು ಐ.ಎ.ಎಸ್. ಕೆ.ಎ.ಎಸ್ ಸಾಧಕರಿಗೆ ಸನ್ಮಾನ, ವೈದ್ಯಕೀಯ ಪದವಿ ಪಡೆದವರಿಗೆ ಅಭಿನಂದನಾ ಸಮಾರಂಭ ಜರುಗಲಿದೆ. ಈ ಕಾರ್ಯಕ್ರಮದಲ್ಲಿ ಸುಮಾರು ನಾಲ್ಕು ಲಕ್ಷ ಜನ ಸೇರುವ ನಿರಿಕ್ಷೆ ಇದೆ ಎಂದವರು ವಿವರಿಸಿದರು.
ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಕಾರ್ಯಕ್ರಮ ಉದ್ಘಾಟಿಸುವರು. ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಕೃತಿ ಬಿಡುಗಡೆ ಮಾಡಲಿದ್ದಾರೆ. ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಚಿವ ಶಿವರಾಜ ತಂಗಡಗಿ ಅಧ್ಯಕ್ಷತೆ ವಹಿಸುವರು. ಮಾಜಿ ಸಚಿವ ಅರವಿಂದ ಲಿಂಬಾವಳಿ ನೇತೃತ್ವ, ಸಮುದಾಯದ ಹಾಲಿ ಮಾಜಿ ಶಾಸಕರು, ಸಂಸದರು ಸಾರಥ್ಯದಲ್ಲಿ, ಮಂತ್ರಾಲಯದ ಸುಭುದೇಂದ್ರ ತೀರ್ಥರು ಕನಕ ಗುರುಪೀಠದ ಜಗದ್ಗುರಗಳು ಹಿಂದುಳಿದ ದಲಿತ ಮಠಾದೀಶರು ಸೇರಿದಂತೆ ರಾಜ್ಯದ ವಿವಿಧ ಮಠಾಧೀಶರ ಸಾನಿಧ್ಯದಲ್ಲಿ ಅದೇ ದಿನದಂದು ಬೆಳಿಗ್ಗೆ ಧರ್ಮ ಸಂಸತ್ ಕಾರ್ಯಕ್ರಮ ಜರುಗುವುದು. ಹಾಗಾಗಿ ಸಮುದಾಯದ ಜನರು ಹೆಚ್ಚಿನ ಸಂಖ್ಯೆಯಲ್ಲಿ ಈ ಕಾರ್ಯಕ್ರಮಕ್ಕೆ ಭಾಗವಹಿಸಬೇಕೆಂದು ರವಿಕುಮಾರ.ಎಸ್ ಕೋರಿದರು.
ಭೂಮಿ ಗುರುಪೀಠದ ಶ್ರೀ ಸಿದ್ಧತರಾಮೇಶ್ವರ ಮಹಾಸಂಸ್ಥಾನದ ಪೂಜ್ಯ ಇಮ್ಮಡಿ ಸಿದ್ಧರಾಮೇಶ್ವರ ಮಹಾಸ್ವಾಮಿಜಿ ಮಾತನಾಡಿ, ಶೋಷಿತ ಸಮಾಜಕ್ಕೆ ರಾಜಕೀಯ ಅಧಿಕಾರ ಅಗತ್ಯ ಎನ್ನುವ ಜಾಗೃತಿಯನ್ನು ಮೂಡಿಸಿದೆ. ರಾಜಕೀಯ, ಸಾಮಜಿಕ ಪ್ರಜ್ಞೆ ಮೂಡಿಸುವಲ್ಲಿ ಮಠ ಯಶಸ್ವಿಯಾಗಿದೆ. ಸಮುದಾಯವನ್ನು ಕಒಗ್ಗೂಡಿಸುವ ನಿಟ್ಟಿನಲ್ಲಿ ಅಲೆಮಾರಿ ಹಾಗೂ ಅರೆ ಅಲೆಮಾರಿ ಲಕ್ಷಣಗಳನ್ನು ಹೊಂದಿರುವ ಭೋವಿ ಸಮುದಾಯವನ್ನು ಜಾಗೃತಗೊಳಿಸುವ ಕಾರ್ಯ ಕಳೆದ ಎರಡು ವರೆ ದಶಕದಿಂದ ನಡೆಯುತ್ತಿದೆ. ಕರ್ನಾಟಕದ ಮೂಲೆ ಮೂಲೆಯ ಭೋವಿ ಕಾಲೋನಿ, ಹಟ್ಟಿಗಳನ್ನು ಸುತ್ತಿ ಜಾಗೃತಗೊಳಿಸಲಾಗುತ್ತಿದೆ. ಇದರ ಪರಿಶ್ರಮ ಫಲವಾಗಿ ಹಲವು ಗ್ರಾಮಗಳು ವ್ಯಸನಮುಕ್ತವಾಗಿವೆ. ಪ್ರಾಣಿಬಲಿ ನಿμÉೀದಕ್ಕೆ ಮನ್ನಣೆ ನೀಡಲಾಗಿದೆ. ವರ್ಷಕ್ಕೊಮ್ಮೆ ನಡೆಯುವ ಮಾರಮ್ಮ, ಹುಲಿಗೆಮ್ಮ ಜಾತ್ರೆಗಳು ಸಮುದಾಯದ ಆರ್ಥಿಕತೆ ಮೇಲೆ ಉಂಟಾಗುವ ವ್ಯತಿರಿಕ್ತ ಪರಿಣಾಮ ಬೀರುತ್ತಿರುವ ಹಿನ್ನಲೆಯಲ್ಲಿ ಗಳಿಕೆ, ಬಳಕೆ, ಉಳಿಕೆ ಸೂತ್ರವನ್ನು ಭಕ್ತರ ಮುಂದಿಟ್ಟದ್ದೇವೆ. ಇದನ್ನು ಅರಿತವರು ಜಾತ್ರೆಗಳ ನೆಪದಲ್ಲಿ ದುಂದುವೆಚ್ಚ ಮಾಡುವುದು ನಿಲ್ಲಿಸಲಾಗಿದೆ. ಭಕ್ತರು ಧರ್ಮದ ಹೆಸರಿನಲ್ಲಿ ಅಧರ್ಮ ನಡೆಸಬಾರದು. ಮಾಂಸ, ಹೆಂಡ, ಜೂಜು ಸಮುದಾಯವನ್ನು ಹಾಳು ಮಾಡುತ್ತಿದೆ. ಹಾಗಾಗಿ ಬದಲಾವಣೆ ಹೊಂದಬೇಕು ಎನ್ನುವ ಮನವರಿಕೆ ಮಾಡಿಕೊಡುವಲ್ಲಿ ಶ್ರೀಮಠ ಕಟಿಬದ್ದವಾಗಿದೆ ಎಂದರು.
ಉಚಿತ ಶಿಕ್ಷಣ ಮತ್ತು ವಸತಿ:-ಉದ್ಯೋಗ ಅರಸಿ ಗುಳೆಹೋಗುವ ಭೋವಿ, ವಡ್ಡರ ಜನಾಂಗದ ಬಡ ಮಕ್ಕಳು ಶಿಕ್ಷಣದತ್ತ ಗಮನಹರಿಸಿದ್ದು ಕಡಿಮೆ. ಕೆಲಸದ ಸ್ಥಳಕ್ಕೆ ಮಕ್ಕಳನ್ನು ಕರೆದೊಯ್ದು ದುಡಿಮೆಗೆ ಬಳಸಿಕೊಳ್ಳುವ ಪ್ರವೃತ್ತಿ ಬೆಳೆದು ಬಂದಿತ್ತು. ಇದನ್ನು ಅರಿತ ಸಮುದಾಯದ ಮಕ್ಕಳನ್ನು ಅಕ್ಷರಸ್ಮರನ್ನಾಗಿ ಮಾಡಲು ಪಣ ತೊಟ್ಟು ಚಿತ್ರದುರ್ಗ ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಶಿಕ್ಷಣ ಸಂಸ್ಥೆಗಳನ್ನು ಆರಂಭಿಸಿ ಉಚಿತ ಶಿಕ್ಷಣ ಮತ್ತು ವಸತಿ ವ್ಯವರ್ಸತೆ ಒದಗಿಸಲಾಗುತ್ತಿದೆ. ಅನಾಥ ಮಕ್ಕಳಿಗೆ ಆಶ್ರಮ ಭೋವಿ, ವಡ್ಡರ ಸಮುದಾಯದಲ್ಲಿ ಪೆÇೀಷಕರನ್ನು ಕಳೆದುಕೊಂಡ ಮಕ್ಕಳಿಗೆ ಅನಾಥಪುಜ್ಞೆ ಮೂಡದಂತೆ ಬೆಳೆಯಬೇಕು ಎಂಬ ಉದ್ದೇಶದಿಂದ ಅಂತಹ ಮಕ್ಕಳನ್ನು ಗುರುತಿಸಿ ಶ್ರೀಮಠವೇ ಪದವಿ, ಇಂಜಿನಿಯರಿಂಗ್ ವರೆಗೆ ಉಚಿತ ಶಿಕ್ಷಣ ಮತ್ತು ವಸತಿ ಕಲ್ಪಿಸಿದೆ. ಉದ್ಯೋಗ ಪಡೆದು ಸ್ವಾವಲಂಭಿಯಾಗಿ ರೂಪುಗೊಳ್ಳುವವರೆಗೂ ಮಠವೇ ನೆರವು ನೀಡುತ್ತಿದೆ. ಸಂತ್ರಸ್ತರಿಗೆ ನೆರವು, ಕೊರೋನ ಸಂದರ್ಭದಲ್ಲಿ ಧವಸ, ದಾನ್ಯಗಳ ಕಿಟ್ ವಿತರಣೆ ಸೇರಿದಂತೆ ಹತ್ತು ಹಲವು ಮಾರ್ಗದಲ್ಲಿ ಭೋವಿ, ಒಡ್ಡರ ಸಮುದಾಯವನ್ನ ಪ್ರಗತಿಯತ್ತ ಕೊಂಡೊಯ್ಯುವಲ್ಲಿ ಶ್ರೀಮಠ ನಿರಂತರವಾಗಿ ಪರಿಶ್ರಮ ಪಡುತ್ತಿದೆ ಎಂದು ಹೇಳಿದರು.
ಭೂವಿ ಸಮಾಜದ ಜಿಲ್ಲಾಧ್ಯಕ್ಷ ಮಾಣಿಕರಾವ ವಾಡೇಕರ್, ಬೀದರ್ ತಾಲೂಕಾಧ್ಯಕ್ಷ ಪುಂಢಲಿಕರಾವ ನಿಂಗದಳ್ಳಿಕರ್, ಔರಾದ್ ತಾಲೂಕಾಧ್ಯಕ್ಷ ರಾಜಕುಮಾರ ಶಿಂಧೆ, ಹುಮನಾಬಾದ್ ತಾಲೂಕಾಧ್ಯಕ್ಷ ಸಂಜು ವಾಡೇಕರ್, ಸಮಾಜದ ಹೋರಾಟಗಾರ ಸಂತೋಷ ಏಣಕುರ್, ಚಿತ್ರಾ, ನಾಗನಥ ಸಾಡಂಗಲೆ, ರಾಹುಲ ವಾಡೇಕರ್, ಸಂಜುಕುಮಾರ ಒಡೆಯರ್, ಗಿರೀಶ ಒಡೆಯರ್ ಸೇರಿದಂತೆ ಅನೇಕರು ಪತ್ರಿಕಾಗೋಷ್ಟಿಯಲ್ಲಿದ್ದರು.