ಜಿಲ್ಲಾ ಕಾರಾಗೃಹದಲ್ಲಿ ಮಹಿಳಾ ಕೈದಿಗಳಿಗೆÀ ಟೇಲರಿಂಗ್ ತರಬೇತಿ
ಬೀದರ: ನಗರದ ಜಿಲ್ಲಾ ಕಾರಾಗೃಹದಲ್ಲಿ ಜುಲೈ 18 ರಂದು ಕಾರ್ಮೇಲ್ ಸೇವಾ ಟ್ರಸ್ಟ ವತಿಯಿಂದ ಕಾರ್ಯಗಾರವನ್ನು ಹಮ್ಮಿಕೊಳ್ಳಲಾಯಿತು.
ಈ ಸಂದರ್ಭದಲ್ಲಿ ತಾವುಗಳು ನಾಲ್ಕು ಗೋಡೆಗಳ ಮಧ್ಯೆ ಇರುವುದರಿಂದ ತಮಗೆ ತುಂಬಾ ಕಾಲಾವಕಾಶವಿದೆ. ಕಾರ್ಯಗಾರದ ಸದುಪಯೋಗ ಪಡೆದುಕೊಂಡು, ಬಿಡುಗಡೆಯಾದ ನಂತರ ಸ್ವಾವಲಂಬಿಯಾಗಿ ಜೀವಿಸಬಹುದೆಂದು ಕಾರ್ಯಾಗಾರವನ್ನು ಉದ್ಘಾಟಿಸಿದ ಸಿದ್ರಾಮಪ್ಪ ಕನಕಟ್ಟೆ ಹಿರಿಯ ದಿವಾಣಿ ನ್ಯಾಯಧೀಶರು, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಕಾರ್ಯದರ್ಶಿಯವರು ಕಾರ್ಯಗಾರವನ್ನು ಉದ್ದೇಶಿಸಿ ಮಾತನಾಡಿದರು ಹಾಗೂ ಮಹಿಳಾ ಕೈದಿಗಳಿಗೆ ಕಾನೂನು ಸಲಹೆಯನ್ನು ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಜಿಲ್ಲಾ ಕಾರಾಗೃಹದ ಜೈಲ್ ಅಧಿಕಾರಿಯಾದಂತಹ ಟಿ.ಎನ್. ಭಜಂತ್ರಿಯವರು ಮಾತನಾಡಿ, ಕಾರ್ಮೇಲ್ ಸೇವಾ ಸಂಸ್ಥೆಯು ಈ ಕಾರ್ಯಗಾರ ನಡೆಸುತ್ತಿರುವುದು ಇದೊಂದು ಉತ್ತಮ ಸೇವೆಯಾಗಿದ್ದು, ಮಹಿಳಾ ಕೈದಿಗಳು ಇದರ ಸದುಪಯೋಗವನ್ನು ಪಡೆದುಕೊಳ್ಳಬೇಕೆಂದು ಮಹಿಳಾ ಕೈದಿಗಳಿಗೆ ಸಲಹೆ ನೀಡಿದರು.
ಕಾರ್ಮೇಲ್ ಸೇವಾ ಟ್ರಸ್ಟ್ ನಿರ್ದೇಶಕರಾದ ಸಿಸ್ಟರ್ ಕ್ರಿಸ್ಟಿನ್ ಮಿಸ್ಕಿತ್ ಅವರು ಮಹಿಳಾ ಕೈದಿಗಳು ಬಿಡುಗಡೆಯಾದ ನಂತರ ಅವರ ಕುಟುಂಬದ ಪುನರ್ ವಸತಿಗಾಗಿ ಈ ಕಾರ್ಯಗಾರವನ್ನು ನಡೆಸಲಾಗುತ್ತಿದೆ. ತಾವು ಬಿಡುಗಡೆಯಾದ ನಂತರ ಬಟ್ಟೆಗಳನ್ನು ಹೊಲಿಯುವುದರ ಮುಖಾಂತರ ಜನರಿಗೆ ಸೇವೆ ನೀಡಬಹುದೆಂದು ಹೇಳಿದರು.
ಈ ಕಾರ್ಯಕ್ರಮದಲ್ಲಿ ಸಿದ್ದಪ್ಪ ಪಾಟೀಲ ಸೆರೆಮನೆ ಅಧಿಕಾರಿ, ಪೋಲಿಸ ಸಿಬ್ಬಂದಿಯವರು ಮತ್ತು ಸಿಸ್ಟರ್ ರೀತಾ, ಸಿಸ್ಟರ್ ಪ್ರೀಯಾ , ಸಮಾಜ ಸೇವಕರಾದ ಸೂರ್ಯಕಾಂತ ಹಾಗೂ ಕಾರ್ಮೇಲ್ ಸೇವಾ ಟ್ರಸ್ಟಿನ ಸಿಬ್ಬಂದಿ ವರ್ಗದವರು ಭಾಗವಹಿಸಿದರು.